ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಮಾಜಿ ನಾಯಕ ಅನಿಲ್ ಕುಂಬ್ಳೆ!

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ರನ್ನು ಉಲ್ಲೇಖಿಸಿದ್ದರು. ಪ್ರೇರಣೆ ಹಾಗೂ ಸಕರಾತ್ಮಕ ಚಿಂತನೆ ಕುರಿತು ಮಕ್ಕಳಿಗೆ ಮೋದಿ ಹೇಳಿದ ಪಾಠ ಹಾಗೂ ತನ್ನ ಊದಾಹರಣೆ ನೀಡಿದ ಮೋದಿಗೆ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ.  

Pariksha pe charcha 2020 Anil Kumble reacts after Pm modi cites broken jaw incident

ಬೆಂಗಳೂರು(ಜ.23): ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು, ಭಯ ನಿವಾರಿಸಬೇಕು ಅನ್ನೋ ಕುರಿತು ಮೋದಿ ಮಕ್ಕಳಿಗೆ ಪಾಠ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಉತ್ತೇಜನಗೊಳಿಸಲು ಮೋದಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ಣ ಉದಾಹರಣೆ ನೀಡಿದ್ದರು. 

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತನ್ನನ್ನು ಉದಾಹರಿಸಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಅನಿಲ್‌ ಕುಂಬ್ಳೆ ಧನ್ಯವಾದ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ. 

 

Honoured to have been mentioned in #ParikshaPeCharcha2020 Thankyou Hon. PM ⁦@narendramodi⁩ ji. Best wishes to everyone writing their exams. pic.twitter.com/BwsMXDgemD

— Anil Kumble (@anilkumble1074) January 22, 2020

ಇದನ್ನೂ ಓದಿ: ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

ಆಸ್ಪ್ರೇಲಿಯಾ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ ಫಾಲೋಆನ್‌ ಇದ್ದರೂ ರಾಹುಲ್‌ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷಣ್‌ ಉತ್ತಮ ಜತೆಯಾಟವಾಡಿ ಭಾರತವನ್ನು ಗೆಲ್ಲಿಸಿದ್ದು, ದವಡೆ ಮುರಿದರೂ ಅನಿಲ್‌ ಕುಂಬ್ಳೆ ಬೌಲಿಂಗ್‌ (2002ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ) ಮಾಡಿದ್ದು ಮರೆಯಲು ಸಾಧ್ಯವಾ? ಇದು ಪ್ರೇರಣೆ ಮತ್ತು ಸಕಾರಾತ್ಮಕ ಚಿಂತನೆಯ ಫಲ ಎಂದು ಪ್ರಧಾನಿ ಹೇಳಿದ್ದರು. 

ಇದಕ್ಕೆ ಟ್ವೀಟ್‌ ಮೂಲಕ ಧನ್ಯವಾದ ಸಲ್ಲಿಸಿರುವ ಕುಂಬ್ಳೆ, ಪ್ರಧಾನಿ ನನ್ನ ಹೆಸರು ಉಲ್ಲೇಖಿಸಿದ್ದು ಗೌರವ ತಂದಂತಾಗಿದೆ. ಧನ್ಯವಾದ ಮೋದಿಯವರೇ. ಪರೀಕ್ಷೆ ಬರೆಯುವರಿಗೆ ಶುಭವಾಗಲಿ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios