Asianet Suvarna News Asianet Suvarna News

ಮಾಡರ್ನ್ ಕ್ರಿಕೆಟ್‌ಗೆ ನನ್ನ ಸ್ಟ್ರೈಕ್ ರೇಟ್ ಸಾಲಲ್ಲ; ರಾಹುಲ್ ದ್ರಾವಿಡ್!

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಧುನಿಕ ಕ್ರಿಕೆಟ್ ಕುರಿತು ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಮಾದರಿಯನ್ನೇ ಬದಲಾಯಿಸಿದ್ದಾರೆ. ಇದರ ನಡುವೆ ನನ್ನ ಏಕದಿನ ಸ್ಟ್ರೈಕ್ ರೇಟ್ ನೋಡಿದರೆ ಆಧುನಿಕ ಕ್ರಿಕೆಟ್‌ನಲ್ಲಿ ನನಗೆ ಉಳಿಗಾಲವಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ದ್ರಾವಿಡ್ ಮಾತುಗಳ ವಿವರ ಇಲ್ಲಿದೆ.

I wouldnt survived today if I batted the way I did in my days says rahul dravid
Author
Bengaluru, First Published Jun 9, 2020, 9:07 PM IST

ಬೆಂಗಳೂರು(ಜೂ.09): ಟೀಂ ಇಂಡಿಯಾ ಮಾಜಿ ನಾಯಕ, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಕ್ರಿಕೆಟ್ ಕುರಿತು ಹಲವು ರೋಚಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆಧುನಿಕ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೊಸ ಅರ್ಥ ನೀಡಿದ್ದಾರೆ. ಆದರೆ ಈ ಆಧುನಿಕ ಕ್ರಿಕೆಟ್‌ನಲ್ಲೂ ಚೇತೇಶ್ವರ ಪೂಜಾರರಂತ ಟೆಸ್ಟ್ ಕ್ರಿಕೆಟಿಗರ ಅವಶ್ಯತೆಯೂ ಅಷ್ಟೇ ಇದೆ ಎಂದು ದ್ರಾವಿಡ್ ಹೇಳಿದ್ದಾರೆ.

ಬ್ಯಾಟಿಂಗ್, ಕೀಪಿಂಗ್, ನಾಯಕ; ಎಲ್ಲಾ ಜವಾಬ್ದಾರಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ದ್ರಾವಿಡ್!

ಟೆಸ್ಟ್ ಕ್ರಿಕೆಟಿಗನಾಗಬೇಕು ಅನ್ನೋದು ನನ್ನ ಬಹದೊಡ್ಡ ಕನಸಾಗಿತ್ತು. ಟೆಸ್ಟ್ ಕ್ರಿಕೆಟ್‌ಗೆ ಬೇಕಾದ ಎಲ್ಲಾ ಕೌಶಲ್ಯವನ್ನು ಕರತಮಾಡಿಕೊಳ್ಳಲು ನಾನು ಪ್ರಯತ್ನಿಸಿದ್ದೆ. ಹಾಗಂತ ನನಗೆ ವಿರೇಂದ್ರ ಸೆಹ್ವಾಗ್ ರೀತಿ ಸ್ಫೋಟಕ ಬ್ಯಾಟಿಂಗ್ ಮಾಡುವುದು ಇಷ್ಟವಿಲ್ಲ ಎಂದರ್ಥವಲ್ಲ. ಆದರೆ ನನ್ನ ಗುರಿ, ನನ್ನ ಪ್ರತಿಭೆ, ನನಗೆ ಇಷ್ಟವಾಗಿದ್ದು ತಾಳ್ಮೆಯ  ಟೆಸ್ಟ್ ಕ್ರಿಕೆಟ್ ಎಂದು ದ್ರಾವಿಡ್ ಹೇಳಿದ್ದಾರೆ.

1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!.

ಇಂದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌‌ನಲ್ಲಿ ಗರಿಷ್ಠ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ನನ್ನ ಸ್ಟ್ರೈಕ್ ರೇಟ್ ನೋಡಿದರೆ ನನಗೆ ಕ್ರಿಕೆಟ್‌ನಲ್ಲಿ ಉಳಿಗಾಲ ವಿರಲಿಲ್ಲ. ಆದರೆ ಆ ಕಾಲಘಟ್ಟವನ್ನು ಈಗಿನ ಬದಲಾದ ಕ್ರಿಕೆಟ್‌ನೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈಗ ಕ್ರಿಕೆಟ್ ಹೈಸ್ಕೋರಿಂಗ್ ಗೇಮ್ ಆಗಿದೆ. 

ಡಿಫೆನ್ಸೀವ್ ಟೆಕ್ನಿಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಬ್ಯಾಟಿಂಗ್ ಮಾಡಲು ಅವಕಾಶ ನೀಡುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ, ತಾಳ್ಮೆ, ಶ್ರದ್ದೆ ಅಗತ್ಯ ಎಂದು ದ್ರಾವಿಡ್ ಹೇಳಿದ್ದಾರೆ.
 

Follow Us:
Download App:
  • android
  • ios