ಕುಟುಂಬ ಸದಸ್ಯರಿಗೆ ಕೊರೋನಾ | ಸದ್ಯಕ್ಕೆ ಐಎಪಿಎಲ್‌ನಿಂದ ಹೊರ ಬಂದ ರವಿಚಂದ್ರನ್ ಅಶ್ವಿನ್ 

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ IPLನಿಂದ ಭಾನುವಾರ ಹೊರ ಬಂದಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬವನ್ನು ಬೆಂಬಲಿಸಲು ಇಂತಹೊದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಅಶ್ವಿನ್.

ಟೆಸ್ಟ್ ಮತ್ತು ಒಡಿಐ ಆಟಗಾರ ಅಶ್ವಿನ್ ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ T20 ಫ್ರ್ಯಾಂಚೈಸ್ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ದೃಢಪಡಿಸಿದ್ದಾರೆ. ನನ್ನ ಕುಟುಂಬ ಮತ್ತು ಸಂಬಂಧಿಕರು ಕೊರೋನಾ ಸೋಂಕಿಗೆ ಒಳಗಾಗಿದ್ದು, ಈ ಕಷ್ಟದ ಸಮಯದಲ್ಲಿ ನಾನು ಅವರ ಜೊತೆಗೆ ಇರಬೇಕಾಗಿದೆ ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್‌ಗೆ ನಿರಾಸೆ

ಎಲ್ಲವೂ ಸರಿಯಾದರೆ ಮತ್ತೆ ಆಟಕ್ಕೆ ಮರಳಲಿದ್ದೇನೆ, ಥಾಂಕ್ಯೂ ಎಂದು ಟ್ವೀಟ್ ಮಾಡಿದ್ದಾಋಎ ಅಶ್ವಿನ್. ಅಶ್ವಿನ್ ನಿರ್ಧಾರಕ್ಕೆ ದೆಹಲಿ ಬೆಂಬಲ ನೀಡಿದೆ. ಈ ಕಷ್ಟದ ಸಮಯದಲ್ಲಿ ನಿಮಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ಕಡೆಯಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಎಲ್ಲಾ ಶಕ್ತಿ ಮತ್ತು ಪ್ರಾರ್ಥನೆಗಳಿದೆ ಎಂದು ತಂಡ ಟ್ವೀಟ್ ಮಾಡಿದೆ.

Scroll to load tweet…

ಅಶ್ವಿನ್ 10 ವರ್ಷದ ಕೆರಿಯರ್‌ನಲ್ಲಿ 77 ಟೆಸ್ಟ್, 111 ಒಡಿಐ ಮತ್ತು 46 T20 ಇಂರ್‌ನ್ಯಾಷನಲ್‌ಗಳಲ್ಲಿ ಆಡಿದ್ದಾರೆ. ಇವರಿಗೆ ಟ್ವಿಟರ್‌ನಲ್ಲಿ 10 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರ ಪ್ರೊಫೈಲ್‌ನಲ್ಲಿ ಸ್ಟೇ ಹೋಂ, ಸ್ಟೇ ಸೇಫ್, ನಿಮ್ಮ ವ್ಯಾಕ್ಸೀನ್ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Scroll to load tweet…