ಟೀಂ ಇಂಡಿಯಾಗೆ ಮತ್ತೊಂದು ಸರ್ಜರಿ, ಕೋಚ್ ರಾಹುಲ್ ದ್ರಾವಿಡ್ ಸ್ಥಾನಕ್ಕೆ ಲಕ್ಷ್ಮಣ್ ನೇಮಕ ಸಾಧ್ಯತೆ!
ಟಿ20 ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಹಂತ ಹಂತವಾಗಿ ಬದಲಾವಣೆಯಾಗುತ್ತಿದೆ. ಇದೀಗ ಮತ್ತೊಂದು ಸರ್ಜರಿಗೆ ಬಿಸಿಸಿಐ ತಯಾರಿ ಮಾಡಿಕೊಳ್ಳುತ್ತಿದೆ.

ಮುಂಬೈ(ಜ.02): ಟೀಂ ಇಂಡಿಯಾದಲ್ಲಿ ಬಿಸಿಸಿಐ ಈಗಾಗಲೇ ಹಲವು ಬದಲಾವಣೆ ಮಾಡಿದೆ. ಟಿ20 ವಿಶ್ವಕಪ್ ಸೋಲಿನ ಬಳಿಕ ಬಿಸಿಸಿಐ ನಡೆ ಬದಲಾಗಿದೆ. ಇದೀಗ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವಧಿ ಬಳಿಕ ಹೊಸ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿ ವರೆಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಬಳಿಕ ರಾಹುಲ್ ದ್ರಾವಿಡ್ ಅವಧಿ ಅಂತ್ಯವಾಗಲಿದೆ. ದ್ರಾವಿಡ್ ಬದಲು ಈ ಸ್ಥಾನಕ್ಕೆ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ನೂತನ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಉತ್ಸಕುತೆ ತೋರಿದೆ.
ರಾಹುಲ್ ದ್ರಾವಿಡ್ ಮತ್ತೊಂದು ಅವಧಿಗೆ ಕೋಚ್ ಆಗಿ ಮುಂದುವರಿಯಲು ಆಸಕ್ತಿ ತೋರಿಲ್ಲ. ಮೊದಲ ಬಾರಿಗೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಲು ನಿರಾಸಕ್ತಿ ತೋರಿದ್ದರು. ಆದರೆ ಹಲವರ ಒತ್ತಾಯದ ಮೇರೆಗೆ ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಎರಡನೇ ಅವಧಿಗೆ ಕೋಚ್ ಆಗಿ ಮುಂದುವರಿಯಲು ದ್ರಾವಿಡ್ ಮನಸ್ಸು ಮಾಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಬಿಸಿಸಿಐ ಈ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಆಯ್ಕೆ ಮಾಡಲು ಮನಸ್ಸು ಮಾಡಿದೆ.
ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?
ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2022ರ ಜೂನ್ ತಿಂಗಳಲ್ಲಿನ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಏಷ್ಯಾಕಪ್ ಟೂರ್ನಿ ವೇಳೆಯೂ ಲಕ್ಷ್ಮಣ್ ಟೀಂ ಇಂಡಿಯಾ ಜವಾಬ್ದಾರಿ ವಹಿಸಿಕೊಂಡಿದ್ದರು.
ಅಂಡರ್ 19 ವಿಶ್ವಕಪ್ ಟೂರ್ನಿ ವೇಳೆ ಜ್ಯೂನಿಯರ್ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ದ್ರಾವಿಡ್ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಸೂಕ್ತ ಎಂದು ಬಿಸಿಸಿಐ ನಿರ್ಧರಿಸಿದೆ. ನವೆಂಬರ್ 2021ರಲ್ಲಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡರು. ಹಿಂದಿನ ಕೋಚ್ ರವಿ ಶಾಸ್ತ್ರಿ ನಿರ್ಗಮನದ ಬಳಿಕ ದ್ರಾವಿಡ್ ಯುಗ ಆರಂಭಗೊಂಡಿತು. ಆದರೆ ಪ್ರಮುಖ ಪ್ರಶಸ್ತಿ ಪಡೆದುಕೊಳ್ಳಲು ದ್ರಾವಿಡ್ ಮಾರ್ಗದರ್ಶನ ವಿಫಲಗೊಂಡಿತ್ತು.
ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್ ವಾರ್ಡ್‌ಗೆ ಶಿಫ್ಟ್..!
ಟೆಸ್ಟ್, ಏಕದಿನದಲ್ಲಿ ರೋಹಿತ್ ನಾಯಕತ್ವ ಅಬಾಧಿತ
ರೋಹಿತ್ ಶರ್ಮಾ ಭಾರತ ತಂಡದ ಏಕದಿನ ಹಾಗೂ ಟೆಸ್ಟ್ ನಾಯಕರಾಗಿ ಮುಂದುವರಿಯಲಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ಅವರ ನಾಯಕತ್ವದ ಬಗ್ಗೆ ಬಿಸಿಸಿಐಗೆ ಯಾವುದೇ ಅಸಮಾಧನವಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಭಾನುವಾರ ನಡೆದ ಪರಾಮರ್ಶೆ ಸಭೆಯಲ್ಲಿ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಆಗಲಿ, ಕೋಚ್ ರಾಹುಲ್ ದ್ರಾವಿಡ್ ಆಗಲಿ ರೋಹಿತ್‌ರನ್ನು ಬದಲಿಸುವ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವುದು ಹಾಗೂ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಬಗ್ಗೆಯಷ್ಟೇ ಚರ್ಚೆ ಆಯಿತು. ಈ ಎರಡೂ ಹೊಣೆಯನ್ನು ರೋಹಿತ್ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎನ್ನುವ ವಿಶ್ವಾಸ ಬಿಸಿಸಿಐಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.