Asianet Suvarna News Asianet Suvarna News

Shaheen Afridi fined: ಎದುರಾಳಿ ಬ್ಯಾಟರ್‌ಗೆ ಚೆಂಡಲ್ಲಿ ಹೊಡೆದ ಶಾಹೀನ್‌ಗೆ ಬಿತ್ತು ದಂಡ..!

* ಪಾಕ್‌ ವೇಗಿ ಶಾಹೀನ್ ಅಫ್ರಿದಿ ಮಾಡಿದ ಎಡವಟ್ಟಿಗೆ ಬರೆ ಎಳೆದ ಐಸಿಸಿ

* ಬಾಂಗ್ಲಾ ಬ್ಯಾಟರ್‌ ಅಫೀಫ್ ಹುಸೇನ್‌ಗೆ ಚೆಂಡಲ್ಲಿ ಹೊಡೆದ ಅಫ್ರಿದಿಗೆ ದಂಡ

* ಪಂದ್ಯದ ಸಂಭಾವನೆಯ 15% ದಂಡ ವಿಧಿಸಿದ ಐಸಿಸಿ

Pakistan fast Bowler Shaheen Afridi fined after throwing ball at Bangladesh batsman Afif Hussain during 2nd T20I in Dhaka kvn
Author
Bengaluru, First Published Nov 22, 2021, 10:26 AM IST

ದುಬೈ(ನ.22): ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಶನಿವಾರ ನಡೆದ 2ನೇ ಟಿ20 ಪಂದ್ಯದ ವೇಳೆ ಬ್ಯಾಟರ್‌ ಅಫೀಫ್‌ ಹುಸೇನ್‌ಗೆ (Afif Hussain) ಚೆಂಡಲ್ಲಿ ಹೊಡೆದ ಪಾಕಿಸ್ತಾನದ ವೇಗಿ ಶಾಹೀನ್‌ ಅಫ್ರಿದಿಗೆ (Shaheen Afridi) ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ICC) (ಐಸಿಸಿ) ಪಂದ್ಯದ ಸಂಭಾವನೆಯ ಶೇ.15ರಷ್ಟನ್ನು ದಂಡವಾಗಿ ವಿಧಿಸಿದೆ. ಅಫ್ರಿದಿ ಬೌಲಿಂಗ್‌ನಲ್ಲಿ ಅಫೀಫ್‌ ಸಿಕ್ಸರ್‌ ಬಾರಿಸಿದ ಕಾರಣ ಸಿಟ್ಟಾದ ಶಾಹೀನ್‌ ಮುಂದಿನ ಎಸೆತದ ಬಳಿಕ ಚೆಂಡನ್ನು ಸ್ಟಂಫ್ಸ್‌ನತ್ತ ಎಸೆದರು.

ಕ್ರೀಸ್‌ನಲ್ಲಿದ್ದ ಅಫೀಫ್‌ಗೆ ಚೆಂಡು ತಗುಲಿದ ಕಾರಣ ವೈದ್ಯರು ಮೈದಾನಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಅಫೀಫ್‌ಗೆ ದೊಡ್ಡ ಪ್ರಮಾಣದಲ್ಲಿ ಏಟಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ ಬಳಿಕ ಆಟ ಮುಂದುವರಿಸಲಾಯಿತು. ಶಾಹೀನ್‌ ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ.

ಬಾಂಗ್ಲಾದೇಶ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. 

ಪಾಕಿಸ್ತಾನ-ಬಾಂಗ್ಲಾದೇಶ 3ನೇ ಟಿ20 ಪಂದ್ಯ ಇಂದು

ಢಾಕಾ: ಈಗಾಗಲೇ ಬಾಂಗ್ಲಾದೇಶ (Bangladesh Cricket Team) ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿರುವ ಪಾಕಿಸ್ತಾನ, ಸೋಮವಾರ ನಡೆಯಲಿರುವ 3ನೇ ಟಿ20 ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಉತ್ಸಾಹದಲ್ಲಿದೆ. 

IND vs NZ T20: ಅಕ್ಸರ್ ಪಟೇಲ್ ಜಾದೂ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು!

ಈ ವರ್ಷ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದ ಬಾಂಗ್ಲಾದೇಶ, ಪಾಕಿಸ್ತಾನ (Pakistan Cricket Team) ವಿರುದ್ಧ ಹೀನಾಯ ಪ್ರದರ್ಶನ ತೋರಿದ್ದು ವೈಟ್‌ವಾಶ್‌ (White-Wash) ಮುಖಭಂಗ ತಪ್ಪಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಪಾಕಿಸ್ತಾನ, 2022ರ ಟಿ20 ವಿಶ್ವಕಪ್‌ಗೆ (ICC T20 World Cup) ಸಿದ್ಧತೆ ಆರಂಭಿಸಿದ್ದು ಈ ಪಂದ್ಯದಲ್ಲಿ ತನ್ನ ಮೀಸಲು ಪಡೆಯಲ್ಲಿರುವ ಆಟಗಾರರನ್ನು ಪರೀಕ್ಷಿಸಲು ಎದುರು ನೋಡುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿದ ದಕ್ಷಿಣ ಆಫ್ರಿಕಾದ ವೈಟ್‌ಹೆಡ್‌

ಔಡ್‌ತಶೂರ್ನ್‌(ದ.ಆಫ್ರಿಕಾ): ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಶಾನ್‌ ವೈಟ್‌ಹೆಡ್‌ (Sean Whitehead) ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ಸೌಥ್‌ ವೆಸ್ಟರ್ನ್‌ ಡಿಸ್ಟ್ರಿಕ್ಸ್‌ ತಂಡದ ಪರ ಕಣಕ್ಕಿಳಿದಿದ್ದ ವೈಟ್‌ಹೆಡ್‌ ಈಸ್ಟರ್ನ್‌ ಸ್ಟಾರ್ಮ್‌ ತಂಡದ ವಿರುದ್ಧ 12.1 ಓವರಲ್ಲಿ 36 ರನ್‌ಗೆ 10 ವಿಕೆಟ್‌ ಕಬಳಿಸಿದರು. ಇದರ ಪರಿಣಾಮ ಈಸ್ಟರ್ನ್‌ ಸ್ಟಾರ್ಮ್‌ ತಂಡ 65 ರನ್‌ಗೆ ಆಲೌಟ್‌ ಆಯಿತು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತಿದ್ದ ವೈಟ್‌ಹೆಡ್‌ ಪಂದ್ಯದಲ್ಲಿ ಒಟ್ಟು 15 ವಿಕೆಟ್‌ ಕಿತ್ತರು. ವೈಟ್‌ಹೆಡ್‌ 2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಅಂಡರ್‌-19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು.

ಭಾರತ ‘ಎ’ ತಂಡಕ್ಕೆ ಚಹರ್‌, ಇಶಾನ್‌ ಕಿಶನ್‌

ಕೋಲ್ಕತಾ: ವೇಗಿ ದೀಪಕ್‌ ಚಹರ್‌ (Deepak Chahar) ಹಾಗೂ ಯುವ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ (Ishan Kishan) ಭಾರತ ‘ಎ’ ತಂಡಕ್ಕೆ ಸೇರ್ಪಡೆಗೊಂಡಿದ್ದು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ (South Africa Tour) ತೆರಳಲಿದ್ದಾರೆ. ಪ್ರವಾಸದಲ್ಲಿ ಭಾರತ ‘ಎ’ ತಂಡವು ದ.ಆಫ್ರಿಕಾ ‘ಎ’ ವಿರುದ್ಧ 4 ದಿನಗಳ ಮೂರು ಪಂದ್ಯಗಳನ್ನು ಆಡಲಿದೆ. 

Syed Mushtaq Ali Trophy: ಇಂದು ಕರ್ನಾಟಕ-ತಮಿಳುನಾಡು ಫೈನಲ್‌ ಕದನ!

ನ್ಯೂಜಿಲೆಂಡ್‌ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಡಿದ ಈ ಇಬ್ಬರು ಸೋಮವಾರ ಭಾರತ ‘ಎ’ ತಂಡ (India 'A' Squad) ಕೂಡಿಕೊಳ್ಳಲಿದ್ದು, ತಂಡವು ನವೆಂಬರ್ 23ಕ್ಕೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ. ಚೇತನ್‌ ಶರ್ಮಾ (Chethan Sharma) ನೇತೃತ್ವದ ಆಯ್ಕೆ ಸಮಿತಿ ತಂಡದಲ್ಲಿ ಕೇವಲ ಒಬ್ಬ ವಿಕೆಟ್‌ ಕೀಪರನ್ನು ಆಯ್ಕೆ ಮಾಡಿತ್ತು. ಮೀಸಲು ಕೀಪರ್‌ ಅಗತ್ಯವಿದೆ ಎನ್ನುವ ಕಾರಣಕ್ಕೆ ಕಿಶನ್‌ರನ್ನು ಆಯ್ಕೆ ಮಾಡಲಾಗಿದೆ. ಬಿಸಿಸಿಐ (BCCI) ಮೂಲಗಳ ಪ್ರಕಾರ ಕಿಶನ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿದೆ. ನವೆಂಬರ್ 26ರಿಂದ ಸರಣಿ ಆರಂಭಗೊಳ್ಳಲಿದೆ.
 

Follow Us:
Download App:
  • android
  • ios