ಗಂಗೂಲಿ, ಧೋನಿ ಕೊಹ್ಲಿಗೆ ಸಿಕ್ಕ ಪ್ರಶಂಸೆ ದ್ರಾವಿಡ್‌ಗೆ ಸಿಗಲಿಲ್ಲ; ಗಂಭೀರ್!
ಭಾರತದ ಯಶಸ್ವಿ ನಾಯಕರ ಮಾತು ಬಂದಾಗ ಕಪಿಲ್, ಗಂಗೂಲಿ, ಧೋನಿ ಇದೀಗ ಕೊಹ್ಲಿ ಅನ್ನೋ ಉತ್ತರ , ಚರ್ಚೆ ಸಾಮಾನ್ಯ. ಆದರೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಪ್ರಸ್ತಾಪವಾಗುದೇ ಇಲ್ಲ. ಈ ಕುರಿತು ಮಾಜಿ ಕ್ರಿಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಬೇಸರ ತೋಡಿಕೊಂಡಿದ್ದಾರೆ.
ದೆಹಲಿ(ಜೂ.23): ಟೀಂ ಇಂಡಿಯಾ ಹಲವು ದಿಗ್ಗಜ ನಾಯಕರನ್ನು ಕಂಡಿದೆ. ಶ್ರೇಷ್ಠ ನಾಯಕರ ಪೈಕಿ ರಾಹುಲ್ ದ್ರಾವಿಡ್ ಕೂಡ ಮುಂಚೂಣಿಯಲ್ಲಿದ್ದಾರೆ. ಆದರೆ ನಾಯಕತ್ವದ ಮಾತು ಬಂದಾಗ ದ್ರಾವಿಡ್ ಹೆಸರು ಪ್ರಸ್ತಾಪವಾಗುವುದೇ ಇಲ್ಲ. ಏಕದಿನದಲ್ಲಿ ಗೆಲುವಿನ ಸರಾಸರಿ 56, ಟೆಸ್ಟ್‌ನಲ್ಲಿ 33 ಶೇಕಡಾ ಗೆಲುವಿನ ಸರಾಸರಿ ಹೊಂದಿರುವ ರಾಹುಲ್ ದ್ರಾವಿಡ್‌ಗೆ ಸಿಗಬೇಕಾದ ಪ್ರಶಂಸೆ, ಪ್ರಚಾರ ಸಿಗುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಮಾಡರ್ನ್ ಕ್ರಿಕೆಟ್‌ಗೆ ನನ್ನ ಸ್ಟ್ರೈಕ್ ರೇಟ್ ಸಾಲಲ್ಲ; ರಾಹುಲ್ ದ್ರಾವಿಡ್!
ನಾಯಕತ್ವ ಪ್ರಶಂಸೆಗೆ ರಾಹುಲ್ ದ್ರಾವಿಡ್ ಅರ್ಹರಾಗಿದ್ದಾರೆ. ಆದರೆ ಯಾರೂ ಕೂಡ ದ್ರಾವಿಡ್ ಮಾತೇ ಎತ್ತಲ್ಲ. ದ್ರಾವಿಡ್ ನಾಯಕನಾಗಿ 79 ಏಕದಿನದಿಂದ 42ರಲ್ಲಿ ಗೆಲುವು ಸಾಧಿಸಿದ್ದರೆ, 33 ಪಂದ್ಯ ಸೋತಿದ್ದಾರೆ. ಏಕದಿನದಲ್ಲಿ ಗೆಲವಿನ ಸರಾಸರಿ 56%. ಇನ್ನು 25 ಟೆಸ್ಟ್ ಪಂದ್ಯಗಳಿಂದ 8 ಗೆಲುವು 6 ಸೋಲು ಕಂಡಿದ್ದಾರೆ. ಗೆಲುವಿನ ಸರಾಸರಿ 32 ಶೇಕಡ.
ಬ್ಯಾಟಿಂಗ್, ಕೀಪಿಂಗ್, ನಾಯಕ; ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ದ್ರಾವಿಡ್!.
ತಂಡದ ಹೇಳಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್. 2003ರ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್, ಆರಂಭಿಕ, ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್, ಕೆಳಕ್ರಮಾಂಕ ಸೇರಿದಂತೆ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್, ಸ್ಲಿಪ್ ಫೀಲ್ಡರ್, ಸ್ಪಿನ್ನರ್ ಹೀಗೆ ಎಲ್ಲಾ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ ದ್ರಾವಿಡ್‌ಗೆ ಗೌರವ ಸಿಗಲೇ ಇಲ್ಲ ಎಂದು ಗಂಭೀರ್ ಹೇಳಿದ್ದಾರೆ.