ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪಕ್ಕಾ ಕ್ರಿಕೆಟ್ ಅನಾಲಿಸಿಸ್ ಮಾಡೋ ಆರ್ ಅಶ್ವಿನ್ ಇದೀಗ ಮಹತ್ವದ ಸಲಹೆ ನೀಡಿದ್ದು, ಅಭಿಮಾನಿಗಳು ಬೆಂಬಲ ಸೂಚಿಸಿದ್ದರೆ.
ಚೆನ್ನೈ (ಜು.12) ಭಾರತ ತಂಡದ ಟಿ20 ಪ್ರದರ್ಶನ, ತಂಡದ ಕುರಿತು ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಯನ್ನು ಸೂಚಿಸಿದ್ದಾರೆ. ಇದೀಗ ಟೀಂ ಇಂಡಿಯಾ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಉತ್ತಮ ಎಂದು ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಹೇಳಿದ್ದಾರೆ. ಸದ್ಯ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಮಾಡುವುದು ಸಾಧ್ಯವಿಲ್ಲ. ಆದರೆ ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಬೇಕು ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಬಾಗಿಲು ಮುಚ್ಚಬಾರದು
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿದರೆ ಖಂಡಿತವಾಗಿ ತಂಡಕ್ಕೆ ಮರಳಬೇಕು ಎಂದು ಅಶ್ವಿನ್ ಹೇಳಿದ್ದಾರೆ. ಯಾವ ಕ್ರಿಕೆಟಿಗನ ಟೀಂ ಇಂಡಿಯಾ ಬಾಗಿಲು ಮುಚ್ಚಬಾರದು. ಸದ್ಯ ಸೂರ್ಯಕುಮಾರ್ ಮುಂದೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಈ ಮೂಲಕ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಪ್ರದರ್ಶನದ ಮೇಲೆ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ತಂಡದಿಂದ ಹೊರಹಾಕಿದ ವಿಧಾನ ಮಾತ್ರ ಸರಿಯಾಗಿಲ್ಲ. ಈ ನಿರ್ಧಾರ ನೋಡುವಾಗ ಸೂರ್ಯಕುಮಾರ್ ಯಾದವ್ ಟಿ20 ಬಾಗಿಲು ಮುಚ್ಚಿದಂತೆ ಕಾಣುತ್ತಿದೆ ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಪರಿಣಾಮಕಾರಿಯಾಗಿದ್ದಾರೆ. ಆದರೆ ಕಳೆದ ಐಪಿಎಲ್ ಟೂರ್ನಿಯಲ್ಲಿನ ಕಳಪೆ ಪ್ರದರ್ಶನ ಸೂರ್ಯಕುಮಾರ್‌ಗೆ ಮುಳುವಾಗಿದೆ. ಆದರೆ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಮಾಡಬಲ್ಲ ಆಟಗಾರ ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಇದೇ ವೇಳೆ ಸ್ಪಿನ್ನರ್ ಕುಲ್ದೀಪ್ ಯಾದವ್ ಕುರಿತು ಮಾತನಾಡಿದ್ದಾರೆ. ಕುಲ್ದೀಪ್ ಯಾದವ್‌ನ್ನು ತಂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಜುಲೈ 14 ರಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಅತ್ಯಂತ ಪ್ರಮುಖ ಆಟಗಾರರು ಎಂದು ಅಶ್ವಿನ್ ಹೇಳಿದ್ದಾರೆ. ಬುಮ್ರಾ ಹಾಗೂ ಕುಲ್ದೀಪ್ ಇಬ್ಬರೂ ಅತ್ಯುತ್ತಮ ಬೌಲರ್ಸ್. ಹೀಗಾಗಿ ಇವರಿಬ್ಬರು ಪ್ಲೇಯಿಂಗ್ 11ನಲ್ಲಿದ್ದರೆ ಎದುರಾಳಿಗಳಿಗೆ ಕಷ್ಟವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.


