ಐಪಿಎಲ್‌ ಹರಾಜಿನಲ್ಲಿ ರಿಷಬ್‌ ಪಂತ್‌ ದಾಖಲೆಯ 27 ಕೋಟಿಗೆ ಮಾರಾಟವಾಗಿದ್ದಾರೆ. ಆದರೆ ಇದಕ್ಕೆ ಕಾರಣವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹರಾಜು ಟೇಬಲ್‌ನಲ್ಲಿ ಕೂತಿದ್ದ ಕಿರಣ್‌ ಗ್ರಾಂಧಿ.

ಬೆಂಗಳೂರು (ನ.27): ಆಕ್ರಮಣಕಾರಿ ಬಿಡ್ಡಿಂಗ್‌ ಹಾಗೂ ಚಾಣಾಕ್ಷ ಹರಾಜು ತಂತ್ರಗಳ ಕಾರಣದಿಂದಾಗಿಯೇ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಟೀಮ್‌ನ ಮಾಲೀಕ ಕಿರಣ್‌ ಕುಮಾರ್‌ ಗ್ರಾಂಧಿ ಪ್ರಸಿದ್ಧರು. ಈ ಬಾರಿಯ ಹರಾಜಿನಲ್ಲಿ ರಿಷಬ್‌ ಪಂತ್‌ರನ್ನು 27 ಕೋಟಿಗೆ ಹಾಗೂ ಶ್ರೇಯಸ್‌ ಅಯ್ಯರ್‌ ಅವರನ್ನು 26.65 ಕೋಟಿಗೆ ಮಾರಾಟವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿರಣ್‌ ಗ್ರಾಂಧಿ ತಮ್ಮ ಟೀಮ್‌ಗೆ ಕೆಎಲ್‌ ರಾಹುಲ್‌ ಅವರನ್ನು ಬರೀ 14 ಕೋಟಿಗೆ ಖರೀದಿ ಮಾಡಿದ್ದರು. ಅವರ ಈ ಚಾಣಾಕ್ಷ ಹರಾಜು ತಂತ್ರದ ಕಾರಣದಿಂದಾಗಿ ಚಾಣಾಕ್ಯನಿಗಿಂತ ದೊಡ್ಡ ಮಾಸ್ಟರ್‌ ಮೈಂಡ್‌ ಎಂದು ಸೋಶಿಯಲ್‌ ಮೀಡಿಯಾ ಇವರನ್ನು ಕರೆದಿದೆ. ಅದರಲ್ಲೂ ಕೆಎಲ್‌ ರಾಹುಲ್‌ ಅವರನ್ನು 14 ಕೋಟಿಗೆ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದು, ಇವರ ತಂತ್ರಕ್ಕೆ ಸಿಕ್ಕ ದೊಡ್ಡ ಫಲ ಎಂದು ಬಣ್ಣಿಸಿದ್ದಾರೆ.

ಕಿರಣ್‌ ಕುಮಾರ್‌ ಗ್ರಾಂಧಿಗೆ ಐಪಿಎಲ್‌ ಹರಾಜಿನಲ್ಲಿ ರಿಷಬ್‌ ಪಂತ್‌ರನ್ನಾಗಲಿ, ಶ್ರೇಯಸ್‌ ಅಯ್ಯರ್‌ರನ್ನಾಗಿ ಖರೀದಿ ಮಾಡುವ ಉದ್ದೇಶವೇ ಇದ್ದಿರಲಿಲ್ಲ. ಆದರೆ, ಗರಿಷ್ಠ ಹಣ ಹೊಂದಿದ್ದ ಪಂಜಾಬ್‌ ಕಿಂಗ್ಸ್‌ ಹಾಗೂ ಲಖನೌ ಸೂಪರ್‌ ಕಿಂಗ್ಸ್‌ನ ಹಣವನ್ನು ಕೆಎಲ್‌ ರಾಹುಲ್‌ ಹೆಸರು ಬರುವ ಮುನ್ನವೇ ಖಾಲಿ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆ ಲಖನೌ ಸೂಪರ್‌ ಕಿಂಗ್ಸ್‌ಗೆ ರಿಷಬ್‌ ಪಂತ್‌ರನ್ನು 27 ಕೋಟಿಗೆ ಮಾರಾಟ ಮಾಡಿದರೆ, ಪಂಜಾಬ್‌ ಕಿಂಗ್ಸ್‌ 26.65 ಕೋಟಿಗೆ ಶ್ರೇಯಸ್‌ ಅಯ್ಯರ್‌ರನ್ನು ಖರೀದಿ ಮಾಡುವಂತೆ ಬಿಡ್‌ ಮಾಡಿದ್ದರು.

ಐಪಿಎಲ್‌ ಹರಾಜಿನ ಮಾಸ್ಟರ್‌ಮೈಂಡ್‌ ಜೀವನದ ಬಗ್ಗೆ ತಿಳಿಯುವುದಾದರೆ, ಅವರ ಜೀವನದಲ್ಲಿ ಬರೀ ಕ್ರಿಕೆಟ್‌ ಮಾತ್ರವೇ ಅಲ್ಲ, ಉದ್ಯಮಿಯಾಗಿ ದೊಡ್ಡ ಮಟ್ಟದ ಯಶಸ್ಸನ್ನು ಅವರು ಸಂಪಾದನೆ ಮಾಡಿದ್ದಾರೆ.

ಯಾರಿವರು ಕಿರಣ್‌ ಗ್ರಾಂಧಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಚೇರ್ಮನ್‌ ಹಾಗೂ ಸಹ ಮಾಲೀಕ ಕಿರಣ್‌ ಕುಮಾರ್‌ ಗ್ರಾಂಧಿ. ವಾಣಿಜ್ಯ ಪದವೀಧರರಾಗಿರುವ ಕಿರಣ್‌ ಕುಮಾರ್‌, ಉದ್ಯಮಿ ಜಿಎಂ ರಾವ್‌ ಅವರ ಕಿರಿಯ ಪುತ್ರ. 1999 ರಿಂದಲೂ ಅವರು ಜಿಎಂಆರ್‌ ಬೋರ್ಡ್‌ನ ಪ್ರಮುಖ ಸದಸ್ಯರಾಗಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್‌ (ಡೆಲ್ಲಿ ಕ್ಯಾಪಿಟಲ್ಸ್‌) ತಂಡವನ್ನು ಶೇಪ್‌ ಮಾಡುವಲ್ಲಿ ಕಿರಣ್‌ ಕುಮಾರ್‌ ಅವರ ಪಾತ್ರವೇ ಪ್ರಮುಖವಾದದ್ದು. ಈವರೆಗೂ ಒಮ್ಮೆಯೂ ಡೆಲ್ಲಿ ತಂಡ ಐಪಿಎಲ್‌ ಟ್ರೋಫಿ ಗೆಲ್ಲದೇ ಇದ್ದರೂ, ಐಪಿಎಲ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ತನ್ನ ಮೌಲ್ಯವನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದೆ. ಅದಕ್ಕೆ ಪ್ರಮುಖ ಕಾರಣ ಕಿರಣ್‌ ಕುಮಾರ್‌ ಗ್ರಾಂಧಿ.

ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ನಿಂತು ಕೇರಳ ಪೊಲೀಸರ ಫೋಟೋಶೂಟ್‌!

ಜಿಎಂಆರ್ ಗ್ರೂಪ್‌ನ ಅಗಾಧ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳಲ್ಲಿ ಕಿರಣ್ ಗ್ರಾಂಧಿ ಒಬ್ಬರು. ಇಷ್ಟು ವರ್ಷಗಳಲ್ಲಿ ದೆಹಲಿ, ಹೈದರಾಬಾದ್, ಇಸ್ತಾಂಬುಲ್ ಮತ್ತು ಮಾಲೆಯಲ್ಲಿನ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಭದ್ರಪಡಿಸುವಲ್ಲಿ ಗ್ರಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಸಿ ಮಾಲೀಕರು ದೆಹಲಿಯ ಐಕಾನಿಕ್ ಟರ್ಮಿನಲ್ 3 ರ ನಿರ್ಮಾಣವನ್ನು ತ್ವರಿತಗೊಳಿಸಿದ್ದಲ್ಲದೆ, ಸುಮಾರು 1,200 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಜಿಎಂಆರ್‌ನ ನಗರ ಮೂಲಸೌಕರ್ಯ ಮತ್ತು ಹೆದ್ದಾರಿಗಳ ವಿಭಾಗದ ಅಧ್ಯಕ್ಷರಾಗಿ ಮಹತ್ವದ ಪೋರ್ಟ್‌ಫೋಲಿಯೊವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಅಹಂ ಸಮಸ್ಯೆ, ಕರ್ನಲ್‌ ಆಗಲು ಅವರು ಅರ್ಹರಲ್ಲ: ಟಾಪ್‌ ಜನರಲ್‌ ವರದಿ

ಗ್ರಾಂಧಿ ಕೇವಲ ಐಪಿಎಲ್‌ ಮೂಲಕ ಮಾತ್ರವೇ ಹೆಸರು ಮಾಡಿಲ್ಲ. ವಿವಿಧ ಸ್ಪೋರ್ಟ್ಸ್‌ ಉದ್ಯಮಗಳನ್ನೂ ಹೆಸರು ಮಾಡಿದ್ದಾರೆ. ತಮ್ಮ ವ್ಯಾಪಾರದ ಕುಶಾಗ್ರಮತಿಗೆ ಹೆಸರುವಾಸಿಯಾಗಿರುವ ಕಿರಣ್ ಗ್ರಾಂಧಿ ಅವರು GMR ಗುಂಪಿನಲ್ಲಿ ಮೂಲಸೌಕರ್ಯ, ಕ್ರೀಡೆ ಮತ್ತು ಹಣಕಾಸು ಖಾತೆಗಳನ್ನು ಸಲೀಸಾಗಿ ನಿರ್ವಹಣೆ ಮಾಡುತ್ತಿದ್ದಾರೆ.