ದ್ರಾವಿಡ್ ತಮ್ಮ ಮಗನೊಂದಿಗೆ ಕ್ರಿಕೆಟ್‌ಗೆ ಮರಳಿದ್ದಾರೆ. 2024-25ರ ಶ್ರೀ ನಾಸೂರ್ ಮೆಮೋರಿಯಲ್ ಶೀಲ್ಡ್‌ನಲ್ಲಿ ಮಗನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು (ಫೆ.22): ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಕ್ರಿಕೆಟ್ ದಿಗ್ಗಜ ಕೊನೆಯ ಬಾರಿಗೆ 2014ರಲ್ಲಿ ವೃತ್ತಿಪರ ಕ್ರಿಕೆಟ್‌ಪಂದ್ಯ ಆಡಿದ್ದರು. ಆ ಬಳಿಕ ಟೀಮ್ ಇಂಡಿಯಾದ ಕೋಚ ಆಗಿದ್ದ ದ್ರಾವಿಡ್ ಈಗ ಅದರಿಂದಲೂ ವಿಮುಖರಾಗಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿರುವ ರಾಹುಲ್ ದ್ರಾವಿಡ್ ಈಗ ವೃತ್ತಿಪರ ಕ್ರಿಕೆಟ್‌ಗೆ ವಾಪಸಾಗಿದ್ದಾರ. 2024-25ರ ಶ್ರೀ ನಾಸೂರ್ ಮೆಮೋರಿಯಲ್ ಶೀಲ್ಡ್ ಗ್ರೂಪ್ I-III ವಿಭಾಗದ ಪಂದ್ಯಾವಳಿಯಲ್ಲಿ ತಮ್ಮ ಮಗ ಅನ್ವಯ್ ಜೊತೆ ವಿಜಯಾ ಕ್ರಿಕೆಟ್ ಕ್ಲಬ್‌ಪರವಾಗಿ ಆಡಿದ್ದಾರೆ.
ದ್ರಾವಿಡ್ ವಿಜಯ ಕ್ರಿಕೆಟ್ ಕ್ಲಬ್ ಪರವಾಗಿ ಯಂಗ್ ಲಯನ್ಸ್ ಕ್ಲಬ್ ವಿರುದ್ಧ SLS ಕ್ರೀಡಾಂಗಣದಲ್ಲಿ ನಡೆದ 50 ಓವರ್‌ಗಳ ಪಂದ್ಯದಲ್ಲಿ ಅಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆರನೇ ಕ್ರಮಾಂಕದಲ್ಲಿ ದ್ರಾವಿಡ್ ಬ್ಯಾಟಿಂಗ್‌ಗೆ ಇಳಿದರೆ, ಅವರ ಮಗ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡಿದರು. ತಂದೆ ಮಗ ಇಬ್ಬರೂ ಒಟ್ಟಿಗೆ ಕ್ರಿಕೆಟ್ ಆಡಿದ ಅಪರೂಪದ ನಿದರ್ಶನ ಇದಾಗಿದೆ ಎಂದು ವಿಸ್ಡನ್ ವರದಿ ಮಾಡಿದೆ.
ದ್ರಾವಿಡ್ ಎಂಟು ಎಸೆತಗಳಲ್ಲಿ 10 ರನ್ ಗಳಿಸಿ ಎಆರ್ ಉಲ್ಲಾಸ್ ಬೌಲಿಂಗ್‌ನಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಇತ್ತು. ಅವರು ತಮ್ಮ ಮಗನೊಂದಿಗೆ 17 ಎಸೆತಗಳಲ್ಲಿ 15 ರನ್‌ಗಳ ಜೊತೆಯಾಟವನ್ನು ನೀಡಿದರು, ಅವರ ಮಗ 60 ಎಸೆತಗಳಲ್ಲಿ 58 ರನ್ ಗಳಿಸಿದರು, ಇದರಲ್ಲಿ ಎಂಟು ಬೌಂಡರಿಗಳಿದ್ದವು. ಅವರ ತಂಡದ ಆಟಗಾರ ಸ್ವಪ್ನಿಲ್ ಯಲವೆ 50 ಎಸೆತಗಳಲ್ಲಿ 107 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು, ಅವರ ಕ್ಲಬ್ 50 ಓವರ್‌ಗಳಲ್ಲಿ 345/7 ರನ್ ಗಳಿಸಿತು.
ನಿವೃತ್ತಿಯ ನಂತರ ದ್ರಾವಿಡ್ ಕ್ಲಬ್ ಆಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ, ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದ ಕೆಲವೇ ತಿಂಗಳುಗಳ ನಂತರ, ದ್ರಾವಿಡ್ ತಮ್ಮ ಬಾಲ್ಯದ ಕ್ಲಬ್ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನ ಪರವಾಗಿ ಕ್ರಿಕೆಟ್ ಆಡಿದ್ದರು. ತಂಡಕ್ಕಾಗಿ ನಿರ್ಣಾಯಕ ಶತಕವನ್ನು ಬಾರಿಸುವ ಮೂಲಕ ತಂಡದ ಯಶಸ್ಸಿಗೆ ಕಾರಣರಾಗಿದ್ದರು.
ಪಾಕ್ ವಿರುದ್ಧ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಮೊಣಕಾಲು ಗಾಯ, ಆತಂಕದಲ್ಲಿ ಟೀಮ್ ಇಂಡಿಯಾ
ದ್ರಾವಿಡ್ ಅವರ ಹಿರಿಯ ಮಗ ಸಮಿತ್ ಕೂಡ ಕಳೆದ ಆಗಸ್ಟ್‌ನಲ್ಲಿ ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಕಳೆದ ವರ್ಷದ ಮಹಾರಾಜ ಟಿ20 ಟ್ರೋಫಿಯಲ್ಲಿಯೂ ಕಾಣಿಸಿಕೊಂಡರು, ಏಳು ಪಂದ್ಯಗಳಲ್ಲಿ 82 ರನ್ ಗಳಿಸಿದರು
ಡಿವೋರ್ಸ್ ಪಡೆದ ಧನಶ್ರೀ ವರ್ಮಾಗೆ ಚಹಲ್‌ರಿಂದ 60 ಕೋಟಿ ರುಪಾಯಿ ಜೀವನಾಂಶ ಸಿಕ್ಕಿದ್ದು ನಿಜನಾ?

