* ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್‌ ರೋಚಕ ಡ್ರಾನಲ್ಲಿ ಅಂತ್ಯ* ಪಾಕಿಸ್ತಾನ ಪಾಲಿಗೆ ಆಪತ್ಬಾಂಧವನಾದ ಸರ್ಫರಾಜ್ ಖಾನ್* ಕೊನೆಯ 3 ಓವರ್‌ನಲ್ಲಿ 15 ರನ್ ಗಳಿಸಬೇಕಾಗಿತ್ತು, ಈ ವೇಳೆ ಪಂದ್ಯ ಸ್ಥಗಿತ

ಕರಾಚಿ(ಜ.07): ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಿನ 2ನೇ ಟೆಸ್ಟ್‌ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಕೊನೆ ಕ್ಷಣದ ವರೆಗೂ ಎರಡೂ ತಂಡಗಳು ಗೆಲ್ಲಲು ನಡೆಸಿದ ಹೋರಾಟ ಕೈಗೂಡದಿದ್ದರೂ ರೋಚಕತೆಗೆ ಕೊರತೆ ಇರಲಿಲ್ಲ. 319 ರನ್‌ ಗುರಿ ಬೆನ್ನತ್ತಿದ್ದ ಪಾಕಿಸ್ತಾನದ 4ನೇ ದಿನದಂತ್ಯಕ್ಕೆ ಖಾತೆ ತೆರೆಯದೆ 2 ವಿಕೆಟ್‌ ಕಳೆದುಕೊಂಡಿತ್ತು. 5ನೇ ಹಾಗೂ ಅಂತಿಮ ದಿನವಾದ ಶುಕ್ರವಾರ 8 ವಿಕೆಟ್‌ ಉರುಳಿಸಿದ್ದರೆ ಕಿವೀಸ್‌ಗೆ ಗೆಲುವು ದೊರೆಯುತ್ತಿತ್ತು. ಆದರೆ ಮಾಜಿ ನಾಯಕ ಸರ್ಫರಾಜ್‌ ಅಹ್ಮದ್‌ ಪಾಕಿಸ್ತಾನದ ಪಾಲಿನ ಆಪತ್ಭಾಂದವರಾದರು.

ಪಾಕಿಸ್ತಾನ 9 ವಿಕೆಟ್‌ಗೆ 308 ರನ್‌ ಗಳಿಸಿದ್ದಾಗ ಮಂದ ಬೆಳಕಿನ ಕಾರಣ ಪಂದ್ಯ ಡ್ರಾಗೊಳಿಸಲಾಯಿತು. ಪಾಕಿಸ್ತಾನದ ಗೆಲುವಿಗೆ 3 ಓವರಲ್ಲಿ 15 ರನ್‌ ಬೇಕಿತ್ತು. ನ್ಯೂಜಿಲೆಂಡ್‌ ಗೆಲುವಿನಿಂದ ಕೇವಲ 1 ವಿಕೆಟ್‌ ದೂರದಲ್ಲಿತ್ತು.

ಪಾಕಿಸ್ತಾನ ದಿನದಾಟದ ಆರಂಭದಲ್ಲಿ 80 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ವಿಕೆಟ್‌ಗೆ ಸೌದ್‌ ಶಕೀಲ್‌ ಜೊತೆ 123 ರನ್‌ ಜೊತೆಯಾಟವಾಡಿದ ಸರ್ಫರಾಜ್‌ 135 ಎಸೆತಗಳಲ್ಲಿ ಶತಕ ಪೂರೈಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ಅವಕಾಶವನ್ನೂ ಸೃಷ್ಟಿಸಿದರು. 7ನೇ ವಿಕೆಟ್‌ಗೆ ಅಘಾ ಸಲ್ಮಾನ್‌ ಜೊತೆ 70 ರನ್‌ ಸೇರಿಸಿದ ಸರ್ಫರಾಜ್‌, 118 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಕೊನೆ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ನಸೀಂ ಶಾ ಹಾಗೂ ಅಬ್ರಾರ್‌ ಅಹ್ಮದ್‌ 21 ಎಸೆತಗಳನ್ನು ಎದುರಿಸಿ ವಿಕೆಟ್‌ ಉಳಿಸಿಕೊಂಡು ತಂಡ ಸೋಲದಂತೆ ನೋಡಿಕೊಂಡರು. ಸರಣಿ 0-0ಯಲ್ಲಿ ಡ್ರಾಗೊಂಡಿತು.

ಸ್ಕೋರ್‌: ನ್ಯೂಜಿಲೆಂಡ್‌ 449 ಹಾಗೂ 277/5 ಡಿ., 
ಪಾಕಿಸ್ತಾನ 408 ಹಾಗೂ 304/9(ಸರ್ಫರಾಜ್‌ 118, ಶಕೀಲ್‌ 32, ಸಲ್ಮಾನ್‌ 30, ಬ್ರೇಸ್‌ವೆಲ್‌ 4-75)

ಏಷ್ಯಾಕಪ್‌ ಬಗ್ಗೆ ಪಿಸಿಬಿ ಆಕ್ಷೇಪ ನಿರಾಧಾರ: ಎಸಿಸಿ

ಕೌಲಾಲಂಪುರ: ಏಷ್ಯನ್‌ ಕ್ರಿಕೆಟ್‌ ಸಮಿತಿ (ಎಸಿಸಿ) ಮುಖ್ಯಸ್ಥ ಜಯ್‌ ಶಾ ಪ್ರಕಟಿಸಿದ್ದ ಏಷ್ಯಾಕಪ್‌ ಸೇರಿದಂತೆ 2 ವರ್ಷಗಳ ಕ್ರಿಕೆಟ್‌ ವೇಳಾಪಟ್ಟಿಏಕಪಕ್ಷೀಯವಾಗಿದೆ ಎಂದು ದೂರಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷ ನಜಂ ಸೇಠಿಗೆ ಶುಕ್ರವಾರ ಎಸಿಸಿ ತಿರುಗೇಟು ನೀಡಿದ್ದು, ಸೇಠಿ ಆರೋಪ ಆಧಾರರಹಿತ ಎಂದಿದೆ.

‘ಡಿ.12ಕ್ಕೆ ನಡೆದ ಎಸಿಸಿ ಸಭೆಯಲ್ಲಿ ಎಲ್ಲಾ ಸದಸ್ಯ ದೇಶಗಳೊಂದಿಗೆ ಚರ್ಚಿಸಿದ ಬಳಿಕವೇ ಕ್ರಿಕೆಟ್‌ ವೇಳಾಪಟ್ಟಿರಚಿಸಲಾಗಿದೆ. ಇದರ ಪ್ರತಿಗಳನ್ನು ಡಿ.22ರಂದು ಪಾಕಿಸ್ತಾನ ಸೇರಿದಂತೆ ಎಲ್ಲಾ ಕ್ರಿಕೆಟ್‌ ಮಂಡಳಿಗೂ ಕಳುಹಿಸಿಕೊಟ್ಟಿದ್ದೇವೆ. ಆದರೆ ಪಿಸಿಬಿ ಯಾವುದೇ ಉತ್ತರ ನೀಡಿರಲಿಲ್ಲ. ಇತರೆ ಮಂಡಳಿಗಳಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗದ ಕಾರಣ ವೇಳಾಪಟ್ಟಿಪ್ರಕಟಿಸಲಾಗಿದೆ. ಹೀಗಾಗಿ ಸಾಮಾಜಿಕ ತಾಣದಲ್ಲಿ ಸೇಠಿ ನೀಡಿದ ಹೇಳಿಕೆ ಆಧಾರಹಿತ ಹಾಗೂ ಅದನ್ನು ಎಸಿಸಿ ಬಲವಾಗಿ ನಿರಾಕರಿಸುತ್ತದೆ’ ಎಂದು ಎಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Ind vs SL ಹಸರಂಗಗೆ 6 6 6 ಹ್ಯಾಟ್ರಿಕ್‌ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್..! ವಿಡಿಯೋ ವೈರಲ್

2023-24ರ ವೇಳಾಪಟ್ಟಿ ರಚನೆ ಹಾಗೂ ಪ್ರಮುಖವಾಗಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಏಷ್ಯಾಕಪ್‌ ಬಗ್ಗೆ ಶಾ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಗುರುವಾರ ಸೇಠಿ ಆರೋಪಿಸಿದ್ದರು.

ಆಸೀಸ್‌-ದ.ಆಫ್ರಿಕಾ ಟೆಸ್ಟ್‌: 3ನೇ ದಿನದಾಟ ಮಳೆಗೆ ಬಲಿ

ಸಿಡ್ನಿ: ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್‌ ಪಂದ್ಯದ 3ನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು. ಇನ್ನೆರಡು ದಿನವೂ ಮಳೆ ಸಾಧ್ಯತೆ ಇದ್ದು, ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ಪಂದ್ಯ ಗೆದ್ದು ಕ್ಲೀನ್‌ಸ್ವೀಪ್‌ ಸಾಧಿಸುವ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳುವ ಆಸೀಸ್‌ ಕನಸಿಗೆ ಹಿನ್ನಡೆಯುಂಟಾಗಿದೆ. ಸದ್ಯ ಆಸೀಸ್‌ ಮೊದಲ ಇನ್ನಿಂಗ್‌್ಸನಲ್ಲಿ 4 ವಿಕೆಟ್‌ಗೆ 475 ರನ್‌ ಕಲೆ ಹಾಕಿದೆ.