- Home
- Sports
- Cricket
- ಭಾರತ ಮಹಿಳಾ ತಂಡದ ಟಾಪ್ 5 ಮೋಸ್ಟ್ ಬ್ಯೂಟಿಫುಲ್ ಕ್ರಿಕೆಟರ್ಸ್, ಲಿಸ್ಟ್‌ನಲ್ಲಿದ್ದಾರೆ ನ್ಯಾಶಲ್ ಕ್ರಶ್
ಭಾರತ ಮಹಿಳಾ ತಂಡದ ಟಾಪ್ 5 ಮೋಸ್ಟ್ ಬ್ಯೂಟಿಫುಲ್ ಕ್ರಿಕೆಟರ್ಸ್, ಲಿಸ್ಟ್‌ನಲ್ಲಿದ್ದಾರೆ ನ್ಯಾಶಲ್ ಕ್ರಶ್
ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಿಟ್ಟ ಹೋರಾಟ ನೀಡುತ್ತಿದೆ. ವಿಶೇಷ ಅಂದರೆ ವಿಶ್ವದ ಮಹಿಳಾ ತಂಡಗಳ ಪೈಕಿ ಭಾರತದಲ್ಲಿ ಅತೀ ಹೆಚ್ಚು ಬ್ಯೂಟಿಫುಲ್ ವುಮೆನ್ ಪಟ್ಟ ಗೆದ್ದ ಕ್ರಿಕೆಟಿಗರು ಇದ್ದಾರೆ. ಟಾಪ್ 5 ಲಿಸ್ಟ್ ಇಲ್ಲಿದೆ.

ಮೋಸ್ಟ್ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್ಸ್
ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಿಟ್ಟ ಹೋರಾಟ ಮೂಲಕ ಟೇಬಲ್ ಟಾಪರ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಹೋರಾಟಕ್ಕೆ ಸಜ್ಜಾಗುತ್ತಿದೆ. ಇದೀಗ ಭಾರತ ಮಹಿಳಾ ತಂಡದ ಮೋಸ್ಟ್ ಬ್ಯೂಟಿಫುಲ್ ವುಮೆನ್ ಕ್ರಿಕೆಟರ್ಸ್ ಕುರಿತ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗುತ್ತಿದೆ. ಈ ನಿಟ್ಟಿನಲ್ಲಿ ಟಾಪ್ 5 ಮೋಸ್ಟ್ ಬ್ಯೂಟಿಫುಲ್ ವುಮೆನ್ ಕ್ರಿಕೆಟರ್ಸ್ ಲಿಸ್ಟ್ ಇಲ್ಲಿದೆ.
ಸ್ಮೃತಿ ಮಂಧನಾ
ಸ್ಮೃತಿ ಮಂಧನಾ ಭಾರತ ತಂಡದ ಮಾತ್ರವಲ್ಲ ಇತರ ಎಲ್ಲಾ ಮಹಿಳಾ ತಂಡಗಳಿಗೆ ಹೋಲಿಸಿದರೆ ಬ್ಯೂಟಿಫುಲ್ ವುಮೆನ್ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚಿದ ಬೆನ್ನಲ್ಲೇ ನ್ಯಾಶಲ್ ಕ್ರಶ್ ಆಗಿದ್ದರು. ಇದೀಗ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಸ್ಮೃತಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪರಿಣಾಮ ಭಾರತ ಭರ್ಜರಿ ಗೆಲುವು ದಾಖಲಿಸುತ್ತಿದೆ.
ಹರ್ಲಿನ್ ಡಿಯೋಲ್
ಪಂಜಾಬ್ ಮೂಲಕ ಕ್ರಿಕೆಟರ್ ಹಲ್ಲಿನ್ ಡಿಯೋಲ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಆದರೆ ಹರ್ಲಿನ್ ಮಹಿಳಾ ತಂಡದ ಭಾಗವಾಗಿದ್ದಾರೆ. ಕ್ರಿಕೆಟ್ ಜೊತೆಗೆ ಗ್ಲಾಮರಸ್ ಲೋಕದಲ್ಲಿ ಹರ್ಲಿನ್ ಡಿಯೋಲ್ ಜನಪ್ರಿಯರಾಗಿದ್ದಾರೆ. ಹೆಚ್ಚು ಸ್ಟೈಲಿಶ್ ಉಡುಪುಗಳಿಂದಲೇ ಹರ್ಲಿನ್ ಡಿಯೋಲ್ ಎಲ್ಲರ ಗಮನಸೆಳೆಯುತ್ತಾರೆ.
ಜೇಮಿಯ ರೋಡಿಗ್ರಸ್
ಜೇಮಿಯ ರೋಡಿಗ್ರಸ್ ಭಾರತದ ಮಹಿಳಾ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮಹಿಳಾ ಕ್ರಿಕೆಟರ್. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೇಮಿಯ ರೋಡಿಗ್ರಸ್ ಅಬ್ಬರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ಜೇಮಿಯ ರೋಡಿಗ್ರಸ್ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹರ್ಮನ್‌ಪ್ರೀತ್ ಕೌರ್ ಮೈದಾನದಲ್ಲಿ ತಾಳ್ಮೆಯಿಂದ ಇದ್ದರೂ ಮೈದಾನದ ಹೊರಗಡೆ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಹರ್ಮನ್‌ಪ್ರೀತ್ ಕೌರ್ ಡ್ರೆಸ್ಸಿಂಗ್, ಸ್ಟೈಲ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಭಾರತ ಮಹಿಳಾ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಶ್ರೇಯಾಂಕಾ ಪಾಟೀಲ್
ಕನ್ನಡದ ಹುಡುಗಿ ಶ್ರೇಯಾಂಕ ಪಾಟೀಲ್ ಸದ್ಯ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ತಂಡದಿಂದ ಹೊರಬಿದ್ದಿದ್ದಾರೆ. ಆದರೆ ಮೋಸ್ಟ್ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್ ಪಟ್ಟಿಯಲ್ಲಿ ಶ್ರೇಯಾಂಕ ಪಾಟೀಲ್ ಮುಂಚೂಣಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಫಾಲೋವರ್ಸ್ ಹೊಂದಿರುವ ಶ್ರೇಯಾಂಕ ಪಾಟೀಲ್ ಶೀಘ್ರದಲ್ಲೇ ಇಂಜುರಿಯಿಂದ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

