* ಪಿಎಸ್‌ಎಲ್‌ ಟೂರ್ನಿಯಲ್ಲಿ 4ನೇ ಬಾರಿಗೆ ಫೈನಲ್‌ಗೇರಿದ ಪೇಶಾವರ್ ಜಲ್ಮಿ* ಎರಡನೇ ಕ್ವಾಲಿಫೈಯರ್‌ನಲ್ಲಿ ಇಸ್ಲಾಮಾಬಾದ್‌ಗೆ ಹೀನಾಯ ಸೋಲು* ಪ್ರಶಸ್ತಿಗಾಗಿ ಮುಲ್ತಾನ್ ಸುಲ್ತಾನ್ಸ್ ಹಾಗೂ ಪೇಶಾವರ್ ಜಲ್ಮಿ ಕಾದಾಟ

ಅಬುಧಾಬಿ(ಜೂ.23): ಹಜರತ್ತುಲಾ ಝಜೈ ಹಾಗೂ ಜೊನಾಥನ್ ವೆಲ್ಸ್‌ ಆಕರ್ಷಕ ಪ್ರದರ್ಶನದ ನೆರವಿನಿಂದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಸ್ಲಾಮಾಬಾದ್‌ ಯುನೈಟೆಡ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಪೇಶಾವರ್ ಜಲ್ಮಿ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಮೊದಲು ಬ್ಯಾಟ್ ಮಾಡಿದ್ದ ಇಸ್ಲಾಮಾಬಾದ್‌ ಯುನೈಟೆಡ್ 9 ವಿಕೆಟ್ ಕಳೆದುಕೊಂಡು 174 ರನ್‌ ಕಲೆಹಾಕಿತ್ತು. ಈ ಮೂಲಕ ಇಪೇಶಾವರ್ ಜಲ್ಮಿ ತಂಡಕ್ಕೆ ಗೆಲ್ಲಲು ಸ್ಫರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಪೇಶಾವರ್ ಜಲ್ಮಿ ತಂಡಕ್ಕೆ ಎಡಗೈ ಬ್ಯಾಟ್ಸ್‌ಮನ್‌ ಹಜರತ್ತುಲಾ ಝಜೈ ಹಾಗೂ ಮೊದಲ ಪಿಎಸ್‌ಎಲ್ ಪಂದ್ಯವನ್ನಾಡಿದ ಜೊನಾಥನ್ ವೆಲ್ಸ್‌ ಆಕರ್ಷಕ ಅರ್ಧಶತಕ ಚಚ್ಚುವ ಮೂಲಕ ಇನ್ನೂ 3 ಓವರ್ ಬಾಕಿ ಇರುವಂತೆಯೇ ತಂಡ ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

Scroll to load tweet…

ಪಿಎಸ್‌ಎಲ್‌: ಚೊಚ್ಚಲ ಬಾರಿಗೆ ಫೈನಲ್‌ಗೇರಿದ ಮುಲ್ತಾನ್ ಸುಲ್ತಾನ್ಸ್‌

ಹಜರತ್ತುಲಾ ಝಜೈ 44 ಎಸೆತಗಳಲ್ಲಿ 66 ರನ್ ಚಚ್ಚಿದರೆ, ಜೊನಾಥನ್ ವೆಲ್ಸ್‌ ಅಜೇಯ 55 ರನ್‌ ಸಿಡಿಸುವ ಮೂಲಕ ತಂಡ 4ನೇ ಬಾರಿಗೆ ಫೈನಲ್‌ ಪ್ರವೇಶಿಸುವ ಹಾದಿಯನ್ನು ಸುಗಮಗೊಳಿಸಿದರು. ಇದೀಗ ಜೂನ್ 24ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಮುಲ್ತಾನ್ ಸುಲ್ತಾನ್ಸ್ ಹಾಗೂ ಪೇಶಾವರ್ ಜಲ್ಮಿ ತಂಡಗಳು ಕಾದಾಡಲಿವೆ.