ಬೆಂಗಳೂರು(ನ.16): ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಅತ್ಯುತ್ತಮ ಅಭಿಯಾನಗಳು, ಚಾಲೆಂಜ್ ಆರಂಭಗೊಳ್ಳುತ್ತವೆ. ಹೀಗೆ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಹುಟ್ಟಿಕೊಂಡ ಕನ್ನಡ ಕವನ ವಾಚನ ಚಾಲೆಂಜ್ ಇದೀಗ ಸಂಚಲನ ಮೂಡಿಸುತ್ತಿದೆ.  ಕನ್ನಡ ಕವನ ಓದುವ ಸವಾಲು, ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಎಬ್ಬಿಸಿದೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ ಸವಾಲು ಸ್ವೀಕರಿಸಿ ರಾಷ್ಟ್ರಕವಿ ಕುವೆಂಪು ಕವನ ವಾಚಿಸಿದ್ದಾರೆ.

 

ಇದನ್ನೂ ಓದಿ: ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್

ಕನ್ನಡ  ಕವನ ವಾಚನ ಸವಾಲು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಸ್ಯಾಂಡಲ್‌ವುಡ್, ಕ್ರೀಡೆ ಕ್ಷೇತ್ರದಲ್ಲೂ ಎಲ್ಲರ ಗಮನಸೆಳೆಯುತ್ತಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್, ಕನ್ನಡ ಕವನ ವಾಚನ ಮಾಡೋ  ಮೂಲಕ ಅನಿಲ್ ಕುಂಬ್ಳೆಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಕುಂಬ್ಳೆ ಕುವೆಂಪು ಅವರ ಎಲ್ಲಾದರೂ ಇರೂ ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಕವನ ಓದೋ ಮೂಲಕ ಕನ್ನಡಿಗರ ಭಾಷಾಭಿಮಾನವನ್ನು ಬಡಿದೆಬ್ಬಿಸಿದ್ದಾರೆ.

 

ಇದನ್ನೂ ಓದಿ: ಕುವೆಂಪು ಕವನ ವಾಚಿಸಿದ ಉಡುಪಿ ವಿಶ್ವೇಶ ತೀರ್ಥ ಸ್ವಾಮೀಜಿ

ಕವನ ವಾಚಿಸಿದ ಅನಿಲ್ ಕುಂಬ್ಳೆ, ನಟ ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ಗಾಯಕ ವಿಜಯ ಪ್ರಕಾಶ್‌ಗೆ ಸಾವಲು ಹಾಕಿದ್ದಾರೆ. ಇಷ್ಟೇ ಅಲ್ಲ ಮೂವರು ಹಾಡಿನ ಮೂಲಕ ಕವನ ವಾಚಿಸಿದರೆ ಉತ್ತಮ ಎಂದಿದ್ದಾರೆ. ಜೊತೆಗೆ ವಿಜಯ್ ಪ್ರಕಾಶ್ ಹಾಡಿನ ಮೂಲಕವೇ ಕವನ ವಾಚಿಸಬೇಕು ಎಂದಿದ್ದಾರೆ. ಕಿಚ್ಚ ಸುದೀಪ್ ಕುಂಬ್ಳೆ ಸವಾಲನ್ನು ಸ್ವೀಕರಿಸಿದ್ದಾರೆ. ಶೀಘ್ರದಲ್ಲೇ ವಿಡೀಯೋ ಶೇರ್ ಮಾಡುವುದಾಗಿ ಹೇಳಿದ್ದಾರೆ.