Asianet Suvarna News Asianet Suvarna News

ಪೂನಂ ರಾವತ್‌ ಶತಕ; ದಕ್ಷಿಣ ಆಫ್ರಿಕಾಗೆ ಸವಾಲಿನ ಗುರಿ

ದಕ್ಷಿಣ ಆಫ್ರಿಕಾ ವಿರುದ್ದದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ 266 ರನ್‌ ಕಲೆಹಾಕಿದ್ದು, ಹರಿಣಗಳ ಪಡೆಗೆ ಸವಾಲಿನ ಗುರಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Punam Raut unbeaten Century helps Indian Womens Team Set 267 runs Target South Africa in Lucknow kvn
Author
Lucknow, First Published Mar 14, 2021, 12:47 PM IST

ಲಖನೌ(ಮಾ.14): ಪೂನಂ ರಾವತ್(104*) ಬಾರಿಸಿದ ಆಕರ್ಷಕ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌(54) ಸಮಯೋಚಿತ ಅರ್ಧಶತಕದ ನೆರನಿಂದ 4ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಮಹಿಳಾ ತಂಡ 4 ವಿಕೆಟ್‌ ಕಳೆದುಕೊಂಡು 266 ರನ್‌ ಬಾರಿಸಿದೆ. ಈ ಮೂಲಕ ಹರಿಣಗಳಿಗೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ಏಕಾನ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮಿಥಾಲಿ ರಾಜ್‌ ಪಡೆ ಆರಂಭದಲ್ಲೇ ಸ್ಮೃತಿ ಮಂಧನಾ ವಿಕೆಟ್‌ ಕಳೆದುಕೊಂಡಿತು. ಮಂಧನಾ 10 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 32 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

ಮಿಥಾಲಿ-ಪೂನಂ ಶತಕದ ಜತೆಯಾಟ: 61 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಪೂನಂ ಯಾದವ್‌ 3ನೇ ವಿಕೆಟ್‌ಗೆ 103 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು  ಮಿಥಾಲಿ ರಾಜ್ 26 ರನ್‌ ಬಾರಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ವುಮೆನ್‌ ಎನ್ನುವ ಗೌರವಕ್ಕೆ ಭಾಜನರಾದರು. 213ನೇ ಪಂದ್ಯದಲ್ಲಿ ಮಿಥಾಲಿ ರಾಜ್‌ ಈ ಸಾಧನೆ ಮಾಡಿದರು. ಅಂತಿಮವಾಗಿ ಮಿಥಾಲಿ 45 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಹರಿಣಗಳೆದುರು ಸರಣಿ ಉಳಿಸಿಕೊಳ್ಳಲು ಮಿಥಾಲಿ ಪಡೆ ಹೋರಾಟ

ಪೂನಂ ಆಕರ್ಷಕ ಶತಕ; ಆರಂಭದಲ್ಲೇ ಮಂಧನಾ ವಿಕೆಟ್‌ ಪತನದ ಬಳಿಕ ಕ್ರೀಸ್‌ಗಿಳಿದ ಪೂನಂ ರಾವತ್ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಒಟ್ಟು 123 ಎಸೆತಗಳನ್ನು ಎದುರಿಸಿದ ಪೂನಂ 10 ಬೌಂಡರಿ ನೆರವಿನೊಂದಿಗೆ ಅಜೇಯ 104 ರನ್‌ ಬಾರಿಸಿದರು. ಅಂದಹಾಗೆ ಇದು ಪೂನಂ ವೃತ್ತಿಜೀವನದ 3ನೇ ಏಕದಿನ ಶತಕವಾಗಿದೆ. ಪೂನಂಗೆ ಉತ್ತಮ ಸಾಥ್ ನೀಡಿದ ಹರ್ಮನ್‌ ಪ್ರೀತ್‌ ಕೌರ್‌ ಕೇವಲ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 54ರನ್‌ ಬಾರಿಸುವ ಮೂಲಕ ತಂಡ 250ರ ಗಡಿ ದಾಟಲು ನೆರವಾದರು.
 

Follow Us:
Download App:
  • android
  • ios