Asianet Suvarna News Asianet Suvarna News

Viral Video : ಅಜ್ಮಲ್-ಮಲೀಕ್ ಅವರ ಐಕಾನಿಕ್ ಕ್ಯಾಚ್ ನೆನಪಿಸಿದ ಹಸ್ನಾಯಿನ್-ಇಫ್ತಿಕಾರ್!

ವೆಸ್ಟ್ ಇಂಡೀಸ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಘಟನೆ
ತೀರಾ ಸುಲಭದ ಕ್ಯಾಚ್ ಬಿಟ್ಟ ಹಸ್ನಾಯಿನ್-ಇಫ್ತಿಕಾರ್
ಅಜ್ಮಲ್-ಮಲೀಕ್ ಅವರ ಐಕಾನಿಕ್ ಕ್ಯಾಚ್ ಡ್ರಾಪ್ ನೆನಪಿಸಿದ್ರು ಅಂತಾ ಕಾಲೆಳೆದ್ರು ನೆಟ್ಟಿಗರು

Pak Cricketers Mohammad Hasnain and Iftikhar Ahmed recreate Ajmal-Malik's iconic catch drop san
Author
Karachi, First Published Dec 16, 2021, 11:59 PM IST

ಕರಾಚಿ (ಡಿ. 16): ಟಿ20 ಕ್ರಿಕೆಟ್ ನ ಮಾಜಿ ವಿಶ್ವ ಚಾಂಪಿಯನ್ ಗಳಾದ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (West Indies) ನಡುವಿನ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ (Pakistan) 7 ವಿಕೆಟ್ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್  (Clean Sweep) ಸಾಧನೆ ಮಾಡಿತು. ಆದರೆ, ಪಾಕಿಸ್ತಾನ ತಂಡದ ಕ್ಲೀನ್ ಸ್ವೀಪ್  ಸಾಧನೆಗೆ ಕಳಂಕ ತಂದಿದ್ದು ತಂಡದ ಕೆಟ್ಟ ಫೀಲ್ಡಿಂಗ್.  ಕರಾಚಿಯಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ನಿಕೋಲಸ್ ಪೂರನ್ (Nicholas Pooran) ನೇತೃತ್ವದ ವೆಸ್ಟ್ ಇಂಡೀಸ್ ತಂಡ 3 ವಿಕೆಟ್ ಗೆ 207 ರನ್ ಗಳ ದೊಡ್ಡ ಮೊತ್ತ ಪೇರಿಸಿದರೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ತಂಡ ಮೊಹಮದ್ ರಿಜ್ವಾನ್ (87 ರನ್, 45 ಎಸೆತ, 10 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಬಾಬರ್ ಅಜಮ್ (79 ರನ್, 53 ಎಸೆತ, 9 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್ ಗೆ ಆಡಿದ 158 ರನ್ ಗಳ ಜೊತೆಯಾಟದ ಸಹಾಯದಿಂದ 18.5 ಓವರ್ ಗಳಲ್ಲಿ  3 ವಿಕೆಟ್ ಗೆ 208 ರನ್ ಬಾರಿಸಿ ಗೆಲುವು ಕಂಡಿತು.

ಪಾಕಿಸ್ತಾನ ತಂಡದ ಅದ್ಭುತ ಬ್ಯಾಟಿಂಗ್ ಗಿಂತ ಹೆಚ್ಚಾಗಿ ತಂಡದ ಫೀಲ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ವೇಳೆ ಮೊಹಮದ್ ಹಸ್ನಾಯಿನ್ (Mohammad Hasnain) ಹಾಗೂ ಇಫ್ತಿಕಾರ್ ಅಹ್ಮದ್ (Iftikhar Ahmed) ತೀರಾ ಸುಲಭದ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ಟೀಕೆಗೆ ಗುರಿಯಾದರು. ಕ್ರಿಕೆಟ್ ನ ಅಭಿಮಾನಿಗಳು ಹಾಗೂ ಫಾಲೋವರ್ ಗಳು ಹಸ್ನಾಯಿನ್ ಹಾಗೂ ಇಫ್ತಿಕಾರ್ ಅಹ್ಮದ್ ಪಾಕಿಸ್ತಾನದ ಹಿರಿಯ ಕ್ರಿಕೆಟಿಗರಾದ ಸಯೀದ್ ಅಜ್ಮಲ್ (Saeed Ajmal) ಹಾಗೂ ಶೋಯೆಬ್ ಮಲೀಕ್ (Shoaib Malik ) ಅವರ ಐಕಾನಿಕ್ ಕ್ಯಾಚ್ ಡ್ರಾಪ್ ಅನ್ನು ಪುನರ್ ಸೃಷ್ಟಿಸಲು ಪ್ರಯತ್ನ ಮಾಡಿದ್ದಾರೆ ಎನ್ನುವ ಮೂಲಕ ಪಾಕ್ ಕ್ರಿಕೆಟಿಗರ ಕಾಲೆಳೆದಿದ್ದಾರೆ.

ಈ ಘಟನೆ ನಡೆದಿದ್ದು 8ನೇ ಓವರ್ ನಲ್ಲಿ ಶಾಮರಾ ಬ್ರೂಕ್ಸ್ (Shamarh Brooks), ಪಾಕಿಸ್ತಾನದ ಬೌಲಿಂಗ್ ಅನ್ನು ದಂಡಿಸುತ್ತಿರುವಾಗಲೇ ಮೊಹಮದ್ ನವಾಜ್ (Mohammad Nawaz) ಬೌಲಿಂಗ್ ಗೆ ಆಗಮಿಸಿದ್ದರು. 2ನೇ ಎಸೆತವನ್ನು ಬ್ರೂಕ್ಸ್ ಲಾಂಗ್ ಆನ್ ಹಾಗೂ ಡೀಪ್ ಮಿಡ್ ವಿಕೆಟ್ ನತ್ತ ಬಾರಿಸಿದ್ದರು. ಶಾಟ್ ಬಾರಿಸಿದ ಟೈಮಿಂಗ್ ಸರಿಯಾಗಿಲ್ಲದ ಕಾರಣ, ಹಸ್ನಾಯಿನ್ ಹಾಗೂ ಇಫ್ತಿಕಾರ್ ಅಹ್ಮದ್ ಗೆ ಅದು ಕ್ಯಾಚ್ ಆಗುವ ಹಾದಿಯಲ್ಲಿತ್ತು.
 


ಕ್ಯಾಚ್ ಪಡೆಯಲು ಲಾಂಗ್ ಆನ್ ನಿಂದ ಓಡಿ ಬಂದಿದ್ದ ಹಸ್ನಾಯಿನ್ ಇನ್ನೇನು ಚೆಂಡಿನ ಸಮೀಪ ಬರುವ ವೇಳೆಗೆ ಡೀಪ್ ಮಿಡ್ ವಿಕೆಟ್ ನಿಂದ ಓಡಿ ಬರುತ್ತಿದ್ದ ಇಫ್ತಿಕಾರ್ ಎದುರಾದರು. ಇಬ್ಬರೂ ಫೀಲ್ಡರ್ ಗಳೂ "ಆತ ಕ್ಯಾಚ್ ಹಿಡಿಯುತ್ತಾನೆ" ಎಂದು ಮನಸ್ಸಿನಲ್ಲೇ ಅಂದುಕೊಂಡು ಕ್ಯಾಚ್ ಅನ್ನು ಕೈಚೆಲ್ಲಿದರು. ಚೆಂಡಿಗಾಗಿ ಕೈ ಮುಂದೆ ಮಾಡಿದ್ದ ಇಫ್ತಿಕಾರ್, ಕ್ಯಾಚ್ ಬಿಟ್ಟ ಬಳಿಕ ಹಸ್ನಾಯಿನ್ ರನ್ನು ನೋಡಿ ಬೇಸರ ವ್ಯಕ್ತಪಡಿಸಿದ ವಿಡಿಯೋಗಳು ಜಾಲ ತಾಣದಲ್ಲಿ ಹರಿದಾಡುತ್ತಿವೆ.

T20 World Cup Ind vs Pak ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್‌ಗೆ ಟೀಂ ಇಂಡಿಯಾ ಹೆದರಿತ್ತು..!
ವೆಸ್ಟ್ ಇಂಡೀಸ್ ತಂಡದ ವಿರುದ್ಧ ಏಕದಿನ ಪಂದ್ಯವೊಂದರಲ್ಲಿ ಸಯೀದ್ ಅಜ್ಮಲ್ ಹಾಗೂ ಶೋಯೆಬ್ ಮಲೀಕ್ ಇಂಥದ್ದೇ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದರು. ಆ ವಿಡಿಯೋವನ್ನು ಬಳಸಿಯೇ ಇಂದಿಗೂ ಪಾಕಿಸ್ತಾನ ತಂಡದ ಫೀಲ್ಡಿಂಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹಾಗೂ ಮೀಮ್ಸ್ ಗಳನ್ನು ಮಾಡಲಾಗುತ್ತದೆ. ಇದರ ನಡುವೆ ಹಸ್ನಾಯಿನ್ ಹಾಗೂ ಇಫ್ತಿಕಾರ್ ಮತ್ತೊಮ್ಮೆ ಅದೇ ರೀತಿಯ ದೃಶ್ಯವನ್ನು ಪುನರಾವರ್ತನೆ ಮಾಡುವ ಮೂಲಕ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.

 

 

Follow Us:
Download App:
  • android
  • ios