Asianet Suvarna News Asianet Suvarna News

ಧೋನಿಯಿಂದ ಮಾತ್ರ ಚೆನ್ನೈಯನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯ: ಸೆಹ್ವಾಗ್

ಮೊದಲ ಕ್ವಾಲಿಫೈಯರ್ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ನಾಯಕನ ಗುಣಗಾನ ಮಾಡಿದ ವಿರೇಂದ್ರ ಸೆಹ್ವಾಗ್
ಧೋನಿಯಿಂದ ಮಾತ್ರ ಈ ತಂಡವನ್ನು ಫೈನಲ್‌ಗೇರಿಸಲು ಸಾಧ್ಯವೆಂದ ಸೆಹ್ವಾಗ್

Only MS Dhoni could have taken CSK to the final says Virender Sehwag kvn
Author
First Published May 24, 2023, 1:14 PM IST

ಚೆನ್ನೈ(ಮೇ.24): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಧೋನಿಯ ನಾಯಕತ್ವಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದ್ದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡಾ ಕ್ಯಾಪ್ಟನ್ ಕೂಲ್ ಅವರನ್ನು ಗುಣಗಾನ ಮಾಡಿದ್ದು, ಇಂತಹ ತಂಡವನ್ನು ಧೋನಿಯವರು ಮಾತ್ರ ಫೈನಲ್‌ಗೆ ಕೊಂಡೊಯ್ಯಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ತಂತ್ರಗಾರಿಕೆ ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 15 ರನ್‌ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. 

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಬಲಾಢ್ಯ ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ, ವಿರೇಂದ್ರ ಸೆಹ್ವಾಗ್, ಸೋಷಿಯಲ್ ಮೀಡಿಯಾದಲ್ಲಿ, "ಚೆನ್ನೈ ಸೂಪರ್ ಕಿಂಗ್ಸ್. ಎಂತಹ ಅದ್ಭುತ ತಂಡ. ಇರುವ ಬೌಲರ್‌ಗಳಲ್ಲೇ ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ನಾಯಕತ್ವ ತಂಡದಲ್ಲಿದೆ. ಧೋನಿಯವರಿಂದ ಮಾತ್ರ ಇಂತಹ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯ. ಈ ಕಾರಣಕ್ಕಾಗಿಯೇ ಅವರು ಎಲ್ಲರಿಂದ ಪ್ರೀತಿ, ವಿಶ್ವಾಸವನ್ನು ಪಡೆಯುತ್ತಾರೆ ಎಂದು ವೀರೂ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ ಡಾಟ್‌ ಬಾಲ್‌ಗೆ 500 ಗಿಡ ನೆಡಲಿರುವ ಬಿಸಿಸಿಐ..! ವಿನೂತನ ಯೋಜನೆ ಕೈಗೆತ್ತಿಕೊಂಡ ಶ್ರೀಮಂತ ಕ್ರಿಕೆಟ್ ಮಂಡಳಿ

ಇನ್ನು ಈ ಆವೃತ್ತಿಯ ಐಪಿಎಲ್ ಬಳಿಕ ಧೋನಿ ನಿವೃತ್ತಿಯಾಗಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬರುತ್ತಿರುವುದರ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ , "ನಾನು ಈಗಲೇ ಅದರ ಬಗ್ಗೆ ತೀರ್ಮಾನಿಸಿಲ್ಲ. ಈ ಬಗ್ಗೆ ತೀರ್ಮಾನಿಸಲು ಇನ್ನೂ 8-9 ತಿಂಗಳುಗಳು ಇವೆ. ಹಂಗೇನಿದ್ದರೂ ಡಿಸೆಂಬರ್ ವೇಳೆಗೆ ಆಲೋಚಿಸಿದರಾಯಿತು. ಈಗಲೇ ಯಾಕೆ ಅದರ ಬಗ್ಗೆ ತಲೆನೋವು ಮಾಡಿಕೊಳ್ಳಲಿ ನಾನು. ನನಗಿನ್ನು ಸಾಕಷ್ಟು ಕಾಲಾವಕಾಶವಿದೆ. ಆದರೆ ಒಂದಂತೂ ಸತ್ಯ, ನಾನು ಚೆನ್ನೈ ಸೂಪರ್ ಕಿಂಗ್ಸ್‌ ಜತೆಗೆ ಒಂದಲ್ಲ ಒಂದು ರೀತಿಯಲ್ಲಿ ಜತೆಗಿರುತ್ತೇನೆ ಎಂದು ಪಂದ್ಯ ಮುಕ್ತಾಯದ ಬಳಿಕ ಕ್ಯಾಪ್ಟನ್ ಕೂಲ್ ನುಡಿದಿದ್ದಾರೆ. ಈ ಮೂಲಕ ಸದ್ಯಕ್ಕಂತೂ ಧೋನಿ ನಿವೃತ್ತಿಯಿಲ್ಲ ಎನ್ನುವುದು ಬಹುತೇಕ ಖಚಿತವಾದಂತೆ ಆಗಿದೆ.

ಸದ್ಯ 16ನೇ ಐಪಿಎಲ್ ಆವೃತ್ತಿಯು ನಡೆಯುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 2023ನೇ ಸಾಲಿನ ಐಪಿಎಲ್ ಫೈನಲ್ ಪಂದ್ಯವು ಮಾರ್ಚ್ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಜರುಗಲಿದ್ದು, ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಜತೆ ಕಾದಾಡುವ ತಂಡ ಯಾವುದು ಎನ್ನುವ ಕುತೂಹಲ ಜೋರಾಗಿದೆ. 

Follow Us:
Download App:
  • android
  • ios