ಪುಣೆ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಬಿಗಿ ಹಿಡಿತ ಸಾಧಿಸುವ ಮನ್ಸೂಚನೆ ನೀಡಿದೆ. ಚೇತೇಶ್ವರ್ ಪೂಜಾರ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಕನ್ನಡಿಗ ಮಯಾಂಕ್ ಅಗರ್‌ವಾಲ್ ಶತಕದತ್ತ ಹೆಜ್ಜೆಹಾಕುತ್ತಿದ್ದಾರೆ. 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಚಹಾ ವಿರಾಮದ ವರೆಗೂ ಏನೇನಾಯ್ತು ಎನ್ನುವುದರ ವಿವರ ಇಲ್ಲಿದೆ ನೋಡಿ...

ಪುಣೆ[ಅ.10]: ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲೂ ಅಮೋಘ ಪ್ರದರ್ಶನ ತೋರುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ದಕ್ಷಿಣ ಆಪ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ ಭಾರತ 2 ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿದೆ.

ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಅರ್ಧಶತಕ

Scroll to load tweet…

ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಮಯಾಂಕ್‌ ಅಗರ್‌ವಾಲ್್ರನ್ನು ಕೂಡಿಕೊಂಡ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಭಾರತಕ್ಕೆ ಆಸರೆಯಾದರು. ಎರಡನೇ ವಿಕೆಟ್’ಗೆ ಈ ಜೋಡಿ[138] ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಪೂಜಾರ 112 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿ ಕಗಿಸೋ ರಬಾಡಗೆ ಎರಡನೇ ಬಲಿಯಾದರು.

ಮಹಿಳಾ ಏಕದಿನ: ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಭರ್ಜರಿ ಜಯ

Scroll to load tweet…

ಶತಕದತ್ತ ಮಯಾಂಕ್: ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಬಾರಿಸಿ ಮಿಂಚಿದ್ದ ಕನ್ನಡಿಗ ಮಯಾಂಕ್‌ ಅಗರ್‌ವಾಲ್ ಇದೀಗ ಮತ್ತೊಂದು ಮೂರಂಕಿ ಮೊತ್ತದತ್ತ ದಾಪುಗಾಲು ಹಾಕುತಿದ್ದಾರೆ. 112 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮಯಾಂಕ್ ಆ ಬಳಿಕವೂ ಆಕರ್ಷಕ ಬೌಂಡರಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಚಹಾ ವಿರಾಮದ ವೇಳೆಗೆ 171 ಎಸೆತಗಳಲ್ಲಿ 15 ಬೌಂಡರಿ ಸಹಿತ 86 ರನ್ ಬಾರಿಸಿದ್ದು, ಇನ್ನು ಕೇವಲ 14 ರನ್ ಬಾರಿಸಿದರೆ, ಎರಡನೇ ಶತಕ ಮಯಾಂಕ್ ಖಾತೆಗೆ ಸೇರ್ಪಡೆಗೊಳ್ಳಲಿದೆ.

ಚಹಾ ವಿರಾಮದ ಅಂತ್ಯಕ್ಕೆ ಭಾರತ 53 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿದೆ. ಮಯಾಂಕ್ 86 ರನ್ ಬಾರಿಸಿದ್ದರೆ, ನಾಯಕ ವಿರಾಟ್ ಕೊಹ್ಲಿ ಇನ್ನೂ ಖಾತೆ ತೆರೆದಿಲ್ಲ.