ಬ್ಯಾಟ್ ಮೇಲೆ ಪ್ಯಾಲೆಸ್ತಿನ್ ಬೆಂಬಲಿಸಿ ಸ್ಟಿಕ್ಕರ್, ಪಾಕ್ ಕ್ರಿಕೆಟಿಗ ಅಜಮ್ ಖಾನ್‌ಗೆ ದಂಡ!
ಕ್ರಿಕೆಟ್ ಮೈದಾನದಲ್ಲಿ ಪ್ಯಾಲೆಸ್ತಿನ್ ಬೆಂಬಲಿಸಿದ ಪಾಕಿಸ್ತಾನ ಕ್ರಿಕೆಟಿಗರು ಈಗಾಗಲೇ ವಿವಾದಕ್ಕೆ ಗುರಿಯಾಗಿದ್ದಾರೆ. ಇದೀಗ ಕ್ರಿಕೆಟಿಗ ಅಜಮ್ ಖಾನ್ ವಿವಾದ ಮಾತ್ರವಲ್ಲ ದಂಡ ಕಟ್ಟಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ತಮ್ಮ ಬ್ಯಾಟ್ ಮೇಲೆ ಪ್ಯಾಲೆಸ್ತಿನ್ ಬೆಂಬಲಿಸಿ ಸ್ಟಿಕ್ಕರ್ ಅಂಟಿಸಿ ಅಖಾಡಕ್ಕಿಳಿದು ನಿಯಮ ಉಲ್ಲಂಘಿಸಿದ್ದಾರೆ.
ಕರಾಚಿ (ನ.27) ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಪ್ರತಿದಾಳಿಯನ್ನು ಅರಬ್ ರಾಷ್ಟ್ರಗಳು, ಮುಸ್ಲಿಂ ರಾಷ್ಟ್ರಗಳು ವಿರೋಧಿಸಿದೆ. ಭಾರಿ ಪ್ರತಿಭಟನೆಯನ್ನೂ ನಡೆಸುತ್ತಿದೆ. ಇದರ ನಡುವೆ ಹಲವರು ತಮ್ಮದೇ ಶೈಲಿಯಲ್ಲಿ ಪ್ರತಿಭಟನೆ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಪಾಕಿಸ್ತಾನ ಕ್ರಿಕೆಟಿಗ ಅಜಮ್ ಖಾನ್ ಟಿ20 ಟೂರ್ನಿಯಲ್ಲಿ ಪ್ಯಾಲೆಸ್ತಿನ್ ಬೆಂಬಲಿಸಿ ವಿವಾದಕ್ಕೆ ಗುರಿಯಾಗಿದೆ. ಟಿ20 ಪಂದ್ಯದಲ್ಲಿ ಬಾಬರ್ ಅಜಮ್ ತಮ್ಮ ಬ್ಯಾಟ್ ಮೇಲೆ ಗಾಜಾ ಜನತೆ ಬೆಂಬಲಿಸಿ ಪ್ಯಾಲೆಸ್ತಿನ್ ಧ್ವಜದ ಸ್ಟಿಕ್ಕರ್ ಅಂಟಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ವಿವಾದ ಜೋರಾಗುತ್ತದ್ದಂತೆ ಪಾಕಿಸ್ತಾನ ಕ್ರಿಕಟ್ ಮಂಡಳಿ ಅಜಮ್ ಖಾನ್‌ಗೆ ದಂಡ ವಿಧಿಸಿದೆ.
ಪಾಕಿಸ್ತಾನದಲ್ಲಿ ನ್ಯಾಷನಲ್ ಟಿ20 ಟೂರ್ನಿ ನಡೆಯುತ್ತಿದೆ. ಕರಾಚಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಜಮ್ ಕರಾಚಿ ವೈಟ್ ಹಾಗೂ ಲಾಹೋರ್ ಬ್ಲೂಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪ್ಯಾಲೆಸ್ತಿನ್ ಹಾಗೂ ಗಾಜಾ ಜನತೆಯನ್ನು ಬೆಂಬಲಿಸಿ ಅಜಮ್ ಖಾನ್ ತಮ್ಮ ಬ್ಯಾಟ್ ಮೇಲೆ ಪ್ಯಾಲೆಸ್ತಿನ್ ಧ್ವಜ ಸ್ಟಿಕ್ಕರ್ ಅಂಟಿಸಿದ್ದರು. ಇದು ನಿಯಮಕ್ಕೆ ವಿರುದ್ಧವಾಗಿತ್ತು. ಈ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಪಂದ್ಯ ಸೋತ ಪಾಕ್‌ಗೆ ಶಾಕ್, ಮೈದಾನದಲ್ಲಿ ನಮಾಜ್ ಮಾಡಿದ ರಿಜ್ವಾನ್ ವಿರುದ್ಧ ದೂರು ದಾಖಲು!
ಕ್ರೀಡಾ ಸಮವಸ್ತ್ರ ಹಾಗೂ ಕ್ರೀಡಾ ಸಲಕರಣೆ ನಿಯಮ ಉಲ್ಲಂಘಿಸಿದ ಅಜಮ್‌ಗೆ ಪಿಸಿಬಿ ದಂಡ ವಿಧಿಸಿದೆ. ಪಂದ್ಯದ ಶೇಕಡಾ 50 ರಷ್ಟು ಸಂಭಾವನೆಯನ್ನ ದಂಡ ರೂಪದಲ್ಲಿ ಪಾವತಿ ಮಾಡುವಂತೆ ಸೂಚಿಸಿದೆ. ಕಳೆದೆರಡು ಪಂದ್ಯದಲ್ಲಿ ಅಜಮ್ ಈ ಸ್ಟಿಕ್ಕರ್ ಅಂಟಿಸಿ ಬ್ಯಾಟಿಂಗ್ ಮಾಡಿದ್ದರು. ಈ ವೇಳೆ ಪಂದ್ಯದ ರೆಫ್ರಿ ಸೇರಿದಂತೆ ಅಧಿಕಾರಿಗಳು ಅಜಮ್‌ಗೆ ಸ್ಟಿಕ್ಕರ್ ತೆಗೆಯುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅಜಮ್ ಖಾನ್ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಅಜಮ್‌ಗೆ ಪಿಸಿಬಿ ಎಚ್ಚರಿಕೆ ನೀಡಿದೆ. ತಕ್ಷಣವೇ ಸ್ಟಿಕ್ಕರ್ ತೆಗೆದು ದಂಡ ಪಾವತಿ ಸೂಚಿಸಿದೆ. ಇಷ್ಟೇ ಅಲ್ಲ ಐಸಿಸಿ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದೆ. ಪ್ಯಾಲೆಸ್ತಿನ್ ಬೆಂಬಲಿಸಿ ಈಗಾಗಲೇ ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಭಾರಿ ಟೀಕೆ ಎದುರಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ರಿಜ್ವಾನ್ ಪ್ಯಾಲೆಸ್ತಿನ್ ಬೆಂಬಲ ಘೋಷಿಸಿ ವಿವಾದಕ್ಕೆ ಗುರಿಯಾಗಿದ್ದರು.
'ನನ್ನ ಶತಕ ಗಾಜಾದ ನನ್ನ ಅಣ್ಣ-ತಂಗಿಯರಿಗೆ ಅರ್ಪಣೆ': ಪಾಕ್ ಕ್ರಿಕೆಟಿಗ ರಿಜ್ವಾನ್
ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಾವು ಸಿಡಿಸಿದ ಹೋರಾಟದ ಶತಕವನ್ನು ಪಾಕಿಸ್ತಾನದ ತಾರಾ ಬ್ಯಾಟರ್ ಮೊಹಮದ್ ರಿಜ್ವಾನ್ ಗಾಜಾದ ಜನರಿಗೆ ಅರ್ಪಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಿಜ್ವಾನ್, ‘ಈ ಶತಕ ಗಾಜಾದ ನನ್ನ ಸಹೋದರ, ಸಹೋದರಿಯರಿಗೆ ಅರ್ಪಣೆ’ ಎಂದಿದ್ದರು. ಆದರೆ ರಿಜ್ವಾನ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವರು ಭಾರಿ ಟೀಕೆ ವ್ಯಕ್ತಪಡಿಸಿದ್ದು, ರಿಜ್ವಾನ್‌ರನ್ನು ವಿಶ್ವಕಪ್‌ನಿಂದ ಹೊರಹಾಕುವಂತೆ ಆಗ್ರಹಿಸಿದ್ದಾರೆ. ಪಾಕಿಸ್ತಾನ ತಂಡವನ್ನೇ ಟೂರ್ನಿಯಿಂದ ಹೊರ ಕಳುಹಿಸಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.