ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!
ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ ನಿಜ. ಆದರೆ ಒಂದು ವಿಭಾಗದಲ್ಲಿ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಸಾಧನೆ ಮಾಡಿದ ನೆದರ್ಲೆಂಡ್ ಕ್ರಿಕೆಟಿಗ ಕೊಹ್ಲಿ ಹಾಗೂ ಇತರ ಕ್ರಿಕೆಟಿಗರಲ್ಲಿ ಕ್ಷಮೆ ಕೇಳಿದ್ದಾರೆ.
ನೆದರ್ಲೆಂಡ್(ಅ.04): ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿಶ್ವದ ಅಗ್ರ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಹ್ಲಿಗೆ ನೆದರ್ಲೆಂಡ್ ಕ್ರಿಕೆಟಿಗ ಶಾಕ್ ನೀಡಿದ್ದಾರೆ. ಇಷ್ಟೇ ಅಲ್ಲ ಕೊಹ್ಲಿ ಸೇರಿದಂತೆ ಟಾಪ್ ಕ್ಲಾಸ್ ಕ್ರಿಕೆಟಿಗರನ್ನು ಹಿಂದಿಕ್ಕಿದ ನೆದರ್ಲೆಂಡ್ ಕ್ರಿಕೆಟಿಗ ಕ್ಷಮೆ ಕೂಡ ಕೇಳಿದ್ದಾರೆ.
ಇದನ್ನೂ ಓದಿ: ICC ನೂತನ ಏಕದಿನ ಶ್ರೇಯಾಂಕ ಪ್ರಕಟ; ಟೀಂ ಇಂಡಿಯಾ ಆಟಗಾರರೇ ನಂ.1
ಏಕದಿನ ಬ್ಯಾಟಿಂಗ್ ಸರಾಸರಿ ಪಟ್ಟಿಯಲ್ಲಿ ನೆದರ್ಲೆಂಡ್ ಕ್ರಿಕೆಟಿಗ ರ್ಯಾನ್ ಟೆನ್ ಡೊಶ್ಚಟೆ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ 2ನೇ ಹಾಗೂ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಬರ್ ಅಜಮ್ 3ನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಸರಾಸರಿಯಲ್ಲಿ ಮೊದಲ ಸ್ಥಾನ ಪಡೆದ ಡೊಶ್ಚಟೆ ಟ್ವೀಟ್ ಮೂಲಕ ಕೊಹ್ಲಿ, ಬಾಬರ್ ಅಜಮ್ ಹಾಗೂ ಇತರರ ಬಳಿಕ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ರೋಹಿತ್‌ಗೆ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದ ನಾಯಕ ಕೊಹ್ಲಿ..!
ಏಕದಿನದಲ್ಲಿ ಡೊಶ್ಚೆಟೆ ಬ್ಯಾಟಿಂಗ್ ಸರಾಸರಿ 67. 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 60.31 ಹಾಗೂ 3ನೇ ಸ್ಥಾನದಲ್ಲಿರುವ ಬಾಬರ್ ಅಜಮ್ 54.55 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಡೊಶ್ಚಟೆ ನೆದರ್ಲೆಂಡ್ ಪರ 33 ಏಕದಿನ ಪಂದ್ಯ ಆಡಿದ್ದು, 1541 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 67. ಏಕದಿನದಲ್ಲಿ 5 ಸೆಂಚುರಿ ಸಿಡಿಸಿದ್ದಾರೆ. ಈ ಪೈಕಿ 2 ಶತಕವನ್ನು 2011ರ ವಿಶ್ವಕಪ್ ಟೂರ್ನಿಯಲ್ಲಿ ದಾಖಲಿಸಿದ್ದಾರೆ. 2011ರಿಂದ 2015ರ ವರೆಗೆ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.