ಲಖನೌ(ಮಾ.14): ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 1-2ರ ಹಿನ್ನಡೆ ಅನುಭವಿಸಿರುವ ಭಾರತ ಮಹಿಳಾ ತಂಡ, ಭಾನುವಾರ 4ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. 

ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಪುಟಿದೆದ್ದು ಸಮಬಲ ಸಾಧಿಸಿತ್ತು. ಆದರೆ ಶುಕ್ರವಾರ ನಡೆದಿದ್ದ 3ನೇ ಏಕದಿನದಲ್ಲಿ ಲೆಜಿಲಿ ಲೀ ಅವರ ಅಮೋಘ ಶತಕ, ಭಾರತವನ್ನು ಸೋಲಿನ ಸುಳಿಗೆ ತಳ್ಳಿತ್ತು. ಜೆಮಿಮಾ ರೋಡ್ರಿಗ್ಸ್‌ ಕಳಪೆ ಲಯದಲ್ಲಿದ್ದು, ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಸ್ಥಿರ ಪ್ರದರ್ಶನ ತೋರುತ್ತಿಲ್ಲ. 

ವಿಜಯ್ ಹಜಾರೆ ಟ್ರೋಫಿ ಫೈನಲ್: ಉತ್ತರ ಪ್ರದೇಶ ಮಣಿಸಿ ಚಾಂಪಿಯನ್ ಆಗುತ್ತಾ ಮುಂಬೈ?

ಇದು ನಾಯಕಿ ಮಿಥಾಲಿ ರಾಜ್‌ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ದೀಪ್ತಿ ಶರ್ಮಾ ಹಾಗೂ ಸುಷ್ಮಾ ವರ್ಮಾ ನಿರೀಕ್ಷಿತ ಮಟ್ಟದಲ್ಲಿ ರನ್‌ ಕೊಡುಗೆ ನೀಡುತ್ತಿಲ್ಲ. ಬೌಲಿಂಗ್‌ ವಿಭಾಗದಲ್ಲೂ ಭಾರತ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

ರಾಷ್ಟ್ರೀಯ ಏಕದಿನ: ರಾಜ್ಯ ಮಹಿಳಾ ತಂಡ ಶುಭಾರಂಭ

ಚೆನ್ನೈ: ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಗೆಲುವಿನ ಆರಂಭ ಪಡೆದಿದೆ. ಎಲೈಟ್‌ ‘ಎ’ ಗುಂಪಿನಲ್ಲಿರುವ ಕರ್ನಾಟಕ, ಶನಿವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿತು. 

ಮೊದಲು ಬ್ಯಾಟ್‌ ಮಾಡಿದ ದೆಹಲಿ 50 ಓವರಲ್ಲಿ 184 ರನ್‌ಗಳಿಗೆ ಆಲೌಟ್‌ ಆಯಿತು. ಚಂದು 3 ವಿಕೆಟ್‌ ಕಿತ್ತರು. ಕರ್ನಾಟಕ 6 ವಿಕೆಟ್‌ ಕಳೆದುಕೊಂಡು 47.3 ಓವರಲ್ಲಿ ಗುರಿ ತಲುಪಿತು. ದಿವ್ಯಾ 40, ಶುಭಾ 36 ರನ್‌ ಗಳಿಸಿದರು. ಸೋಮವಾರ 2ನೇ ಪಂದ್ಯದಲ್ಲಿ ಕರ್ನಾಟಕ ಮೇಘಾಲಯ ವಿರುದ್ಧ ಆಡಲಿದೆ.