ನಾಯಕಿಯ ಮಂಧನಾ ಮುತ್ತಿನಂಥ ಮಾತು: ಗೆಲುವಿನ ಬಳಿಕ ಟ್ರೋಫಿ ವಿತರಣೆ ವೇಳೆ ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾ ಈ ಸಲ ಕಪ್ ನಮ್ದು ಎಂದು ಹೇಳಿದರು. ಮೈದಾನದಲ್ಲಿದ್ದ ಆರ್‌ಸಿಬಿಯ ಇತರ ಆಟಗಾರ್ತಿಯರು ಕೂಡಾ ಕಪ್ ನಮ್ದೇ ಎಂದು ಕುಣಿದಾಡಿದರು.
ಬೆಂಗಳೂರು(ಮಾ.18): ‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಆರ್‌ಸಿಬಿಯ ಕೋಟ್ಯಂತರ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದೆ. ದೀರ್ಘಕಾಲದಿಂದ ಪುರುಷರ ತಂಡಕ್ಕೆ ಗಗನ ಕುಸುಮವಾಗಿದ್ದ ಟ್ರೋಫಿಯನ್ನು ಈ ಬಾರಿ ಮಹಿಳಾ ತಂಡ ಮುಡಿಗೇರಿಸಿಕೊಂಡಿದೆ. 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಂದ್ಯ ಆರಂಭವಾದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಬ್ಬರ ಗಮನಿಸಿದರೆ ಪಂದ್ಯವನ್ನು ಆರ್‌ಸಿಬಿ ಈ ರೀತಿ ಏಕಮುಖವಾಗಿ ಗೆಲ್ಲಲಿದೆ ಎಂದು ಯಾರೂ ಭಾವಿಸಿರಲಿಕ್ಕಿಲ್ಲ. ಮೊದಲ ಪವರ್ ಪ್ಲೇನ 6 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ವಿಕೆಟ್ ನಷ್ಟವಿಲ್ಲದೇ 64 ಬಾರಿಸಿತ್ತು. ಆದರೆ ಪವರ್-ಪ್ಲೇ ಬಳಿಕ ಮ್ಯಾಜಿಕ್ ಮಾಡಿದ ಆರ್‌ಸಿಬಿ ತಂಡ ಡೆಲ್ಲಿಯನ್ನು ಕೇವಲ 113 ರನ್‌ಗೆ ನಿಯಂತ್ರಿಸಿತು. ಸಣ್ಣ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ಆರ್‌ಸಿಬಿ 19.3 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ವಿಜಯಮಾಲೆಯನ್ನು ಕೊರಳಿಗೇರಿಸಿಕೊಂಡಿತು.
ನಾಯಕಿಯ ಮಂಧನಾ ಮುತ್ತಿನಂಥ ಮಾತು: ಗೆಲುವಿನ ಬಳಿಕ ಟ್ರೋಫಿ ವಿತರಣೆ ವೇಳೆ ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾ ಈ ಸಲ ಕಪ್ ನಮ್ದು ಎಂದು ಹೇಳಿದರು. ಮೈದಾನದಲ್ಲಿದ್ದ ಆರ್‌ಸಿಬಿಯ ಇತರ ಆಟಗಾರ್ತಿಯರು ಕೂಡಾ ಕಪ್ ನಮ್ದೇ ಎಂದು ಕುಣಿದಾಡಿದರು.
ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ!
ಹೌದು, "ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಳಗ ಅತಿದೊಡ್ಡ ನಂಬಿಗಸ್ಥ ಫ್ಯಾನ್ ಬೇಸ್. ಅವರ ಬೆಂಬಲವಿಲ್ಲದೇ ನಾವು ಇಲ್ಲಿವರೆಗೂ ಬರಲು ಸಾಧ್ಯವಾಗುತ್ತಿರಲಿಲ್ಲ. ಆರ್‌ಸಿಬಿ ಎಂದ ತಕ್ಷಣ ಒಂದು ಮಾತು ಯಾವಾಗಲೂ ಕೇಳಿ ಬರುತ್ತದೆ. ಅದೆಂದರೆ 'ಈ ಸಲ ಕಪ್ ನಮ್ದೇ'. ಆದರೆ ನಾನೀನ ಹೇಳುತ್ತೇನೆ. ಅದು ಈ ಸಲ ಕಪ್ ನಮ್ದೇ ಅಲ್ಲ, ಈ ಸಲ ಕಪ್ ನಮ್ದು" ಎಂದು ಹೇಳುವ ಮೂಲಕ ಕನ್ನಡಿಗ ಮನ ಗೆದ್ದಿದ್ದಾರೆ.
WPL Final 2024 ಬೆಂಗಳೂರು ವನಿತೆಯರ ಹೋರಾಟಕ್ಕೆ ಫಲ, ಆರ್‌ಸಿಬಿಗೆ ಬಂತು ಚೊಚ್ಚಲ ಟ್ರೋಫಿ!
ಆಗ ನಿರೂಪಕಿ ಇದನ್ನು ಹೇಳಲು ಸಾಕಷ್ಟು ಪ್ರಾಕ್ಟೀಸ್ ಮಾಡಿದ್ದೀರ ಎನಿಸುತ್ತದೆ ಎನ್ನುತ್ತಾರೆ. ಆಗ ಸ್ಮೃತಿ ಮಂಧನಾ, "ಕನ್ನಡ ನನ್ನ ಮಾತೃ ಭಾಷೆಯಲ್ಲ, ಹಾಗಾಗಿ ಸ್ಪಲ್ಪ ಕಷ್ಟ ಎನಿಸಿತು. ಆದರೆ ನಮಗೆ ಅಭಿಮಾನಿಗಳೇ ಮುಖ್ಯ. ಅವರು ಈ ಕ್ಷಣಕ್ಕಾಗಿ ಸಾಕಷ್ಟು ವರ್ಷಗಳಿಂದ ಕಾಯುತ್ತಿದ್ದರು ಎಂದು ಮಂಧನಾ ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
