Asianet Suvarna News Asianet Suvarna News

Team India Cricketer ದಿನೇಶ್ ಕಾರ್ತಿಕ್ ಆಡಿದ್ದು ಒಬ್ಬಿಬ್ಬರು ನಾಯಕರ ಬಳಿಯಲ್ಲ..!

* ಟೀಂ ಇಂಡಿಯಾ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ ವಿಶೇಷ ದಾಖಲೆ
* ಬರೋಬ್ಬರಿ 10 ನಾಯಕರ ಅಡಿಯಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿರುವ ಡಿಕೆ
* ಐಪಿಎಲ್‌ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್ ಮಾಡಿರುವ ಡಿಕೆ ಬಾಸ್

Rahul Dravid to Rishabh Pant Veteran Cricketer Dinesh Karthik has played with 10 captains kvn
Author
Bengaluru, First Published Jun 25, 2022, 12:34 PM IST

ಬೆಂಗಳೂರು(ಜೂ.25): ಡಿಕೆ ಅಂದ್ರೆ ದಿನೇಶ್​ ಕಾರ್ತಿಕ್​​. 37ರ ಡಿಕೆ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಯಾರನ್ನೇ ಕೇಳಿದ್ರೂ ಇವರನ್ನ ಡಿಕೆ ಬದಲು ಡಿಕೆ ಬಾಸ್ ಅಂತಾರೆ. ಅಷ್ಟರ ಮಟ್ಟಿಗೆ ಈ ಸೀನಿಯರ್ ಕ್ರಿಕೆಟರ್​ ಫೇಮಸ್​​. 2022ರ ಐಪಿಎಲ್​​​ನಲ್ಲಿ ಅಬ್ಬರಿಸಿ, ಮತ್ತೆ ಟೀಂ​ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಕಮ್​ಬ್ಯಾಕ್ ಸರಣಿಯಲ್ಲಿ ಘರ್ಜಿಸಿ, ನನ್ನ ಕೆರಿಯರ್​ ಇನ್ನೂ ಕೊನೆಗೊಂಡಿಲ್ಲ. ಪಿಕ್ಚರ್ ಅಭಿ ಬಾಕಿ ಹೇ ಅನ್ನೋ ಸ್ಟ್ರಾಂಗ್ ಮೆಸೇಜ್​ ಅನ್ನ ಡಿಕೆ ಬಾಸು ರವಾನಿಸಿದ್ದಾರೆ.

ಇಂತಹ ಡಿಕೆ 37ರ ವಯಸ್ಸಿನಲ್ಲಿ ಮತ್ತೆ ಟೀಂ ಇಂಡಿಯಾ (Team India) ಪರ ಬ್ಲೂ ಜೆರ್ಸಿ ತೊಟ್ಟಾಗಲೇ ಕ್ರಿಕೆಟ್​​ ಜಗತ್ತು ಒಂದು ಕ್ಷಣ ದಂಗಾಗಿತ್ತು. ಯಾಕಂದ್ರೆ ಕ್ರಿಕೆಟ್​ ಕೆರಿಯರ್ ಕೊನೆಗೊಳ್ಳುವ ಹೊತ್ತಿನಲ್ಲಿ, 2ನೇ ಹಂತದ ವೃತ್ತಿ ಜೀವನ ಆರಂಭಿಸಿ ಶಾಕ್​ ನೀಡಿದ್ರು. ಆದ್ರೆ ಇದಕ್ಕಿಂತ ಬಿಗ್ ಶಾಕಿಂಗ್​​​​ ನ್ಯೂಸ್ ಇನ್ನೊಂದು ಇದೆ. ಇದನ್ನ ಕೇಳಿದ್ರೆ  ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ಳೋದು ಗ್ಯಾರಂಟಿ. ಅಂತಹ ಸರ್​ಪ್ರೈಸ್​​​ ಡಿಕೆ ವಿಚಾರದಲ್ಲಿ ನಡಿದಿದೆ.

10 ನಾಯಕರ ಅಡಿಯಲ್ಲಿ ಆಡಿದ ಕಾರ್ತಿಕ್: 

ಹೌದು, ಇದನ್ನ ನಿಮಗೆ ನಂಬಲು ಆಗದಿರಬಹುದು. ಆಶ್ಚರ್ಯನೂ ಅನ್ನಿಸಬಹುದು. ಕ್ರಿಕೆಟ್​ ಜಗತ್ತಿನಲ್ಲಿ ಇಂತಹದು ನಡೆಯುತ್ತಾ ಅನ್ನೋ ಪ್ರಶ್ನೆನೂ ಕಾಡಬಹುದು. ಆದ್ರೆ ನಿಮಗೆ ಏನೇ ಅನ್ನಿಸಿದ್ರೂ ಇದು ಸತ್ಯ. ಯಾಕಂದ್ರೆ ದಿನೇಶ್​ ಕಾರ್ತಿಕ್ ಅಂತಹ ಅಚ್ಚರಿ ಮತ್ತು ಎಲ್ಲರೂ ದಂಗಾಗುವ ಘಟನೆಯ ಕಾರಣೀಭೂತ. 2004ರಲ್ಲಿ ತಮಿಳುನಾಡಿನ ದಿನೇಶ್​ ಕಾರ್ತಿಕ್ (Dinesh Karthik) ಅಂತಾರಾಷ್ಟ್ರೀಯ ಕ್ರಿಕೆಟ್​​​​​​​​​ಗೆ ಡೆಬ್ಯು ಮಾಡಿದ್ರು. ಮೂರು ಮಾದರಿಯಲ್ಲಿ ಆಡಿದ್ದಾರೆ. ಆಗೊಂದು ಈಗೊಂದು ಚಾನ್ಸ್​ ಗಿಟ್ಟಿಸಿಕೊಂಡ ಡಿಕೆ ಈಗಲೂ ತಂಡದಲ್ಲಿದ್ದಾರೆ. ಇದಕ್ಕಿಂತ ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇವರು ತಮ್ಮ 18 ವರ್ಷಗಳ ಕ್ರಿಕೆಟ್​ ಜೆರ್ನಿಯಲ್ಲಿ ಬರೋಬ್ಬರಿ 10 ನಾಯಕರ ಅಡಿಯಲ್ಲಿ ಆಡಿದ ಖ್ಯಾತಿಗೆ ಭಾಜನರಾಗಿದ್ದಾರೆ.

ಹೌದು, ಡಿಕೆ ಬಾಸು ಕ್ರಿಕೆಟ್​ ಬದುಕಿನಲ್ಲಿ 10 ನಾಯಕರುಗಳನ್ನ ಕಂಡಿದ್ದಾರೆ. 2004ರಲ್ಲಿ ರಾಹುಲ್​ ದ್ರಾವಿಡ್​​​​ರಿಂದ (Rahul Dravid) ಹಿಡಿದು ಈಗಿನ ರಿಷಭ್​ ಪಂತ್​​ (Rishabh Pant) ಕ್ಯಾಪ್ಟನ್ಸಿ ಯಲ್ಲಿ ಇವರು ಆಡಿದ್ದಾರೆ. ಇವರಷ್ಟೇ ಅಲ್ಲದೇ ಸೌರವ್​ ಗಂಗೂಲಿ, ಅನಿಲ್​ ಕುಂಬ್ಳೆ, ವೀರೇಂದ್ರ ಸೆಹ್ವಾಗ್​​​, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಖ್ಯಾತಿ ಇವರದ್ದು.

ಪಾಂಡ್ಯ ನಾಯಕತ್ವದಲ್ಲಿ ಆಡಿದ್ರೆ ಸಂಖ್ಯೆ 11ಕ್ಕೆ ಏರಿಕೆ :

ಈಗಾಗ್ಲೇ ಒಟ್ಟು 10 ನಾಯಕರ ಕೆಳಗೆ ಆಡಿದ ಡಿಕೆ, ಈ ಸಂಖ್ಯೆಯನ್ನ 11ಕ್ಕೇರಿಸಿಕೊಳ್ಳುವ ಸಾಧ್ಯತೆ ದಿಟ್ಟವಾಗಿದೆ. ಜೂನ್​ 26 ಮತ್ತು 28ರಂದು ಭಾರತ ತಂಡ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನಾಡಲಿದೆ. ಹಾರ್ದಿಕ್​​​​​​​ ಪಾಂಡ್ಯ(Hardik Pandya) ತಂಡವನ್ನ ಮುನ್ನಡೆಸಲಿದ್ದಾರೆ. ಡಿಕೆ ಆಡೋದು ಪಕ್ಕಾ ಆಗಿದ್ದು, ಅಲ್ಲಿಗೆ 11 ಕ್ಯಾಪ್ಟನ್​ಗಳ ಕೈಕೆಳಗೆ  ಆಡಿದಂತಾಗಲಿದೆ.

ENG vs IND ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ದಿನೇಶ್ ಕಾರ್ತಿಕ್‌ 2004ರಿಂದೀಚೆಗೆ ಭಾರತ ಪರ 26 ಟೆಸ್ಟ್, 94 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 1,025, 1752 ಹಾಗೂ 491 ರನ್‌ ಗಳಿಸಿದ್ದಾರೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬಲ್ಲ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ

Follow Us:
Download App:
  • android
  • ios