Asianet Suvarna News Asianet Suvarna News

Team India ಜತೆ ಕಿವೀಸ್‌, ಇಂಗ್ಲೆಂಡ್ ಕೂಡಾ ನಮ್ಮ ವೈರಿ: ಪಾಕಿಸ್ತಾನ..!

* PCB ಅಧ್ಯಕ್ಷ ರಮೀಜ್‌ ರಾಜಾ ಅವರಿಂದ ಮಹತ್ವದ ಹೇಳಿಕೆ

* Team India ಮಾತ್ರವಲ್ಲ, ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ಕೂಡಾ ನಮ್ಮ ವೈರಿ

* Cricket ವಲಯದಲ್ಲಿ ಸಂಚಲನ ಮೂಡಿಸಿದ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿಕೆ

Pakistan had India on target in T20 WC now New Zealand and England also Says PCB chairman Ramiz Raja kvn
Author
Karachi, First Published Sep 22, 2021, 8:50 AM IST

ಲಾಹೋರ್(ಸೆ.22)‌: ಭದ್ರತಾ ಕಾರಣ ನೀಡಿ ಪಾಕಿಸ್ತಾನ ಪ್ರವಾಸ(Pakistan Tour) ರದ್ದುಗೊಳಿಸಿರುವ ನ್ಯೂಜಿಲೆಂಡ್‌, ಇಂಗ್ಲೆಂಡ್‌ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮುಖ್ಯಸ್ಥ ರಮೀಜ್‌ ರಾಜಾ(Ramiz Raja), ಇನ್ನು ಮುಂದೆ ನ್ಯೂಜಿಲೆಂಡ್‌, ಇಂಗ್ಲೆಂಡ್‌ ಕೂಡಾ ನಮ್ಮ ವೈರಿ ಎಂದಿದ್ದಾರೆ.

‘ಇದುವರೆಗೆ ನಮಗೆ ಭಾರತ ಮಾತ್ರ ಬದ್ಧ ವೈರಿಯಾಗಿತ್ತು. ಆ ಪಟ್ಟಿಗೆ ಈಗ ನ್ಯೂಜಿಲೆಂಡ್‌, ಇಂಗ್ಲೆಂಡ್‌ ಸೇರಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್‌(T20 World Cup)ನಲ್ಲಿ ಅವರನ್ನು ಸೋಲಿಸಿ ತಕ್ಕ ಉತ್ತರ ನೀಡುತ್ತೇವೆ’ ಎಂದಿದ್ದಾರೆ. ‘ನ್ಯೂಜಿಲೆಂಡ್‌, ಇಂಗ್ಲೆಂಡ್‌ ಬಳಿಕ ಇದೀಗ ಆಸ್ಪ್ರೇಲಿಯಾ ಸಹ ತನ್ನ ಪ್ರವಾಸದ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳುತ್ತಿದೆ. ಈ ಮೂರೂ ದೇಶಗಳು ಒಂದೇ ರೀತಿ ವರ್ತಿಸುತ್ತವೆ. ನಾವು ಅಲ್ಲಿಗೆ ಹೋದಾಗ ಅವರು ಹೇಳಿದ ನಿಯಮಗಳನ್ನೆಲ್ಲಾ ಪಾಲಿಸುತ್ತೇವೆ. ಆದರೆ ನಮಗೆ ಸಿಗಬೇಕಿರುವ ಬೆಲೆ ಮಾತ್ರ ಸಿಗುವುದಿಲ್ಲ’ ಎಂದಿದ್ದಾರೆ.

ಉಗ್ರರ ಸಲಹಿದ ಪಾಕಿಸ್ತಾನಕ್ಕೆ ತಕ್ಕ ಪಾಠ; ನ್ಯೂಜಿಲೆಂಡ್ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಪಾಕ್ ಪ್ರವಾಸ ರದ್ದು!

‘ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(England Cricket Board)ಯ ನಿರ್ಧಾರ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ ಇದು ಪಾಕಿಸ್ತಾನ ತಂಡ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಸಾಬೀತುಪಡಿಸುವ ಎಚ್ಚರಿಕೆಯ ಗಂಟೆ. ಪಂದ್ಯ ಮೊಟಕುಗೊಳಿಸಿದ ತಂಡಗಳನ್ನು ಕ್ಷಮಿಸದೆ ಅವರ ವಿರುದ್ಧ ಆಡಲು ನಾವು ಸಿದ್ಧವಾಗಿದ್ದೇವೆ’ ಎಂದಿದ್ದಾರೆ. 

‘ನ್ಯೂಜಿಲೆಂಡ್‌, ಇಂಗ್ಲೆಂಡ್‌ ಆಟಗಾರರು ಪಾಕಿಸ್ತಾನ ಸೂಪರ್‌ ಲೀಗ್‌(ಪಿಸಿಎಲ್‌) ಆಡಲು ಇಲ್ಲಿಗೆ ಬರುತ್ತಾರೆ. ಆಗ ಅವರಿಗೆ ಗಾಬರಿ, ಭೀತಿ ಎದುರಾಗುವುದಿಲ್ಲ. ಒಟ್ಟಾರೆಯಾಗಿ ಅವರು ಪಾಕಿಸ್ತಾನದ ಕಡೆಗೆ ವಿಭಿನ್ನ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2003ರ ಬಳಿಕ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿ ಪಾಕ್‌ ನೆಲದಲ್ಲಿ ಆಯೋಜನೆಗೊಂಡಿತ್ತು. ಮೊದಲ ಏಕದಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಕ್ಷಣೆಯ ಭೀತಿಗೆ ಒಳಗಾದ ಕಿವೀಸ್‌ ತಂಡವು ಹೋಟೆಲ್‌ ಬಿಟ್ಟು ಹೊರಬಂದಿರಲಿಲ್ಲ. ಬಳಿಕ ಪಾಕಿಸ್ತಾನದಿಂದ ತವರಿಗೆ ವಾಪಾಸಾಗಿತ್ತು. ಇದಾಗಿ ಕೆಲ ದಿನಗಳಲ್ಲೇ ಪಾಕಿಸ್ತಾನ ಪ್ರವಾಸದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದೆ. 
 

Follow Us:
Download App:
  • android
  • ios