ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯಿ ಕೊನೆಯುಸಿರುಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮರಿಯಾ ಕಮಿನ್ಸ್‌ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಆಸ್ಟ್ರೇಲಿಯಾ

ಅಹಮದಾಬಾದ್‌(ಮಾ.10): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ತಾಯಿ ಮರಿಯಾ ಕಮಿನ್ಸ್‌ ಇಂದು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮರಿಯಾ ಕಮಿನ್ಸ್‌ ಕೊನೆಯುಸಿರೆಳೆದಿರುವ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಹೀಗಾಗಿ ಅಹಮದಾಬಾದ್ ಟೆಸ್ಟ್‌ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ಕ್ರಿಕೆಟಿಗರು, ಗೌರವ ಸೂಚಕವಾಗಿ ತಮ್ಮ ಎಡ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೈದಾನಕ್ಕಿಳಿದಿದೆ.

"ತಡರಾತ್ರಿ ಮರಿಯಾ ಕಮಿನ್ಸ್‌ ಅವರು ಕೊನೆಯುಸಿರೆಳೆದ ಸುದ್ದಿ ತಿಳಿದು ಸಾಕಷ್ಟು ನೋವುಂಟು ಮಾಡಿತು. ಆಸ್ಟ್ರೇಲಿಯಾ ಕ್ರಿಕೆಟ್‌ ಪರವಾಗಿ ಪ್ಯಾಟ್ ಕಮಿನ್ಸ್ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ಈ ಕಠಿಣ ಸಂದರ್ಭದಲ್ಲಿ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಆಸ್ಟ್ರೇಲಿಯಾ ಪುರುಷ ಕ್ರಿಕೆಟ್ ತಂಡವು ಗೌರವ ಸೂಚಕವಾಗಿ ಇಂದು ಆಟಗಾರರು ತಮ್ಮ ತೋಳಿಗೆ ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯಲಿದೆ" ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಟ್ವೀಟ್ ಮಾಡಿದೆ.

Scroll to load tweet…

ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯನ್ನಾಡಲು ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಬಂದಿಳಿದಿತ್ತು. ಡೆಲ್ಲಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬಳಿಕ ಡೆಲ್ಲಿಯಿಂದ ನೇರವಾಗಿ ಸಿಡ್ನಿಗೆ ವಾಪಾಸ್ಸಾಗಿದ್ದರು. ಕುಟುಂಬದ ಸದಸ್ಯರೊಬ್ಬರು ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ತವರಿಗೆ ವಾಪಾಸ್ಸಾಗುತ್ತಿದ್ದೇನೆ ಎಂದು ತಿಳಿಸಿ ಪ್ಯಾಟ್ ಕಮಿನ್ಸ್‌ ತಿಳಿಸಿದ್ದಾರೆ.

29 ವರ್ಷದ ಪ್ಯಾಟ್ ಕಮಿನ್ಸ್‌, ಇತ್ತೀಚೆಗಷ್ಟೇ ತಮ್ಮ ತಾಯಿಯ ಕಾಯಿಲೆಯ ಬಗ್ಗೆ ತುಟಿಬಿಚ್ಚಿದ್ದರು. 2005ರಲ್ಲಿ ಸ್ತನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇತ್ತೀಚಿಗಿನ ದಿನಗಳಲ್ಲಿ ಅದು ಉಲ್ಬಣಿಸಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಕಳೆದ ನವೆಂಬರ್ 26, 2021ರಲ್ಲಿ ಪ್ಯಾಟ್ ಕಮಿನ್ಸ್‌, ಆಸ್ಟ್ರೇಲಿಯಾದ 47ನೇ ಟೆಸ್ಟ್ ನಾಯಕರಾಗಿ ನೇಮಕವಾಗಿದ್ದರು. ವಿಕೆಟ್ ಕೀಪರ್ ಬ್ಯಾಟರ್ ಟಿಮ್‌ ಪೈನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಮಿನ್ಸ್‌ ನಾಯಕರಾಗಿದ್ದರು. ಈ ಮೂಲಕ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಪೂರ್ಣ ಪ್ರಮಾಣದ ನಾಯಕರಾದ ಮೊದಲ ಬೌಲರ್ ಎನ್ನುವ ಕೀರ್ತಿಗೆ ಪ್ಯಾಟ್ ಕಮಿನ್ಸ್‌ ಪಾತ್ರರಾಗಿದ್ದರು.