ಸಾರ್ವಕಾಲಿಕ ಶ್ರೇಷ್ಠ ಭಾರತ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ
ಭಾರತದ ಸಾರ್ವಕಾಲಿಕ ಶ್ರೇಷ್ಠ T20 XI ತಂಡವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆಯ್ಕೆ ಮಾಡಿದ್ದಾರೆ
cricket-sports Jan 21 2026
Author: Naveen Kodase Image Credits:X
Kannada
ಆರಂಭಿಕರಾಗಿ ರೋಹಿತ್-ಸೆಹ್ವಾಗ್
ಆಕಾಶ್ ಚೋಪ್ರಾ ತಂಡದಲ್ಲಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತು ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿದ್ದಾರೆ. ಈ ಇಬ್ಬರು ಸ್ಪೋಟಕ ಆರಂಭ ಒದಗಿಸಿಕೊಡುವಲ್ಲಿ ನಿಸ್ಸೀಮರಾಗಿದ್ದಾರೆ
Image credits: Getty
Kannada
ಮೂರನೇ ಕ್ರಮಾಂಕಕ್ಕೆ ಸುರೇಶ್ ರೈನಾ
ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ಆಕಾಶ್ ಚೋಪ್ರಾ ಮೂರನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. ರೈನಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
Image credits: Getty
Kannada
ಅಚ್ಚರಿ ರೀತಿಯಲ್ಲಿ ಯೂಸುಫ್ ಪಠಾಣ್‌ಗೆ ಸ್ಥಾನ
ಇನ್ನು ತೀರಾ ಅಚ್ಚರಿ ಎನ್ನುವಂತೆ ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ಪಠಾಣ್ ನಾಲ್ಕನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Image credits: x
Kannada
ನಾಯಕ& ವಿಕೆಟ್ ಕೀಪರ್ ಆಗಿ ಧೋನಿ
ಭಾರತದ ಸಾರ್ವಕಾಲಿಕ ಶ್ರೇಷ್ಠ ತಂಡದ ವಿಕೆಟ್ ಕೀಪರ್ ಮತ್ತು ನಾಯಕನಾಗಿ ಎಂ ಎಸ್ ಧೋನಿಯನ್ನು ಆಕಾಶ್ ಚೋಪ್ರಾ ಆಯ್ಕೆ ಮಾಡಿದ್ದಾರೆ.
Image credits: Getty
Kannada
ಮ್ಯಾಚ್ ಫಿನಿಶರ್ ಆಗಿ ಹಾರ್ದಿಕ್ ಪಾಂಡ್ಯ
ಆಕಾಶ್ ಚೋಪ್ರಾ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಫಿನಿಶರ್ ಮತ್ತು ಆಲ್‌ರೌಂಡರ್ ಆಗಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಪಾಂಡ್ಯ ಆಲ್ರೌಂಡ್ ಸ್ಕಿಲ್ ಬಗ್ಗೆ ಯಾರಿಗೂ ಅನುಮಾನವಿಲ್ಲ
Image credits: Getty
Kannada
ಸ್ಪಿನ್ನರ್‌ಗಳಾಗಿ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ
ಇನ್ನುಳಿದಂತೆ ಆಕಾಶ್ ಚೋಪ್ರಾ ತಂಡದಲ್ಲಿ ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಮತ್ತು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಸ್ಥಾನ ಪಡೆದುಕೊಂಡಿದ್ದಾರೆ.
Image credits: AFP
Kannada
ಭುವಿ-ಬುಮ್ರಾ-ಅರ್ಶದೀಪ್ ತ್ರಿವಳಿ ವೇಗಿಗಳು
ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೂ ಆಕಾಶ್ ಚೋಪ್ರಾ ಸಾರ್ವಕಾಲಿಕ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿದ್ದಾರೆ.
Image credits: AFP
Kannada
ಹಲವು ಟಿ20 ದಿಗ್ಗಜರನ್ನು ಕೈಬಿಟ್ಟ ಆಕಾಶ್ ಚೋಪ್ರಾ
ಆಕಾಶ್ ಚೋಪ್ರಾ ಯುವರಾಜ್ ಸಿಂಗ್, ಯುಜುವೇಂದ್ರ ಚಹಲ್, ವಿರಾಟ್ ಕೊಹ್ಲಿಯವರಂತಹ ಆಟಗಾರರನ್ನು ಪರಿಗಣಿಸದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.