Asianet Suvarna News Asianet Suvarna News

ಟೆಸ್ಟ್‌ನಲ್ಲಿ 31ನೇ ಶತಕ ಸಿಡಿಸಿದ ಕೇನ್ ವಿಲಿಯಮ್ಸನ್, ದಿಗ್ಗಜರ ದಾಖಲೆ ಉಡೀಸ್

ಇದೀಗ ಕೇನ್ ವಿಲಿಯಮ್ಸನ್‌ ಗರಿಷ್ಠ ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ 51 ಟೆಸ್ಟ್ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲೀಸ್ 45, ಆಸ್ಟ್ರೇಲಿಯದ ರಿಕಿ ಪಾಂಟಿಂಗ್41 ಶತಕಗಳನ್ನು ಬಾರಿಸಿದ್ದಾರೆ. 

Kane Williamson scores record 31st Test Century kvn
Author
First Published Feb 7, 2024, 10:38 AM IST

ಮೌಂಟ್‌ ಮಾಂಗನುಯಿ(ಫೆ.07): ನ್ಯೂಜಿಲೆಂಡ್‌ನ ತಾರಾ ಬ್ಯಾಟರ್ ಕೇನ್ ವಿಲಿಯಮ್ಸನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕಗಳ ಗಳಿಕೆಯನ್ನು 31ಕ್ಕೆ ಏರಿಸಿದ್ದಾರೆ. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಇನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್‌ 109 ರನ್ ಕಲೆಹಾಕಿದರು. ಇದರೊಂದಿಗೆ ಅತಿಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಇಂಗ್ಲೆಂಡ್‌ನ ಜೋ ರೂಟ್‌ರನ್ನು ಹಿಂದಿಕ್ಕಿದರು. ಇವರೆಲ್ಲರೂ ತಲಾ 30 ಶತಕ ಬಾರಿಸಿದ್ದಾರೆ.

ಇನ್ನು ಇದೀಗ ಕೇನ್ ವಿಲಿಯಮ್ಸನ್‌ ಗರಿಷ್ಠ ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ 51 ಟೆಸ್ಟ್ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜ್ಯಾಕ್ ಕಾಲೀಸ್ 45, ಆಸ್ಟ್ರೇಲಿಯದ ರಿಕಿ ಪಾಂಟಿಂಗ್41 ಶತಕಗಳನ್ನು ಬಾರಿಸಿದ್ದಾರೆ. 

ಮುಂಬೈ ಇಂಡಿಯನ್ಸ್ ಕೋಚ್‌ ಮಾರ್ಕ್ ಬೌಷರ್‌ ವಿರುದ್ಧ ರೋಹಿತ್ ಶರ್ಮಾ ಪತ್ನಿ ಕೆಂಡ..!

ಮೊದಲ ಟೆಸ್ಟ್‌: ದ.ಆಫ್ರಿಕಾ ವಿರುದ್ಧ ಕಿವೀಸ್‌ ಪರಾಕ್ರಮ

ಮೌಂಟ್‌ ಮಾಂಗನುಯಿ(ನ್ಯೂಜಿಲೆಂಡ್‌): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಪರಾಕ್ರಮ ಮೆರೆದಿದ್ದು, ಬೃಹತ್‌ ಗೆಲುವಿನ ನಿರೀಕ್ಷೆಯಲ್ಲಿದೆ. ಕಿವೀಸ್‌ನ 511 ರನ್‌ಗೆ ಉತ್ತರವಾಗಿ ಮಂಗಳವಾರ ದ.ಆಫ್ರಿಕಾ ಕೇವಲ 162 ರನ್‌ಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 349 ರನ್‌ಗಳ ದೊಡ್ಡ ಮುನ್ನಡೆ ಪಡೆದರೂ ದ.ಆಫ್ರಿಕಾ ಮೇಲೆ ಫಾಲೋ ಆನ್‌ ಹೇರದ ನ್ಯೂಜಿಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿದೆ. 2ನೇ ಇನ್ನಿಂಗ್ಸಲ್ಲೂ ಕೇನ್‌ ವಿಲಿಯಮ್ಸನ್‌(109 ರನ್) ಶತಕ ಸಿಡಿಸಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದೆ.

ಏಕದಿನಲ್ಲಿ ಆಸ್ಟ್ರೇಲಿಯಾ 1000 ಪಂದ್ಯದ ಮೈಲಿಗಲ್ಲು

ಕ್ಯಾನ್‌ಬೆರ್ರಾ(ಆಸ್ಟ್ರೇಲಿಯಾ): ಏಕದಿನ ಕ್ರಿಕೆಟ್​ನಲ್ಲಿ 1000 ಪಂದ್ಯಗಳನ್ನಾಡಿದ ತಂಡಗಳ ಸಾಲಿಗೆ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಿದೆ. ಮಂಗಳವಾರ ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯ ಆಸೀಸ್‌ನ 1000ನೇ ಪಂದ್ಯ. ಈ ಮೂಲಕ ಸಾವಿರದ ಮೈಲಿಗಲ್ಲು ತಲುಪಿದ 2ನೇ ತಂಡ ಎನಿಸಿಕೊಂಡಿದೆ. 

"ಅಲ್ಲಾ ಕೆಟ್ಟ ದೃಷ್ಠಿಯಿಂದ...": ತಲಾಕ್ ಪಡೆದ ಸಾನಿಯಾ ಮಿರ್ಜಾಗೆ ಅಮ್ಮನ ಕಿವಿಮಾತು ವೈರಲ್‌

ಭಾರತ ಮೊದಲ ತಂಡ. ಆಸ್ಟ್ರೇಲಿಯಾ 1000 ಪಂದ್ಯಗಳಲ್ಲಿ 609ರಲ್ಲಿ ಗೆದ್ದಿದ್ದರೆ, 348ರಲ್ಲಿ ಸೋತಿದೆ. ಭಾರತ ಈ ವರೆಗೂ 1055 ಪಂದ್ಯಗಳನ್ನಾಡಿದ್ದು, 559ರಲ್ಲಿ 443ರಲ್ಲಿ ಪರಾಭವಗೊಂಡಿದೆ. ಪಾಕಿಸ್ತಾನ 970, ಶ್ರೀಲಂಕಾ 912, ವೆಸ್ಟ್‌ಇಂಡೀಸ್‌ 873, ನ್ಯೂಜಿಲೆಂಡ್‌ 824, ಇಂಗ್ಲೆಂಡ್ 797 ಪಂದ್ಯಗಳನ್ನಾಡಿವೆ.

ಏಕದಿನ: ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾ ಕ್ಲೀನ್‌ಸ್ವೀಪ್

ಕ್ಯಾನ್‌ಬೆರ್ರಾ: ವೆಸ್ಟ್‌ಇಂಡೀಸ್‌ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌  ಜಯಗಳಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ ವೆಸ್ಟ್ ಇಂಡೀಸ್ 24.1 ಓವರ್‌ಗಳಲ್ಲಿ 86ಕ್ಕೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 6.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
 

Follow Us:
Download App:
  • android
  • ios