Asianet Suvarna News Asianet Suvarna News

8 ಟೆಸ್ಟ್, 7 ಸಲ ಐದಕ್ಕೂ ಅಧಿಕ ವಿಕೆಟ್..! ಲಂಕಾದಲ್ಲಿ ಮತ್ತೊಬ್ಬ ಸೂರ್ಯನ ಉದಯ..!

2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ 32 ವರ್ಷದ ಲೆಫ್ಟ್ ಆರ್ಮ್ ಸ್ಪಿನ್ನರ್ ಪ್ರಬಾತ್ ಜಯಸೂರ್ಯ,  ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ  ಡೆಬ್ಯೂ ಮಾಡಿ ಒಂದುವರೆ ವರ್ಷವಾಗಿದೆ. 10 ಟೆಸ್ಟ್‌ಗಳನ್ನಾಡಿರುವ ಪ್ರಬಾತ್, 18 ಇನ್ನಿಂಗ್ಸ್ಗಳಿಂದ 67 ವಿಕೆಟ್ಗಳನ್ನ ಕಬಳಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. 

Prabath Jayasuriya stars with the ball as hosts down Afghans in one off Test kvn
Author
First Published Feb 7, 2024, 5:29 PM IST

ಬೆಂಗಳೂರು(ಫೆ.07): ಸನತ್ ಜಯಸೂರ್ಯ ಕ್ರಿಕೆಟ್ನಿಂದ ಮರೆಯಾಗಿ ದಶಕಗಳೇ ಕಳೆದಿವೆ. ಆದ್ರೂ ಲಂಕಾದಲ್ಲಿ ಜಯಸೂರ್ಯನ ಹವಾ ಜೋರಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಈತನ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಿದ್ದಾನೆ. ಅಯ್ಯೋ, ಸನತ್ ರಿಟೈರ್ಡ್ ಆಗಿದ್ದಾರೆ. ಮತ್ಯಾವ ಸೂರ್ಯ ಪ್ರಜ್ವಲಿಸುತ್ತಿದೆ ಅಂತೀರಾ. ಈ ಸ್ಟೋರಿ ನೋಡಿ. ಹೊಸ ಸೂರ್ಯನನ್ನ ತೋರಿಸ್ತೀವಿ.

ಸನತ್ ಜಯಸೂರ್ಯ ಅಲ್ಲ, ಪ್ರಬಾತ್ ಜಯಸೂರ್ಯ..!

ಶ್ರೀಲಂಕಾದ ಸನತ್ ಜಯಸೂರ್ಯ, 90ರ ದಶಕದಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಹವಾ ಸೃಷ್ಟಿಸಿದ ಆಲ್ರೌಂಡರ್. ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಹೇಗೆ ಮಾಡಬೇಕು ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟ ಬ್ಯಾಟರ್. ಸ್ಪಿನ್ ಮೂಡಿಯಿಂದ ಎದುರಾಳಿ ಪಾಳಯದಲ್ಲಿ ನಡುಕ ಹಿಟ್ಟಿಸಿದ್ದರು. ಆ ಜಯಸೂರ್ಯ ಈಗ ಕ್ರಿಕೆಟ್ನಿಂದ ಕಣ್ಮರೆಯಾಗಿ, ದಶಕಗಳೇ ಕಳೆದಿವೆ. ಈಗ ಮತೊಬ್ಬ ಜಯಸೂರ್ಯ ಲಂಕಾದಲ್ಲಿ ಹುಟ್ಟಿದ್ದಾನೆ. ಆತನೇ ಪ್ರಬಾತ್ ಜಯಸೂರ್ಯ.

ವಿರಾಟ್ ಕೊಹ್ಲಿ ರೆಸ್ಟ್ ಮೇಲೆ ರೆಸ್ಟ್..! ಸೆಂಚುರಿ ರೇಸ್‌ನಲ್ಲಿ ಹಿಂದೆ ಬಿದ್ದ ಕಿಂಗ್ ಕೊಹ್ಲಿ

2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ 32 ವರ್ಷದ ಲೆಫ್ಟ್ ಆರ್ಮ್ ಸ್ಪಿನ್ನರ್ ಪ್ರಬಾತ್ ಜಯಸೂರ್ಯ,  ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ  ಡೆಬ್ಯೂ ಮಾಡಿ ಒಂದುವರೆ ವರ್ಷವಾಗಿದೆ. 10 ಟೆಸ್ಟ್‌ಗಳನ್ನಾಡಿರುವ ಪ್ರಬಾತ್, 18 ಇನ್ನಿಂಗ್ಸ್ಗಳಿಂದ 67 ವಿಕೆಟ್ಗಳನ್ನ ಕಬಳಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. 

ಅತೀ ಕಡಿಮೆ ಟೆಸ್ಟ್‌ನಲ್ಲಿ ಅಧಿಕ 5 ವಿಕೆಟ್

ಕಳೆದ 8 ಟೆಸ್ಟ್‌ಗಳಲ್ಲಿ 7 ಸಲ ಐದಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಮೊನ್ನೆ ಕೊನೆಗೊಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಪ್ರಬಾತ್ 8 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದು, ಮಿಂಚಿದ್ರು. ಈ ಮೂಲಕ ಹಲವು ವಿಶ್ವ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡ್ರು. ಅತೀ ಕಡಿಮೆ ಟೆಸ್ಟ್ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಪಡೆದ ದಾಖಲೆ ಪ್ರಬಾತ್ ಪಾಲಾಗಿದೆ.

ಮೊದಲ 10 ಟೆಸ್ಟ್ ಪಂದ್ಯಗಳಿಂದ ಅತ್ಯಧಿಕ ಅಂದರೆ 67 ವಿಕೆಟ್ ಪಡೆದ ಸ್ಪಿನ್ನರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಾಗೆಯೇ ಶ್ರೀಲಂಕಾದಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪ್ರಬಾತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 45 ಬಾರಿ 5 ವಿಕೆಟ್ ಕಬಳಿಸಿದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದಾರೆ. 

ಟೆಸ್ಟ್‌ನಲ್ಲಿ 31ನೇ ಶತಕ ಸಿಡಿಸಿದ ಕೇನ್ ವಿಲಿಯಮ್ಸನ್, ದಿಗ್ಗಜರ ದಾಖಲೆ ಉಡೀಸ್

10 ಟೆಸ್ಟ್‌ನಲ್ಲಿ 4 ಮ್ಯಾನ್ ಆಫ್ ದಿ ಮ್ಯಾಚ್

ಮೊದಲ 10 ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ವಿಶ್ವ ದಾಖಲೆ ಕೂಡ ಪ್ರಬಾತ್ ಪಾಲಾಗಿದೆ. ಅಂದರೆ ಕಳೆದ 10 ಪಂದ್ಯಗಳಲ್ಲಿ ಲಂಕಾ ಸ್ಪಿನ್ನರ್ 4 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ. ಒಟ್ನಲ್ಲಿ ಲಂಕಾದಲ್ಲಿ ಒಬ್ಬ ಸೂರ್ಯ ಮುಳುಗಿದ್ರೆ ಮತ್ತೊಬ್ಬ ಸೂರ್ಯ ಉದಯಿಸಿದ್ದಾನೆ. ಈಗ ಪ್ರಜ್ವಲಿಸುತ್ತಿದ್ದಾನೆ ಕೂಡ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios