Asianet Suvarna News Asianet Suvarna News

ಟೀಮ್‌ ಇಂಡಿಯಾಗೆ ಅವಮಾನ ಮಾಡಿದ ಪೋಸ್ಟ್‌ಗೆ ಲೈಕ್‌ ಒತ್ತಿದ ಕಮಿನ್ಸ್‌, ಮ್ಯಾಕ್ಸ್‌ವೆಲ್‌!

2023ರ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಟೀಮ್‌ ಇಂಡಿಯಾಗೆ ಅವಮಾನ ಮಾಡಿದ ಪೋಸ್ಟ್‌ಗೆ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಲೈಕ್‌ ಒತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. 
 

Pat Cummins and Glenn Maxwell Like derogatory Instagram post associated to Team India san
Author
First Published Nov 25, 2023, 9:37 PM IST

ನವದೆಹಲಿ (ನ.25): ಇತ್ತೀಚೆಗಷ್ಟೇ ನವೆಂಬರ್ 19 ರಂದು ನಡೆದ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದ ಭಾರತ ತಂಡ ಪ್ರಮುಖ ಪಂದ್ಯದಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ಸೋಲು ಕಂಡಿತು. ಟ್ರಾವಿಸ್ ಹೆಡ್ ಅವರ ಅಮೋಘ ಶತಕದ ನೆರವಿನಿಂದ ಆಸೀಸ್‌ ತಂಡ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ 241 ರನ್‌ಗಳ ಗುರಿಯನ್ನು ಬೆನ್ನಟ್ಟಲು ನೆರವಾಯಿತು. ಆಸ್ಟ್ರೇಲಿಯಾ ತಂಡದ ವಿಶ್ವಕಪ್‌ ಗೆಲುವಿನ ಬಳಿಕ ಆಸೀಸ್‌ ಮಾಧ್ಯಮಗಳು ಟೀಮ್‌ ಇಂಡಿಯಾವನ್ನು ಅವಮಾನಿಸುವಂಥ ಪೋಸ್ಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ, 'ದಕ್ಷಿಣ ಆಸ್ಟ್ರೇಲಿಯಾದ ವ್ಯಕ್ತಿ, ವಿಶ್ವದಾಖಲೆಯ 11 ಮಂದಿಗೆ ಜನ್ಮ ನೀಡಿದ್ದಾರೆ' ಎನ್ನುವ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಅನ್ನು ಆಸೀಸ್ ಕ್ರಿಕೆಟಿಗರಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಆರನ್‌ ಫಿಂಚ್‌ ಹಾಗೂ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಲೈಕ್‌ ಒತ್ತಿದ್ದಾರೆ. ಪ್ಯಾಟ್‌ ಕಮಿನ್ಸ್‌ ಲೈಕ್‌ ಒತ್ತಿದ್ದರೂ ಬಳಿಕ ಇದು ವಿವಾದಕ್ಕೆ ಕಾರಣವಾಗುವ ಸೂಚನೆ ಸಿಕ್ಕಂತೆಯೇ ಈ ಪೋಸ್ಟ್‌ಅನ್ನು ಅನ್‌ಲೈಕ್‌ ಮಾಡಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗುತ್ತಿರುವ ನಡುವೆಯೇ ಭಾರತದ ಅಭಿಮಾನಿಗಳು ಆಸೀಸ್‌ ಆಟಗಾರರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್‌ನಲ್ಲಿ ಟ್ರಾವಿಸ್‌ ಹೆಡ್‌ ಬೆಡ್‌ ಮೇಲಿದ್ದು, ಆತ 11 ಮಗುವಿಗೆ ಜನ್ಮ ನೀಡಿದ್ದಾನೆ ಎನ್ನುವ ಅರ್ಥದಲ್ಲಿ ಪೋಸ್ಟ್‌ ಮಾಡಲಾಗಿದೆ.  ನರ್ಸ್‌ಗಳ ಚಿತ್ರವನ್ನೂ ಅದರಲ್ಲಿ ಹಾಕಲಾಗಿದ್ದು, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ಮೊಹಮದ್ ಶಮಿ, ಸಿರಾಜ್‌, ರೋಹಿತ್‌ ಶರ್ಮ ಈತನ ಮಗು ಎನ್ನುವಂತೆ ಬಿಂಬಿಸಿ ಫೋಟೋಶಾಪ್‌ ಮಾಡಲಾಗಿದೆ.  ಇದಕ್ಕೆ ಪ್ಯಾಟ್‌ ಕಮಿನ್ಸ್ ನಗುವ ಇಮೋಜಿಯನ್ನು ಪೋಸ್ಟ್‌ ಮಾಡಿದ್ದಾರೆ. ಇದು ವಿವಾದವಾಗುವ ಲಕ್ಷಣ ಕಂಡ ಕಮಿನ್ಸ್‌ ಬಳಿಕ ಇದನ್ನು ಡಿಲೀಟ್‌ ಮಾಡಿದ್ದಾರೆ. ಆದರೆ, ಕಮಿನ್ಸ್‌ ಡಿಲೀಟ್‌ ಮಾಡುವ ಮುನ್ನವೇ ಸಾವಿರಕ್ಕೂ ಅಧಿಕ ಮಂದಿ ಅವರ ಕಾಮೆಂಟ್‌ಅನ್ನು ಲೈಕ್‌ ಮಾಡಿದ್ದಾರೆ. ಇನ್ನು ಮ್ಯಾಕ್ಸ್‌ವೆಲ್‌ ಹಾಗೂ ಆರನ್‌ ಫಿಂಚ್‌ ಕೂಡ ಇದೇ ರೀತಿ ಮಾಡಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 240 ರನ್‌ ಸಿಡಿಸಿತು. ಕೆಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ಅರ್ಧಶತಕ ಬಾರಿಸಿದ್ದರು. ಆರಂಭದಲ್ಲಿ ರೋಹಿತ್‌ ಶರ್ಮ 31 ಎಎಸೆತಗಳಲ್ಲಿ 47 ರನ್‌ ಸಿಡಿಸಿ ಉತ್ತಮ ಆರಂಭ ನೀಡಿದರೂ, ಭಾರತ ತಂಡ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಿಸಲು ವಿಫಲವಾಯಿತು.

ಅಂಡರ್‌ 19 ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ, ರಾಜ್ಯದ ಧನುಷ್‌ ಗೌಡಗೆ ಸ್ಥಾನ

ಚೇಸಿಂಗ್‌ನಲ್ಲಿ, ಆಸ್ಟ್ರೇಲಿಯಾ ಆರಂಭಿಕ ಹಿನ್ನಡೆಗಳನ್ನು ಎದುರಿಸಿತು ಆದರೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್‌ ಲಬುಶೇನ್‌ ನಡುವಿನ 192 ರನ್ ಜೊತೆಯಾಟದೊಂದಿಗೆ ಚೇತರಿಸಿಕೊಂಡಿತು. ಹೆಡ್ ಅವರ ಅದ್ಭುತ 137 ರನ್‌ಗಳೊಂದಿಗೆ ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಮಾರ್ನಸ್ ಕೂಡ ಅರ್ಧಶತಕದೊಂದಿಗೆ ಅವರನ್ನು ಚೆನ್ನಾಗಿ ಬೆಂಬಲಿಸಿದರು. ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ರೋಹಿತ್ ಶರ್ಮಾ ಅವರು ಭಾರತ ತಂಡವು 20-30 ರನ್‌ಗಳ ಕೊರತೆ ಎದುರಿಸಿತು ಎನ್ನುವುದನ್ನು ಒಪ್ಪಿಕೊಂಡರು.

ಉದ್ಯಮಿಯಾಗಲು ಕ್ರಿಕೆಟ್‌ಗೆ ವಿದಾಯ ಹೇಳಿ, 100 ಕೋಟಿ ರೂ ಕಂಪೆನಿ ಕಟ್ಟಿದ ಆಟಗಾರ!

Follow Us:
Download App:
  • android
  • ios