"

ವಡೋ​ದರ[ಅ.10]: ದಕ್ಷಿಣ ಆಫ್ರಿಕಾ ವಿರು​ದ್ಧ ಮೊದಲ ಏಕ​ದಿನದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ 8 ವಿಕೆಟ್‌ ಸುಲಭ ಜಯ ಸಾಧಿ​ಸಿ​ದೆ. ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರಿದ ಮಿಥಾಲಿ ಪಡೆ ಅನಾಯಾಸದ ಗೆಲುವಿನ ನಗೆ ಬೀರಿತು.

ಜೂಲನ್ ದಾಳಿಗೆ ತತ್ತರಿಸಿದ ಆಫ್ರಿಕಾ 164ಕ್ಕೆ ಆಲೌಟ್

ತಾರಾ ಆಟ​ಗಾರ್ತಿ ಸ್ಮೃತಿ ಮಂದನಾ ಅನು​ಪ​ಸ್ಥಿ​ತಿ​ಯಲ್ಲಿ ಏಕ​ದಿ​ನ ಅಂತಾ​ರಾ​ಷ್ಟ್ರೀಯ ಪದಾ​ರ್ಪಣೆ ಮಾಡಿದ ಪ್ರಿಯಾ ಪೂನಿಯಾ ಅಜೇಯ 75 ರನ್‌ ಹೊಡೆದರು. ಜೆಮೀಮಾ 55 ರನ್‌ ಬಾರಿಸುವ ಮೂಲಕ ಭಾರತಕ್ಕೆ ಸುಲಭ ಗೆಲುವು ತಂದಿತ್ತರು. 3 ಪಂದ್ಯ​ಗ​ಳ ಏಕ​ದಿನ ಸರ​ಣಿ​ಯಲ್ಲಿ ಮಿಥಾಲಿ ಪಡೆ 1-0 ಮುನ್ನಡೆ ಪಡೆ​ಯಿ​ತು. 

45.1 ಓವ​ರಲ್ಲಿ ದಕ್ಷಿಣ ಆಫ್ರಿಕಾ 164 ರನ್‌ಗಳಿಗೆ ಆಲೌ​ಟಾ​ಯಿತು. ಅನುಭವಿ ವೇಗಿ ಜೂಲನ್ ಗೋಸ್ವಾಮಿ 3 ವಿಕೆಟ್ ಕಬಳಿಸಿ ಗಮನ ಸೆಳೆದರು. 165 ರನ್‌ ಬೆನ್ನ​ತ್ತಿದ ಭಾರತ ತಂಡ 2 ವಿಕೆಟ್‌ ಕಳೆ​ದು​ಕೊಂಡು 41.4 ಓವ​ರಲ್ಲೇ ಗುರಿ ತಲು​ಪಿ​ತು. ಶುಕ್ರ​ವಾರ 2ನೇ ಏಕ​ದಿನ ನಡೆ​ಯ​ಲಿದ್ದು, ಸರಣಿ ಗೆಲು​ವಿಗೆ ಭಾರತ ಯತ್ನಿ​ಸ​ಲಿ​ದೆ.

ಮಿಥಾಲಿ ದಾಖ​ಲೆ: ಎರಡು ದಶ​ಕ​ಗಳ ಕಾಲ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಆಡಿದ ಮೊದಲ ಮಹಿಳೆಯೆಂಬ ದಾಖ​ಲೆ​ಯನ್ನು ಭಾರತ ಏಕ​ದಿನ ನಾಯಕಿ ಮಿಥಾಲಿ ರಾಜ್‌ ಬರೆ​ದಿ​ದ್ದಾ​ರೆ. ಜೂ.26, 1999ರಂದು ಐರ್ಲೆಂಡ್‌ ವಿರುದ್ಧ ಮಿಥಾಲಿ ಏಕ​ದಿನ ಪದಾ​ರ್ಪಣೆ ಮಾಡಿ​ದ್ದರು. ಏಕ​ದಿನ ಕ್ರಿಕೆ​ಟ್‌​ನಲ್ಲಿ 20 ವರ್ಷ 3 ತಿಂಗ​ಳು ಪೂರ್ಣ​ಗೊ​ಳಿ​ಸಿ​ದ ಮಿಥಾಲಿ, ದಾಖ​ಲೆಯ 204 ಏಕ​ದಿನ ಅಂತಾ​ರಾ​ಷ್ಟ್ರೀಯ ಪಂದ್ಯ​ಗ​ಳಲ್ಲಿ ದೇಶ​ವನ್ನು ಪ್ರತಿ​ನಿ​ಧಿ​ಸಿ​ದ್ದಾರೆ.

ಸ್ಕೋರ್‌:

ದ.ಆ​ಫ್ರಿಕಾ 45.1 ಓವ​ರಲ್ಲಿ 164/10, 
ಭಾರತ 41.4 ಓವ​ರಲ್ಲಿ 165/2