ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಬಾಬರ್ ಅಜಂ ಮೂರು ಮಾದರಿಯಲ್ಲೂ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗಾಗಿ ಆರಂಭಿಕ ಬ್ಯಾಟರ್ ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದರೆ, ಶಾಹೀನ್ ಅಫ್ರಿದಿ ಪಾಕಿಸ್ತಾನ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಮೆಲ್ಬರ್ನ್(ಡಿ.02): ಪಾಕಿಸ್ತಾನ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಶುಕ್ರವಾರ ಆಸ್ಟ್ರೇಲಿಯಾಗೆ ಬಂದಿಳಿದಿದೆ. ಡಿಸೆಂಬರ್ 14ರಂದು ಪಾಕಿಸ್ತಾನ ತಂಡವು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟ್ ಪಂದ್ಯಗಳನ್ನಾಡಲಿದೆ. ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಂದು ಮುಖಭಂಗ ಎದುರಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಬಾಬರ್ ಅಜಂ ಮೂರು ಮಾದರಿಯಲ್ಲೂ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗಾಗಿ ಆರಂಭಿಕ ಬ್ಯಾಟರ್ ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗಿದ್ದರೆ, ಶಾಹೀನ್ ಅಫ್ರಿದಿ ಪಾಕಿಸ್ತಾನ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಮ್ಯಾನೇಜ್‌ಮೆಂಟ್‌ನಲ್ಲೂ ಮೇಜರ್ ಸರ್ಜರಿಯಾಗಿದ್ದು, ಮೊಹಮ್ಮದ್ ಹಫೀಜ್ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕವಾಗಿದ್ದರೆ, ವಹಾಬ್ ರಿಯಾಜ್ ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
Vijay Hazare Trophy ದೇವದತ್ ಪಡಿಕ್ಕಲ್ ಮತ್ತೊಂದು ಶತಕ, ರಾಜ್ಯಕ್ಕೆ ಸತತ 5ನೇ ಗೆಲುವು
ಇನ್ನು ಕಾಂಗರೂ ನಾಡಿಗೆ ಟೆಸ್ಟ್ ಸರಣಿಯನ್ನಾಡಲು ಬಂದಿಳಿದ ಪಾಕಿಸ್ತಾನ ಆಟಗಾರರಿಗೆ ಮತ್ತೊಮ್ಮೆ ಮುಖಭಂಗ ಎದುರಾಗಿದೆ. ಆಸೀಸ್‌ಗೆ ಬಂದಿಳಿದ ಪಾಕಿಸ್ತಾನ ಆಟಗಾರರ ಕ್ರಿಕೆಟ್ ಕಿಟ್ ಇಳಿಸಲು ಕೂಡಾ ಯಾರೂ ಇರಲಿಲ್ಲ. ವಿಮಾನದಿಂದ ಬಂದ ಕಿಟ್‌ಗಳನ್ನು ಸ್ವತಃ ಪಾಕಿಸ್ತಾನದ ಆಟಗಾರರು ಟ್ರಕ್‌ಗೆ ಲೋಡ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಕುರಿತಂತೆ ಮಿರ್ಜಾ ಇಕ್ಬಾಲ್ ಬಿಲಾಲ್ ಎನ್ನುವವರು ಟ್ವೀಟ್ ಮಾಡಿದ್ದು, ಸರಣಿಯ ಆತಿಥ್ಯ ವಹಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಲಾಜಿಸ್ಟಿಕ್ಸ್‌ಗೂ ಸೂಕ್ತ ವ್ಯವಸ್ಥೆ ಮಾಡಿಲ್ಲ. ಪಾಕಿಸ್ತಾನದ ಆಟಗಾರರು ಸ್ವತಃ ಲಗೇಜ್ ತುಂಬುವುದರಲ್ಲಿ ಬ್ಯುಸಿಯಾಗಿದ್ದಾರೆ. ಎಂತಾ ವಿಚಿತ್ರವಿದು. ಇದೇ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದರೇ ಇಡೀ ಜಗತ್ತಿನಾದ್ಯಂತ ಸುದ್ದಿಯಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಫಿಕ್ಸಿಂಗ್‌ನಲ್ಲಿ ಜೈಲು ಸೇರಿದ್ದ ಸಲ್ಮಾನ್ ಈಗ ಪಾಕಿಸ್ತಾನ ಆಯ್ಕೆ ಸಮಿತಿಯ ಸದಸ್ಯ!
ಲಾಹೋರ್: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿ, ಜೈಲು ಸೇರಿದ್ದ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್‌ರನ್ನು ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ರಾಷ್ಟ್ರೀಯ ಆಯ್ಕೆ ಸಮಿತಿಗೆ ನೇಮಿಸಿದೆ. 39 ವರ್ಷದ ಬಟ್ 2010ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಫಿಕ್ಸಿಂಗ್ ನಡೆಸಿ 5 ವರ್ಷ ನಿಷೇಧಕ್ಕೊಳಗಾಗಿದ್ದಲ್ಲದೇ, ಕೆಲ ಕಾಲ ಜೈಲಿನಲ್ಲಿದ್ದರು. ಬಳಿಕ 2016ರಲ್ಲಿ ಕ್ರಿಕೆಟ್‌ಗೆ ಮರಳಿದ್ದರೂ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಸದ್ಯ ಅವರ ಜೊತೆ ಕಮ್ರಾನ್ ಅಕ್ಮಲ್, ಇಫ್ತಿಕಾರ್ ಅಂಜುಮ್‌ರನ್ನು ಪಿಸಿಬಿ ಆಯ್ಕೆ ಸಮಿತಿಗೆ ನೇಮಕ ಮಾಡಿದೆ. 3 ತಿಂಗಳ ಹಿಂದಷ್ಟೇ ನಿವೃತ್ತಿ ಪಡೆದಿದ್ದ ವೇಗಿ ವಹಾಬ್ ರಿಯಾಜ್ ಇತ್ತೀಚೆಗಷ್ಟೇ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
