ಪಾಕಿಸ್ತಾನದ ಕ್ರೀಡಾ ಪತ್ರಕರ್ತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಸುಳ್ಳು ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಏನಿದು ಹೊಸ ಸುದ್ದಿ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಬೆಂಗಳೂರು: ನೆರೆಯ ಪಾಕಿಸ್ತಾನದ ರಾಜಕಾರಣಿಗಳಂತೆ ಪತ್ರಕರ್ತರಿಗೂ ಭಾರತದ ಮೇಲೆ ಸುಖಾಸುಮ್ಮನೆ ಹೊಟ್ಟೆ ಉರಿಸಿಕೊಳ್ಳುವ ಚಟ ಇರಬೇಕು. ಇದೀಗ ಪಾಕಿಸ್ತಾನಿ ಕ್ರೀಡಾ ಪತ್ರಕರ್ತ ಖದೀರ್ ಖವಾಜಾ, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳ ಪಟ್ಟಿಯನ್ನು ಹಾಕುವಾಗ ಬಿಸಿಸಿಐ ಕೈಬಿಟ್ಟು ಉಳಿದ ದೇಶಗಳ ಕ್ರಿಕೆಟ್‌ ಬೋರ್ಡ್‌ಗಳ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸುಮಾರು 18,760 ಕೋಟಿ ರುಪಾಯಿ ಸಂಪತ್ತು ಹೊಂದಿದ್ದು, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಗುರುತಿಸಿಕೊಂಡಿದೆ. ಇದಾದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ 658 ಕೋಟಿ ರುಪಾಯಿ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 492 ಕೋಟಿ ರುಪಾಯಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ 458 ಕೋಟಿ ರುಪಾಯಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು 425 ಕೋಟಿ ರುಪಾಯಿ ಹೊಂದಿವೆ. 

ಐಸಿಸಿ ಹೊಸ ಮುಖ್ಯಸ್ಥ ಆಗ್ತಾರಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ?

"ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಪಟ್ಟಿಯಲ್ಲಿದೆ. ಆದರೆ ಬಿಲಿಯನ್ ಡಾಲರ್ ಬೋರ್ಡ್‌(ಭಾರತ) ಎಲ್ಲಿ ಎಂದು ಸಮಾ ಟಿವಿ ಪತ್ರಕರ್ತ 'ಎಕ್ಸ್‌' ನಲ್ಲಿ ಗುರುವಾರ ಪೋಸ್ಟ್‌ ಮಾಡಿದ್ದಾರೆ. ಇನ್ನು ಪೋಸ್ಟ್‌ ಗಮನಕ್ಕೆ ಬರುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಸಮಾ ಚಾನೆಲ್ ಪತ್ರಕರ್ತ ಖದೀರ್ ಖವಾಜಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. 

Scroll to load tweet…

ಓರ್ವ ನೆಟ್ಟಿಗ ನೀವೇನಾದರೂ ಮದರಸಾದಲ್ಲಿ ಪದವಿ ಪಡೆದಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಸಂಪತ್ತನ್ನು ಉದ್ದೇಶಿಸಿ, ನಮ್ಮಲ್ಲಿ 450 ಕೋಟಿಗೆ ಒಂದು ಮದುವೆ ಕೂಡಾ ಪೂರ್ಣವಾಗಲ್ಲ ಎಂದು ಪಾಕ್ ಪತ್ರಕರ್ತನನ್ನು ಕಾಲೆಳೆದಿದ್ದಾರೆ.

Scroll to load tweet…
Scroll to load tweet…
Scroll to load tweet…

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕ್‌ಗೆ ಪ್ರವಾಸ ಮಾಡೋದು ಡೌಟ್:

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಕರೆಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಾಕಷ್ಟು ಹರಸಾಹಸ ಮಾಡ್ತಾ ಇದೆ. ಭದ್ರತೆ ಹಾಗೂ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ. ಬಿಸಿಸಿಐ ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತದ ಪಂದ್ಯಗಳನ್ನು ಶ್ರೀಲಂಕಾ ಇಲ್ಲವೇ ದುಬೆನಲ್ಲಿ ಆಯೋಜಿಸುವಂತೆ ಐಸಿಸಿ ಬಳಿ ಮನವಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಹೀಗಾಗಿ ಭಾರತ ಕ್ರಿಕೆಟ್ ತಂಡವು ಈ ಬಾರಿ ಕೂಡಾ ಪಾಕಿಸ್ತಾನ ಪ್ರವಾಸ ಮಾಡುವುದು ಅನುಮಾನ ಎನಿಸಿದೆ.