Asianet Suvarna News Asianet Suvarna News

ಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ನ್ಯೂಜಿಲೆಂಡ್

ಟಿಮ್ ಸೌಥಿ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಶ್ರೀಲಂಕಾಗೆ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶರಣಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Prabath Jayasuriya wraps up victory Sri Lanka leapfrog New Zealand on WTC table kvn
Author
First Published Sep 24, 2024, 10:53 AM IST | Last Updated Sep 24, 2024, 10:53 AM IST

ಗಾಲೆ(ಶ್ರೀಲಂಕಾ): ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 63 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 275 ರನ್ ಗುರಿ ಪಡೆದಿದ್ದ ಪ್ರವಾಸಿ ಕಿವೀಸ್ ತಂಡ 211 ರನ್‌ಗೆ ಆಲೌಟಾಯಿತು. 

4ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 207 ರನ್ ಗಳಿಸಿದ್ದ ತಂಡಕ್ಕೆ ಕೊನೆ ದಿನವಾದ ಸೋಮವಾರ 68 ರನ್ ಅಗತ್ಯವಿತ್ತು. ಆದರೆ ಕಿವೀಸನ್ನು ಆಲೌಟ್ ಮಾಡಲು ಲಂಕಾ ಬೌಲರ್ ಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 3.4 ಓವರ್ ಗಳಲ್ಲಿ 4 ರನ್ ಸೇರಿಸುವಷ್ಟರಲ್ಲಿ ಕಿವೀಸ್ ಸರ್ವಪತನ ಕಂಡಿತು. ರಚಿನ್ (92) ಹಿಂದಿನ ದಿನದ ಮೊತ್ತಕ್ಕೆ ಕೇವಲ 1 ರನ್ ಸೇರಿಸಿ ಔಟಾದರು. ಪ್ರಭಾತ್ ಜಯಸೂರ್ಯ 5, ರಮೇಶ್ ಮೆಂಡಿಸ್ 3 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 305 ರನ್ ಗಳಿಸಿದ್ದರೆ, ಕಿವೀಸ್ 340 ರನ್ ಕಲೆಹಾಕಿ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಆದರೆ 2ನೇ ಇನ್ನಿಂಗ್ಸ್ ನಲ್ಲಿ ತೀವ್ರ ಪ್ರತಿರೋಧ ತೋರಿದ ಆತಿಥೇಯ ತಂಡ 309 ರನ್ ಗಳಿಸಿತ್ತು. ಉಭಯ ತಂಡಗಳ ನಡುವಿನ 2ನೇ ಪಂದ್ಯ ಗುರುವಾರ ಆರಂಭಗೊಳ್ಳಲಿದೆ. ಲಂಕಾ ತಂಡ ಕಿವೀಸ್ ವಿರುದ್ದ 2009ರ ಬಳಿಕ ಮೊದಲ ಬಾರಿ ಟೆಸ್ಟ್‌ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

ಟೆಸ್ಟ್‌ ವಿಶ್ವಕಪ್: ರೋಹಿತ್ ಶರ್ಮಾ ನೇತೃತ್ವದ ಭಾರತವೇ ನಂ.1

ಕ್ಲೀನ್‌ ಸ್ವೀಪ್‌ನಿಂದ ಪಾರಾದ ದ.ಆಫ್ರಿಕಾ

ಶಾರ್ಜಾ: ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯ 3ನೇ ಹಾಗೂ ಕೊನೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗೆಲುವು ಸಾಧಿಸಿದ್ದು, ಕ್ಲೀನ್‌ ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಆರಂಭಿಕ 2 ಪಂದ್ಯಗಳಲ್ಲಿ ಗೆದ್ದಿದ್ದ ಆಫ್ಘನ್, ಸರಣಿಯನ್ನು 2-1 ಅಂತರದಲ್ಲಿ ಕೈವಶಪಡಿಸಿ ಕೊಂಡಿತು. 

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘನ್, ರಹ್ಮಾನುಲ್ಲಾ ಗುರ್ಬಾಜ್ ಏಕಾಂಗಿ ಹೋರಾಟದ ಹೊರತಾಗಿಯೂ 34 ಓವರ್ ಗಳಲ್ಲಿ 169 ರನ್‌ಗೆ ಆಲೌಟಾಯಿತು. ಗುರ್ಬಾಜ್ 94 ಎಸೆತಗಳಲ್ಲಿ 89 ರನ್ ಸಿಡಿಸಿದರು. ಉಳಿದಂತೆ ಅಲ್ಲಾಹ್ ಘಜನ್‌ಫರ್‌ 31 ರನ್ ಕೊಡುಗೆ ನೀಡಿದರು. ಸುಲಭ ಗುರಿಯನ್ನು ದ.ಆಫ್ರಿಕಾ 33 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿದರು. ಮಾರ್ಕ್‌ರಮ್ ಔಟಾಗದೆ 69 ರನ್ ಸಿಡಿಸಿದರು. ಗುರ್ಬಾಜ್ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಾದ್ರಿಯಾಗಬೇಕೆಂದು ಬಯಸಿದ್ದ ಈ ಕ್ರಿಕೆಟಿಗ ವಿಶ್ವದ ಅಪಾಯಕಾರಿ ವೇಗಿ; ಈತನ ದಾಳಿಗೆ ಎದುರಾಳಿ ಪಡೆ 38 ರನ್‌ಗೆ ಆಲೌಟ್!

ಅಂ-19 ಏಕದಿನ: ಆಸೀಸ್ ವಿರುದ್ಧ ಭಾರತಕ್ಕೆ ಸರಣಿ

ಪುದುಚೇರಿ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಏಕದಿನ ಸರಣಿಯನ್ನು ಭಾರತ ಅಂಡರ್-19 ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈವಶಪಡಿಸಿ ಕೊಂಡಿದೆ. ಸೋಮವಾರ ನಡೆದ 2ನೇ ಪಂದ್ಯದಲ್ಲಿ ಭಾರತ 9 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾ ಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ ಗಳಲ್ಲಿ 176 ರನ್‌ಗೆ ಆಲೌಟಾಯಿತು. ಕರ್ನಾಟಕದ ಸಮರ್ಥ್ ನಾಗರಾಜ್, ಕೇರಳದ ಮೊಹಮ್ಮದ್ ಇನಾನ್ ತಲಾ 2 ವಿಕೆಟ್ ಕಿತ್ತರು. 

ಸುಲಭ ಗುರಿಯನ್ನು ಭಾರತ 22 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿದರು. ಮುಂಬೈನ ಸಾಹಿಲ್ ಪಾರಕ್ 75 ಎಸೆತಗಳಲ್ಲಿ ಔಟಾಗದೆ 109 ರನ್ ಗಳಿಸಿ ಗೆಲುವಿನ ರೂವಾರಿಯಾ ದರು. 3ನೇ ಪಂದ್ಯ ಗುರುವಾರ ನಡೆಯಲಿದೆ. ಬಳಿಕ ಇತ್ತಂಡಗಳು ಚೆನ್ನೈನಲ್ಲಿ 2 ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.
 

Latest Videos
Follow Us:
Download App:
  • android
  • ios