Asianet Suvarna News Asianet Suvarna News

ಟಿ20 ವಿಶ್ವಕಪ್‌ಗೆ ಪಾಲ್ಗೊಳ್ಳಲು ಪಾಕ್ ಆಟಗಾರರಿಗೆ ವೀಸಾ ನೀಡಿದ ಭಾರತ

ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತ ಸರ್ಕಾರ ವೀಸಾ ನೀಡುವುದಾಗಿ ಖಚಿತ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Pakistan cricketers granted visa permission for ICC T20 World Cup in India kvn
Author
New Delhi, First Published Apr 17, 2021, 6:28 PM IST

ನವದೆಹಲಿ(ಏ.17): ಹಲವು ಸುತ್ತಿನ ಮಾತುಕತೆಯ ಬಳಿಕ ಪಾಕಿಸ್ತಾನ ಕ್ರಿಕೆಟಿಗರು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಸರ್ಕಾರ ವೀಸಾ ನೀಡಲು ಸಮ್ಮತಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಖಚಿತ ಪಡಿಸಿದ್ದಾರೆ. 2021ರ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ.

ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ನೆರೆ ರಾಷ್ಟ್ರಗಳು ಸದ್ಯ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಭಾರತ-ಪಾಕ್‌ ಗಡಿಯಲ್ಲಿ ಉದ್ವಿಘ್ನ ವಾತಾವರಣ ಇರುವುದರಿಂದ ಪಾಕಿಸ್ತಾನ ತಂಡಕ್ಕೆ ವೀಸಾ ನೀಡಬೇಕೇ ಬೇಡವೇ ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಸ್ಪಷ್ಟ ನಿರ್ಧಾರ ಪ್ರಕಟಿಸಿರಲಿಲ್ಲ. ಇದೀಗ ಈ ಹೊಸ ಬೆಳವಣಿಗೆಯಿಂದಾಗಿ ಪಾಕಿಸ್ತಾನ ತಂಡವು ಭಾರತ ಪ್ರವಾಸ ಕೈಗೊಳ್ಳಲು ಹಸಿರು ನಿಶಾನೆ ಸಿಕ್ಕಂತೆ ಆಗಿದೆ. ಆದರೆ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳಿಗೆ ಭಾರತಕ್ಕೆ ಬರಲು ಸರ್ಕಾರ ವೀಸಾ ಅನುಮತಿ ನೀಡಲಿದೆಯೇ ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಟಿ20 ವಿಶ್ವಕಪ್‌ಗೆ ವೀಸಾ ಕೊಡಿ, ಇಲ್ಲವೇ ಭಾರತದಿಂದ ವಿಶ್ವಕಪ್‌ ಎತ್ತಂಗಡಿ ಮಾಡಿ: ಪಾಕ್‌ ಎಚ್ಚರಿಕೆ

ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್‌ ಮಣಿ ಭಾರತ ನೀಡುವ ಕುರಿತಂತೆ ಐಸಿಸಿ ಲಿಖಿತ ಭರವಸೆ ನೀಡಬೇಕೆಂದು ಆಗ್ರಹಿಸಿದ್ದರು. ಒಂದು ವೇಳೆ ವೀಸಾ ನೀಡುವ ಬಗ್ಗೆ ಲಿಖಿತ ಭರವಸೆ ನೀಡದಿದ್ದರೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಿದ್ದರು.
 

Follow Us:
Download App:
  • android
  • ios