ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಆರಂಭಿಕ ಬ್ಯಾಟ್ಸ್ ಮನ್ಕ್ಯಾಲೆಂಡರ್ ವರ್ಷದಲ್ಲಿ 2 ಸಾವಿರ ಟಿ20 ರನ್ ದಾಖಲೆವೆಸ್ಟ್ ಇಂಡೀಸ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸಾಧನೆ
ಕರಾಚಿ (ಡಿ.17): ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಮೊಹಮದ್ ರಿಜ್ವಾನ್ (Mohammad Rizwan), ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಲು ಭರ್ಜರಿ ನಿರ್ವಹಣೆಯ ಮೂಲಕ ಗಮನಸೆಳೆದ ಆರಂಭಿಕ ಬ್ಯಾಟ್ಸ್ ಮನ್ ಮೊಹಮದ್ ರಿಜ್ವಾನ್, ಕ್ಯಾಲೆಂಡರ್ ವರ್ಷವೊಂದರಲ್ಲಿ 2 ಸಾವಿರ ಟಿ20 ರನ್ ಬಾರಿಸಿದ ವಿಶ್ವದ ಮೊಟ್ಟಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅಂತಿಮ ಟಿ20 ಪಂದ್ಯದಲ್ಲಿ ಮೊಹಮದ್ ರಿಜ್ವಾನ್ ಕೇವಲ 45 ಎಸೆತಗಳಲ್ಲಿ ಬಿರುಸಿನ 86 ರನ್ ಸಿಡಿಸುವ ಮೂಲಕ ಪಾಕಿಸ್ತಾನ (Pakistan ) ತಂಡದ 7 ವಿಕೆಟ್ ಗೆಲುವಿಗೆ ಕಾರಣರಾದರು.
ವೆಸ್ಟ್ ಇಂಡೀಸ್ ವಿರುದ್ಧ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ (National Stadium) ನಡೆದ ಪಂದ್ಯದಲ್ಲಿ ಮೊಹಮದ್ ರಿಜ್ವಾನ್ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಹಾದಿಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಬಾರಿಸಿದ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ (Chris Gayle) ಅವರ ದಾಖಲೆ ಮುರಿದ ರಿಜ್ವಾನ್, ಬಳಿಕ ವರ್ಷವೊಂದರಲ್ಲಿ 2 ಸಾವಿರಕ್ಕೂ ಅಧಿಕ ರನ್ ಬಾರಿಸಿದ ವಿಶ್ವದ ಮೊಟ್ಟಮೊದಲ ಬ್ಯಾಟ್ಸ್ ಮನ್ ಎನಿಸಿದರು. ಪಾಕಿಸ್ತಾನದ ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ರಿಜ್ವಾನ್ ಈ ದಾಖಲೆ ಮಾಡಿದರು.
ಆಕ್ರಮಣಕಾರಿ ಬ್ಯಾಟ್ಸ್ ಮನ್ ಈ ವರ್ಷ ಆಡಿದ ಟಿ20 ಪಂದ್ಯಗಳಿಂದ 2036 ರನ್ ಬಾರಿಸಿದ್ದಾರೆ. ಇದರಲ್ಲಿ 18 ಅರ್ಧಶತಕಗಳು ಹಾಗೂ ಒಂದು ಶತಕ ಸೇರಿದೆ. 2036 ರನ್ ಗಳ ಪೈಕಿ1326 ರನ್ ಗಳು ಅಂತಾರಾಷ್ಟ್ರೀಯ ಟಿ20 ಪಂದ್ಯದಿಂದ ಬಂದಿದ್ದು, ಇದೂ ಕೂಡ ದಾಖಲೆಯಾಗಿದೆ. ಇಷ್ಟು ರನ್ ಗಳನ್ನು ಬಾರಿಸಲು ಅವರು ಪಾಕಿಸ್ತಾನ ಪರವಾಗಿ 26 ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಕೂಡ ರಿಜ್ವಾನ್ ಹೆಸರಿಗೆ ಸೇರಿದೆ.
ಇನ್ನೊಂದೆಡೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಕೂಡ ಅರ್ಧಶತಕ ಸಿಡಿಸಿದರು. ಆ ಮೂಲಕ ಹಾಲಿ ವರ್ಷದಲ್ಲಿ ಆಡಿದ ಟಿ20 ಪಂದ್ಯಗಳಿಂದ 20ನೇ ಅರ್ಧಶತಕ ಸಾಧನೆ ಮಾಡಿದರು. ಟಿ20 (T20) ಕ್ರಿಕೆಟ್ ನ ಕ್ಯಾಲೆಂಡರ್ ವರ್ಷದಲ್ಲಿ 20 ಬಾರಿ 50 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದ ಮೊಟ್ಟಮೊದಲ ಆಟಗಾರ ಬಾಬರ್ ಅಜಮ್ ಎನಿಸಿದ್ದಾರೆ. ಹಾಲಿ ವರ್ಷ ಬಾಬರ್ ಅಜಮ್ ಹಾಗೂ ಮೊಹಮದ್ ರಿಜ್ವಾನ್ 6ನೇ ಬಾರಿಗೆ ಟಿ20 ಕ್ರಿಕೆಟ್ ನಲ್ಲಿ ಶತಕದ ಜೊತೆಯಾಟವಾಡಿದ್ದು, ಇದೂ ಕೂಡ ದಾಖಲೆ ಎನಿಸಿದೆ.
Mohammad Rizwan ಆಸ್ಪತ್ರೆಗೆ ತೆರಳುವುದು 20 ನಿಮಿಷ ತಡವಾಗಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು..!
ಟಿ20 ಕ್ರಿಕೆಟ್ ನಲ್ಲಿ ರಿಜ್ವಾನ್ ಅವರ ಭರ್ಜರಿ ನಿರ್ವಹಣೆಯ ಫಲವಾಗಿ ಈ ಬಾರಿ ಅವರು ಇಂಗ್ಲೀಷ್ ಕೌಂಟಿ ತಂಡ ಸಸೆಕ್ಸ್ (Sussex) ಪರವಾಗಿ ಆಡಲು ಸಹಿ ಹಾಕಿದ್ದಾರೆ. 2022ರ ಏಪ್ರಿಲ್ ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿ ಮುಕ್ತಾಯದ ಬಳಿಕ ಅವರು ಸಸೆಕ್ಸ್ ತಂಡದ ಪರವಾಗಿ ಆಡಲಿದ್ದಾರೆ. ಸಸೆಕ್ಸ್ ತಂಡ ಮಾಧ್ಯಮಗಳಿಗೆ ಪ್ರಕಟಣೆ ನೀಡುವ ಮೂಲಕ ಈ ಸುದ್ದಿ ಖಚಿತಪಡಿಸಿದ್ದರೆ, ರಿಜ್ವಾನ್ ಸಸೆಕ್ಸ್ ತಂಡವನ್ನು ಪ್ರತಿನಿಧಿಸಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
T20 World Cup: Aus vs Pak ಸೆಮೀಸ್ ಹಿಂದಿನ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ರಿಜ್ವಾನ್!
“2022 ರ ಋತುವಿಗಾಗಿ ಐತಿಹಾಸಿಕ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ನ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ. ಸಸೆಕ್ಸ್ ಕ್ರಿಕೆಟ್ ಬಗ್ಗೆ ಬಹಳ ಉತ್ತಮವಾದ ವಿಚಾರಗಳನ್ನು ಕೇಳಿದ್ದು, ಈ ಕ್ಲಬ್ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿತ್ತು" ಎಂದು ರಿಜ್ವಾನ್ ಹೇಳಿದ್ದಾರೆ.
