Asianet Suvarna News Asianet Suvarna News

ಬೌಲರ್‌ ಶಸ್ತ್ರಚಿಕಿತ್ಸೆಗೆ ಪಿಸಿಬಿ ಬಳಿ ಹಣವಿಲ್ಲ, ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ತೆರಳಿದ ಪಾಕ್‌ ವೇಗಿ!

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಗಾಯಾಳುವಾಗಿದ್ದ ಪಾಕಿಸ್ತಾನದ ವೇಗಿ ಶಾಹಿನ್ ಶಾ ಅಫ್ರಿದಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಳಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲ. ಇದರಿಂದಾಗಿ ಶಾಹಿನ್ ಶಾ ಅಫ್ರಿದಿ ತಮ್ಮ ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು, ಅವರ ಖರ್ಚಿನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
 

PCB Economic Crisis Injured Shaheen Afridi going to England with his own money and getting treatment san
Author
First Published Sep 16, 2022, 2:55 PM IST

ಕರಾಚಿ (ಸೆ. 16): ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಆರ್ಥಿಕ ಪರಿಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಗಾಯಾಳುವಾಗಿರುವ ತನ್ನ ಪ್ಲೇಯರ್‌ಗೆ ಶಸ್ತ್ರಚಿಕಿತ್ಸೆ ಮಾಡಲು ಕೂಡ ಹಣವಿಲ್ಲ. ಪಾಕಿಸ್ತಾನದ ವೇಗದ ಬೌಲಿಂಗ್‌ ವಿಭಾಗದ ಆಧಾರವಾಗಿರುವ ಶಾಹಿನ್‌ ಶಾ ಅಫ್ರಿದಿ ತಮ್ಮ ಶಸ್ತ್ರಚಿಕಿತ್ಸೆಯ ಹಣವನ್ನು ತಾವೇ ಭರಿಸುವ ಪರಿಸ್ಥಿತಿಗೆ ಇಳಿದಿದ್ದಾರೆ.  ಇದನ್ನು ಅವರ ಭಾವಿ ಮಾವ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಬಹಿರಂಗಪಡಿಸಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇದನ್ನು ನಿರಾಕರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದ ಶಾಹಿನ್‌ ಶಾ ಅಫ್ರಿದಿ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಿರಲಿಲ್ಲ. ಹಾಗಿದ್ದರೂ ತಂಡದ ಜೊತೆ ಅವರು ಯುಎಇಗೆ ತೆರಳಿದ್ದರು. ಅದಲ್ಲದೆ, ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ತಂಡಕ್ಕೆ ಶಾಹಿನ್‌ ಶಾ ಭಾಗವಾಗಿದ್ದಾರೆ. ಮಾಜಿ ನಾಯಕ ಶಾಹಿದ್‌ ಅಫ್ರಿದಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಗಾಯಾಳುವಾಗಿರುವ ಶಾಹಿನ್‌ ಶಾ ಅಫ್ರಿದಿ ತಮ್ಮ ಖರ್ಚಿನಲ್ಲಿಯೇ ಇಂಗ್ಲೆಂಡ್‌ಗೆ ತೆರಳಿದ್ದು, ಅಲ್ಲಿ ನಾನೇ ಆತನಿಗೆ ವೈದ್ಯರ ವ್ಯವಸ್ಥೆ ಮಾಡಿದ್ದೇನೆ. ಅಲ್ಲಿ ಆತ ವೈದ್ಯರ ಸಂಪರ್ಕ ಮಾಡಿದ್ದಾನೆ. ಇಲ್ಲಿನ ಯಾವ ಹಂತದಲ್ಲಿಯೂ ಪಿಸಿಬಿ ಯಾವ ಸಹಾಯವನ್ನೂ ಮಾಡಿಲ್ಲ ಎಂದು ಅಫ್ರಿದಿ ಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.


ದೇಶಕ್ಕಾಗಿ ಆಡುತ್ತಿರುವ ಮತ್ತು ನಿಮ್ಮ ತಂಡದ ಪ್ರಮುಖ ಸದಸ್ಯರಾಗಿರುವ ಶಾಹೀನ್ ಅವರ ಸ್ಥಾನದಲ್ಲಿ ಯಾವುದೇ ಹುಡುಗ ಗಾಯಗೊಂಡಾಗ ಅವರನ್ನು ನೋಡಿಕೊಳ್ಳುವುದು ಪಿಸಿಬಿಯ ಜವಾಬ್ದಾರಿಯಾಗಿದೆ ಎಂದು ಅಫ್ರಿದಿ ಹೇಳಿದ್ದಾರೆ. ಗಾಯಾಳುವಾಗಿರುವ ಸಮಯದಲ್ಲಿ ಅವರ ಪಾಡಿಗೆ ಅವರನ್ನು ಬಿಟ್ಟರೆ ಯಾವ ಬದಲಾವಣೆಯೂ ಆಗೋದಿಲ್ಲ ಎಂದಿದ್ದಾರೆ. ಲಂಡನ್‌ಗೆ ತೆರಳುವ ಮುನ್ನ ಶಾಹಿನ್‌ ಶಾ ಅಫ್ರಿದಿ ಅವರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ನಜಿಬುಲ್ಲಾ ಸೌಮ್ರೊ ಅವರು, ಶಾಹಿನ್‌ ಅವರ ಮೊಣಕಾಲಿನ ಗಾಯಕ್ಕೆ ವಿಶೇಷ ಕಾಳಜಿಯ ಅಗತ್ಯವಿದೆ ಮತ್ತು ಲಂಡನ್‌ನಲ್ಲಿ ಅತ್ಯುತ್ತಮ ಕ್ರೀಡಾ ಔಷಧ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಹೊಂದಿದೆ. ಅಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಒಳ್ಳೆಯದು ಎಂದಿದ್ದರು. ನಮ್ಮ ವೈದ್ಯರೂ ಅವರ ಸಂಪರ್ಕದಲ್ಲಿದ್ದು, ಅವರ ಮೇಲೆ ನಿಗಾ ಇಡಲಿದ್ದಾರೆ ಎಂದರು. ವಿಶ್ವಕಪ್‌ಗೂ ಮುನ್ನ ಅವರು ಫಿಟ್‌ ಆಗುವ ವಿಶ್ವಾಸವಿದೆ ಎಂದಿದ್ದಾರೆ.

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ಶಾಹಿನ ಅಫ್ರಿದಿ ಅಕ್ಟೋಬರ್ 15ರ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. T20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಶಾಹಿನ್‌ (Shaheen Shah Afridi) ಅಫ್ರಿದಿಯಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ಎಡಗೈ ವೇಗಿ ಶಾಹಿನ್‌ ಆಸ್ಟ್ರೇಲಿಯಾದ (Australia) ವೇಗದ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಪಾಕಿಸ್ತಾನಕ್ಕೆ (Pakistan) ಪರಿಣಾಮಕಾರಿಯಾಗಲಿದ್ದಾರೆ.

ರಮೀಜ್‌ ರಾಜಾಗೆ ಜೀವ ಭಯ: ಬುಲೆಟ್‌ಪ್ರೂಫ್‌ ವಾಹನದಲ್ಲಿ ಓಡಾಟ..!

ವಾಸಿಂ ಅಕ್ರಮ್‌ ಕೂಡ ಕಿಡಿ: ಶಾಹಿದ್‌ ಅಫ್ರಿದಿಯ (Shahid Afridi) ಸಂದರ್ಶನದ ಬಳಿಕ ಮಾತನಾಡಿರುವ ಮಾಜಿ ನಾಯಕ ಹಾಗೂ ವೇಗಿ ವಾಸಿಂ ಅಕ್ರಮ್‌ (Wasim Akram), ಆತ ತಂಡದ ಪ್ರಮುಖ ಭಾಗ. ಆತನ ಚಿಕಿತ್ಸೆಗೆ ಪಿಸಿಬಿ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದ್ದಾರೆ. 'ಇದು ಬಹಳ ಆತಂಕದ ಸುದ್ದಿ. ಆತ ನಮ್ಮ ಬೆಸ್ಟ್‌ ಪ್ಲೇಯರ್‌. ಈ ಹುಡುಗನನ್ನು ನಾವು ಸರಿಯಾಗಿ ನೋಡಿಕೊಳ್ಳಬೇಕು ಅದು ನಮ್ಮ ಜವಾಬ್ದಾರಿ. ಸರಿಯಾದ ಚಿಕಿತ್ಸೆ ಸಿಗದೇ ಇದಲ್ಲಿ ಈ ಪ್ರತಿಭೆ ಕೈತಪ್ಪಿ ಹೋಗಲಿದೆ. ವಿಶ್ವದ ಶ್ರೇಷ್ಠ ಮೊಣಕಾಲು ಸರ್ಜನ್‌ ಬಳಿ ಅವರನ್ನು ಈಗಾಗಲೇ ಕಳಿಸಬೇಕಿತ್ತು. ಆದರೆ, ಇದನ್ನು ಆತನೊಬ್ಬನೇ ಮಾಡಿಕೊಳ್ಳುತ್ತಿದ್ದಾನೆ. ಇದು ಆತಂಕದ ವಿಚಾರ' ಎಂದು ಪ್ರತಿಕ್ರಿಯಿಸಿದ್ದಾರೆ.

 

Follow Us:
Download App:
  • android
  • ios