ಅಂಡರ್ 14 ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಪುತ್ರನ ಮಿಂಚಿನ ಪ್ರದರ್ಶನ

First Published 27, Jul 2018, 8:20 PM IST
Dravids Son Produces Match-Winning Performance in School Cricket
Highlights

ತಂದೆಯಂತೆ ಮಗ ಕೂಡ ತಂಡವನ್ನ ಗೆಲುವಿನ ದಡ ಸೇರಿಸುತ್ತಿದ್ದಾನೆ. ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅಲ್ರೌಂಡರ್ ಪ್ರದರ್ಶನದ ಮೂಲಕ ಗೆಲುವಿನ ರೂವಾರಿಯಾಗಿದ್ದಾರೆ. ದ್ರಾವಿಡ್ ಪುತ್ರನ ಪ್ರದರ್ಶನ ಹೇಗಿತ್ತು? ಇಲ್ಲಿದೆ ವಿವರ.

ಬೆಂಗಳೂರು(ಜು.27): ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರ ಪುತ್ರರ ಇದೀಗ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿ ಸದ್ದು ಮಾಡಿದ್ದರು. ಇದರ ಬೆನ್ನಲ್ಲೇ, ಇದೀಗ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಮಿಂಚಿನ ಪ್ರದರ್ಶನ ನೀಡಿದ್ದಾರೆ.

ಅಂಡರ್ 14 ಕ್ರಿಕೆಟ್ ಟೂರ್ನಿಯಲ್ಲಿ ದ್ರಾವಿಡ್  ಪುತ್ರ ಸಮಿತ್ ದ್ರಾವಿಡ್ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ 51 ರನ್ ಸಿಡಿಸಿದರೆ, ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
 
ಮಲ್ಯ ಅದಿತಿ ಅಂತಾರಾಷ್ಟ್ರೀಯ  ಶಾಲಾ ತಂಡದ ಆಲ್ರೌಂಡರ್ 12 ವರ್ಷದ ಸಮಿತ್ ದ್ರಾವಿಡ್, ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ವಿರುದ್ಧ ಮಿಂಚಿನ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಸಮಿತ್ ದ್ರಾವಿಡ್ ಪ್ರದರ್ಶನದಿಂದ ಮಲ್ಯ ಆದಿತಿ ಅಂತಾರಾಷ್ಟ್ರೀಯ ಶಾಲಾ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

loader