ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ!
ಆರ್‌ಸಿಬಿ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದೆ. ಪ್ರತಿ ಬಾರಿ ಕಪ್ ನಮ್ದೆ ಅನ್ನೋ ಘೋಷಣೆ ಇದ್ದೇ ಇರುತ್ತೆ. ಪ್ರತಿ ಭಾರಿ ಕೈತಪ್ಪಿದಾಗ ಮುಂದಿನ ಆವೃತ್ತಿಯಲ್ಲಿ ಮತ್ತೆ ಘೋಷಣೆ ಆರಂಭಗೊಳ್ಳುತ್ತಿತ್ತು. ಮಹಿಳಾ ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಸಂಭ್ರಮ ಹಂಚಿಕೊಂಡ ಕನ್ನಡತಿ ಶೇಯಾಂಕ ಪಾಟೀಲ್ ಈ ಸಲ ಕಪ್ ನಮ್ದಾಗಿದೆ ಎಂದಿದ್ದಾರೆ.
ದೆಹಲಿ(ಮಾ.17) ಈ ಸಲ ಕಪ್ ನಮ್ದೆ, ಪ್ರತಿ ಭಾರಿ ಆರ್‌ಸಿಬಿ ಅಭಿಮಾನಿಗಳ ಈ ಘೋಷಣೆ ಜನಪ್ರಿಯವಾಗಿದೆ. ಆದರೆ ಅಂತಿಮ ಹಂತದಲ್ಲಿ ನಿರಾಸೆಯೊಂದಿಗೆ ಮರಳುವ ಅಭಿಮಾನಿಗಳು ಮತ್ತೆ ಮುಂದಿನ ಆವೃತ್ತಿಯಲ್ಲೇ ಇದೇ ಘೋಷಣೆ ಮೊಳಗಿಸಿ ತಂಡವನ್ನು ಹುರಿದುಂಬಿಸುತ್ತಿದ್ದರು. ಇದೀಗ ಮಹಿಳಾ ಆರ್‌ಸಿಬಿ ತಂಡ ಟ್ರೋಫಿ ಗೆದ್ದಿದೆ. ಗೆಲುವಿನ ಬಳಿಕ ಮೈದಾನದಲ್ಲಿ ಸಂಭ್ರಮ ಹಂಚಿಕೊಂಡ ತಂಡದಲ್ಲಿರುವ ಸ್ಟಾರ್ ಕನ್ನಡತಿ ಶ್ರೇಯಾಂಕಾ ಪಾಟೀಲ್, ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತಾ ಹೇಳುತ್ತಾರೆ. ಇದೀಗ ನಾವು ಕಪ್ ಗೆದ್ದಿದ್ದೇವೆ ಎಂದಿದ್ದಾರೆ.
ಮಹಿಳಾ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡಿ 8 ವಿಕೆಟ್ ಗಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಟ್ರೋಫಿ ಗೆದ್ದುಕೊಂಡಿದೆ. ಅದ್ಭುತ ಗೆಲುವಿನಿಂದ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರೆ. ಮಹಿಳೆಯರ ತಂಡ ಗೆದ್ದಾಯ್ತು, ಈ ಬಾರಿ ಪುರುಷರ ತಂಡವೂ ಗೆಲ್ಲಲಿದೆ ಅನ್ನೋ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಶ್ರೇಯಾಂಕಾ ಪಾಟೀಲ್ ನೀಡಿದ ಈ ಸಲ ಕಪ್ ಗೆದ್ದಿದ್ದೇವೆ ಅನ್ನೋ ಹೇಳಿಕೆ ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ.
WPL FINAL 2024 ಬೆಂಗಳೂರು ವನಿತೆಯರ ಹೋರಾಟಕ್ಕೆ ಫಲ, ಆರ್‌ಸಿಬಿಗೆ ಬಂತು ಚೊಚ್ಚಲ ಟ್ರೋಫಿ!
ಫೈನಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ವಿಶೇಷ ಅಂದರೆ ಗರಿಷ್ಠ ರನ್ ಸಿಡಿಸಿದ ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಶ್ರೇಯಾಂಕ ಪಾಟೀಲ್ ಅದ್ಬುತ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಗೆಲುವಿನ ಹಿರಿಮೆ ತಂದುಕೊಟ್ಟಿದೆ. ಇದರ ಜೊತೆಗೆ ಕಪ್ ನಮ್ದೆ ಕನ್ನಡದ ಘೋಷಣೆಯನ್ನು ದೆಹಲಿಯಲ್ಲಿ ಮೊಳಗಿಸಿದ್ದಾರೆ. ಮಹಿಳೆಯರ ಐಪಿಎಲ್‌ನಲ್ಲಿ ಕಪ್ ನಮ್ದಾಗಿದೆ. ಇದೀಗ ಪುರುಷರ ಕಪ್ ನಮ್ಮದಾಗಬೇಕಿದೆ ಅನ್ನೋ ಕೂಗು ಅಭಿಮಾನಿಗಳು ಮೊಳಗಿಸಿದ್ದಾರೆ.
ಮಹಿಳಾ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬ್ಯಾಟಿಂಗ್ ಮಾಡಿತ್ತು. ಆದರೆ ಆರ್‌ಸಿಬಿ ಬೌಲಿಂಗ್ ದಾಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆರಂಭಿಕರಿಬ್ಬರು ಹೋರಾಟ ನೀಡಿದರೆ, ಉಳಿದವರಿಗೆ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ 113 ರನ್‌ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್ ಆಯಿತು. ಇದರೊಂದಿಗೆ ಆರ್‌ಸಿಬಿ 114 ರನ್ ಟಾರ್ಗೆಟ್ ಪಡೆದುಕೊಂಡಿತು.
IPL 2024 ಕಿಚ್ಚ ಸುದೀಪ್ ಯಾಕೆ ಆ ಇಡ್ಲಿ ಬೇಡ ಅಂದ್ರು ಅರ್ಥ ಆಯ್ತಾ?
ಟಾರ್ಗೆಟ್ ಚೇಸ್ ಮಾಡಿದ ಆರ್‌ಸಿಬಿಗೆ ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿ ಡಿವೈನ್ ಆರಂಭ ನೆರವಾಯಿತು. ಬಳಿಕ ಎಲ್ಲಿಸ್ ಪೆರಿ, ರಿಚಾ ಘೋಷ್ ಹೋರಾಟದಿಂದ ಆರ್‌ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಭರ್ಜರಿ ಗೆಲುವು ಕಂಡಿತು. ಟ್ರೋಫಿ ಗೆದ್ದುಕೊಂಡಿತು.