ಪುಣೆ[ಅ.10]: ಕನ್ನಡಿಗ ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಅರ್ಧಶತಕ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 112 ಎಸೆತಗಳಲ್ಲಿ ಮಯಾಂಕ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಸರಣಿ ಗೆಲುವಿನ ಕನವರಿಕೆಯಲ್ಲಿ ಟೀಂ ಇಂಡಿಯಾ

ಪುಣೆಯಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ಬ್ಯಾಟಿಂಗ್’ನಲ್ಲಿ ಕಮಾಲ್ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಯಾಂಕ್ ಅಗರ್‌ವಾಲ್ ಇದೀಗ ಮತ್ತೊಂದು ಅಂತಹದ್ದೇ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದಾರೆ. ಆರಂಭದಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಮಯಾಂಕ್ ಸುಂದರ ಕವರ್ ಡ್ರೈವ್ ಹಾಗೂ ಸ್ಟ್ರೈಟ್ ಶಾಟ್’ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 

ಇದು ಮಯಾಂಕ್ ಬಾರಿಸಿದ ನಾಲ್ಕನೇ ಅರ್ಧಶತಕವಾಗಿದೆ. ಮೆಲ್ಬರ್ನ್[76] ಹಾಗೂ ಸಿಡ್ನಿ[77] ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ನಾರ್ಥ್ ಸೌಂಡ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಕೇವಲ 5 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ಆದರೆ ಕಿಂಗ್ಸ್ ಟನ್ ಟೆಸ್ಟ್’ನಲ್ಲಿ 55 ರನ್ ಬಾರಿಸುವ ಮೂಲಕ ಕಮ್’ಬ್ಯಾಕ್ ಮಾಡಿದ್ದರು. ವೈಜಾಗ್ ಟೆಸ್ಟ್’ನಲ್ಲಿ ದ್ವಿಶತಕ[215]ದ ಬಳಿಕ ಇದೀಗ ಮತ್ತೊಮ್ಮೆ ಮೊದಲ ಇನಿಂಗ್ಸ್’ನಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಪುಣೆ ಟೆಸ್ಟ್: ಸರಣಿ ಗೆಲುವಿನ ಕನವರಿಕೆಯಲ್ಲಿ ಟೀಂ ಇಂಡಿಯಾ

ಇದೀಗ ಭಾರತ ತಂಡವು 36 ಓವರ್ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 102 ರನ್ ಬಾರಿಸಿದೆ. ಮಯಾಂಕ್ 51 ರನ್ ಬಾರಿಸಿದರೆ, ಪೂಜಾರ 27 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್’ನಲ್ಲೂ ಶತಕ ಸಿಡಿಸಿದ್ದ ರೋಹಿತ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 14 ರನ್ ಬಾರಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.