ಲಾಹೋರ್‌(ನ.15): ದಶ​ಕಕ್ಕೂ ಹೆಚ್ಚು ಸಮ​ಯದ ಬಳಿಕ ಪಾಕಿ​ಸ್ತಾ​ನಕ್ಕೆ ಟೆಸ್ಟ್‌ ಕ್ರಿಕೆಟ್‌ ವಾಪ​ಸಾ​ಗ​ಲಿದೆ. ಮುಂದಿನ ತಿಂಗಳು ಪಾಕಿ​ಸ್ತಾನ ಪ್ರವಾಸ ಕೈಗೊ​ಳ್ಳು​ವು​ದಾಗಿ ಶ್ರೀಲಂಕಾ ಖಚಿತಪಡಿ​ಸಿದೆ. 

ಡೇವಿಸ್ ಕಪ್: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ

ಸದ್ಯ ಚಾಲ್ತಿಯ​ಲ್ಲಿ​ರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ವ್ಯಾಪ್ತಿಗೆ ಸರಣಿ ಸೇರ​ಲಿದೆ. 2 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯ​ನ್ನು ಆಡಲು ಲಂಕಾ ತಂಡ ತೆರ​ಳ​ಲಿದ್ದು ಮೊದಲ ಪಂದ್ಯ ಡಿ.11ರಿಂದ 15ರ ವರೆಗೂ ರಾವ​ಲ್ಪಿಂಡಿ​ಯಲ್ಲಿ ನಡೆ​ಯ​ಲಿದೆ. ಡಿ.19ರಿಂದ 23ರ ವರೆಗೂ ಕರಾ​ಚಿ​ಯಲ್ಲಿ 2ನೇ ಪಂದ್ಯ ನಿಗ​ದಿ​ಯಾ​ಗಿದೆ. 

ವಾರ್ನರ್ ಗುಡುಗು: ಲಂಕಾ ಎದುರು ಆಸಿಸ್ T20 ಸರಣಿ ಕ್ಲೀನ್ ಸ್ವೀಪ್

ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಲಂಕಾ ತಂಡ ಪಾಕಿ​ಸ್ತಾ​ನ​ದಲ್ಲಿ ದ್ವಿಪ​ಕ್ಷೀಯ ಏಕ​ದಿ​ನ ಹಾಗೂ ಟಿ20 ಸರ​ಣಿ​ಯನ್ನು ಆಡಿತ್ತು. ಪ್ರಮುಖ 10 ಆಟ​ಗಾ​ರರು ಪ್ರವಾಸಕ್ಕೆ ಗೈರಾ​ಗಿ​ದ್ದರು. 2009ರಲ್ಲಿ ಶ್ರೀಲಂಕಾ ತಂಡ ಪಾಕಿ​ಸ್ತಾನ ಪ್ರವಾಸದಲ್ಲಿದ್ದ ವೇಳೆ ಆಟ​ಗಾ​ರರ ಮೇಲೆ ಭಯೋ​ತ್ಪಾ​ದ​ಕರು ದಾಳಿ ನಡೆ​ಸಿ​ದ್ದರು. ಆ ಬಳಿಕ ಯಾವುದೇ ತಂಡ ಟೆಸ್ಟ್‌ ಆಡಲು ಪಾಕಿ​ಸ್ತಾ​ನಕ್ಕೆ ತೆರ​ಳಿಲ್ಲ.