Asianet Suvarna News Asianet Suvarna News

Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ನೇಮಕ

* ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ಆಯ್ಕೆ

* ಆಸೀಸ್ ಉಪನಾಯಕನಾಗಿ ಸ್ಟೀವ್ ಸ್ಮಿತ್ ನೇಮಕ

* ಆ್ಯಷಸ್ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಹೊಸ ನಾಯಕ ಆಯ್ಕೆ

Pacer Pat Cummins appointed Australian Test Captain Steve Smith named deputy kvn
Author
Bengaluru, First Published Nov 26, 2021, 5:36 PM IST
  • Facebook
  • Twitter
  • Whatsapp

ಮೆಲ್ಬರ್ನ್‌(ನ.26): ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ (Pat Cummins), ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ 47ನೇ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಅನುಭವಿ ಆಟಗಾರ ಸ್ಟೀವ್ ಸ್ಮಿತ್ (Steve Smith) ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟಿಮ್ ಪೈನ್ (Tim Paine) ದಿಢೀರ್ ರಾಜೀನಾಮೆ ನೀಡಿ ಒಂದು ವಾರದ ಬಳಿಕ ಹೊಸ ನಾಯಕನ ನೇಮಕವಾಗಿದೆ. ಡಿಸೆಂಬರ್ 08ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯಲ್ಲಿ (Ashes Test Series) ಪ್ಯಾಟ್ ಕಮಿನ್ಸ್‌ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ಯಾಟ್ ಕಮಿನ್ಸ್‌ ಕಳೆದ ಎರಡು ವರ್ಷಗಳಿಂದಲೂ ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಇದೀಗ ಕಮಿನ್ಸ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡದ (Australian Test Team) ಪೂರ್ಣಾವಧಿ ನಾಯಕರಾದ ಮೊದಲ ವೇಗದ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಆ್ಯಷಸ್ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಟಿಮ್‌ ಪೈನ್ ಮೇಲೆ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಫೋಟೋ ಹಾಗೂ ಸಂದೇಶ (Sexting Scandal) ರವಾನಿಸಿದ ಪ್ರಕರಣದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ಚುರುಕುಗೊಳಿಸಿತ್ತು. ಇದರ ಬೆನ್ನಲ್ಲೇ ಟಿಮ್ ಪೈನ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಟಿಮ್‌ ಪೈನ್‌ ಅನಿರ್ದಿಷ್ಟಾವಧಿಯವರೆಗೆ ಬ್ರೇಕ್‌ ಪಡೆದಿದ್ದು, ಆ್ಯಷಸ್ ಸರಣಿಗೂ ಅಲಭ್ಯರಾಗಿದ್ದಾರೆ.

ಆ್ಯಷಸ್ ಸರಣಿಗೂ ಮುನ್ನ ನಾನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿರುವುದು ನನ್ನ ಪಾಲಿಗೆ ಸಿಕ್ಕ ದೊಡ್ಡ ಗೌರವವಿದು. ಕಳೆದ ಕೆಲವು ವರ್ಷಗಳಿಂದ ಟಿಮ್ ಪೈನ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದಂತೆಯೇ ನಾನು ನಾಯಕನಾಗಿ ತಂಡವನ್ನು ಮುನ್ನಡೆಸುವ ವಿಶ್ವಾಸವಿದೆ. ನಾನು ಹಾಗೂ ಸ್ಟೀವ್ ಸ್ಮಿತ್ ಜತೆಗೂಡಿ ಹಿರಿ-ಕಿರಿಯ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಂಡವನ್ನು ಮುನ್ನಡೆಸಲಿದ್ದೇವೆ. ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿರುವುದಾಗಿ ಪ್ಯಾಟ್ ಕಮಿನ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sexting Scandal: ಆಸೀಸ್‌ ಟೆಸ್ಟ್ ನಾಯಕತ್ವಕ್ಕೆ ಟಿಮ್ ಪೈನ್‌ ದಿಢೀರ್ ರಾಜೀನಾಮೆ..!

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ನೇಮಿಸಿದ 5 ಸದಸ್ಯರನ್ನೊಳಗೊಂಡು ಸಮಿತಿಯು ಪ್ಯಾಟ್ ಕಮಿನ್ಸ್‌ ಹಾಗೂ ಸ್ಟೀವ್ ಸ್ಮಿತ್ ಅವರನ್ನು ಸಂದರ್ಶನ ನಡೆಸಿ. ಈ ಇಬ್ಬರು ಆಟಗಾರರ ಹೆಸರನ್ನು ಕ್ರಿಕೆಟ್‌ ಆಸ್ಟ್ರೇಲಿಯಾಗೆ (Cricket Australia) ಶಿಫಾರಸು ಮಾಡಿತು. ಈ ಸಮಿತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ, ಟೋನಿ ಡೊಡೆಮೈಡ್, ಮೆಲ್ ಜೋನ್ಸ್, ರಿಚರ್ಡ್‌ ಫ್ರಡೆಸ್ಟ್ರೈನ್‌ ಹಾಗೂ ನಿಕ್ ಹಾಕ್ಲೆ ಇದ್ದರು. ಇವರ ಶಿಫಾರಸಿನ ಮೇರೆಗೆ ಪ್ಯಾಟ್ ಕಮಿನ್ಸ್‌ ನಾಯಕ ಹಾಗೂ ಸ್ಟೀವ್ ಸ್ಮಿತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಯಿತು.

Ashes 2021: ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಮತ್ತೆ ಸ್ಟೀವ್ ಸ್ಮಿತ್‌ ನಾಯಕ ?

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಮತ್ತೊಮ್ಮೆ ಸ್ಟೀವ್ ಸ್ಮಿತ್‌ಗೆ ಆಯಕಟ್ಟಿನ ಹುದ್ದೆ ನೀಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ಮೊದಲು ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australian Cricket Team) ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೇಪ್‌ಟೌನ್ ಟೆಸ್ಟ್‌ (Capetown Test) ಪಂದ್ಯದ ವೇಳೆ ಬಾಲ್‌ ಟ್ಯಾಂಪರಿಂಗ್ (Ball Tampering) ಮಾಡಿ ಒಂದು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು. ಸ್ಟೀವ್ ಸ್ಮಿತ್ ಜತೆಗೆ ಉಪನಾಯಕರಾಗಿದ್ದ ಡೇವಿಡ್‌ ವಾರ್ನರ್‌ (David Warner) ಕೂಡಾ 12 ತಿಂಗಳು ಕ್ರಿಕೆಟ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದರು.
 

Follow Us:
Download App:
  • android
  • ios