ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಭರ್ಜರಿ ಗೆಲುವು ಕಂಡಿದೆ. ಇದರ ನಡುವೆ ಬಿಸಿಸಿಐ ಟೀಮ್‌ ಇಂಡಿಯಾದ ಇನ್‌ಸೈಡ್‌ ವಿಡಿಯೋಅನ್ನು ರಿಲೀಸ್‌ ಮಾಡಿದ್ದು, ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ಗೆ ಪಂದ್ಯದ ಬೆಸ್ಟ್‌ ಫೀಲ್ಡರ್‌ ಅವಾರ್ಡ್‌ ನೀಡಲಾಗಿದೆ.

ಬೆಂಗಳೂರು (ಅ.16): ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಹೈವೋಲ್ಟೇಜ್‌ ಮುಖಾಮುಖಿಯಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟದಲ್ಲಿ ರೋಹಿತ್‌ ಶರ್ಮ ನೇತೃತ್ವದ ಟೀಮ್‌ ಇಂಡಿಯಾ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ಪಂದ್ಯದ ಬಳಿಕ ಟೀಂ ಇಂಡಿಯಾ ಡ್ರೆಸಿಂಗ್‌ ರೂಮ್‌ನ ಕ್ಷಣಗಳು ಹಾಗೂ ಅಲ್ಲಿನ ಸಂಭ್ರಮದ ವಿಡಿಯೋವನ್ನು ಪ್ರಸಾರ ಮಾಡಿದೆ. ಇದರ ನಡುವೆ ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌, ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ ಬೆಸ್ಟ್‌ ಫೀಲ್ಡಿಂಗ್‌ ಅವಾರ್ಡ್‌ ಕೊಟ್ಟಿದ್ದಾರೆ. ಈ ವೇಳೆ ಪಂದ್ಯದಲ್ಲಿ ರಾಹುಲ್‌ ಅವರ ವಿಕೆಟ್‌ ಕೀಪಿಂಗ್‌ ಹೇಗಿತ್ತು ಅನ್ನೋದನ್ನು ವಿಡಿಯೋ ಮೂಲಕವು ತಿಳಿಸಲಾಗಿದೆ. ಇದನ್ನು ನೋಡಿದ ತಂಡದ ಸಹ ಆಟಗಾರರು ರಾಹುಲ್‌ನ್ನು ಭರ್ಜರಿಯಾಗಿ ಕಿಚಾಯಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಶಸ್ತಿ ಕೊಡುವ ಮುನ್ನ ದಿಲೀಪ್‌, ಟೀಮ್‌ ಇಂಡಿಯಾದ ಬೌಲಿಂಗ್‌ ವಿಭಾಗವನ್ನು ಭರ್ಜರಿಯಾಗಿ ಶ್ಲಾಘನೆ ಮಾಡಿದರು. ಓವರ್‌ ಮುಕ್ತಾಯವಾದ ಬಳಿಕ ಈ ಆಟಗಾರರು ಅತ್ಯಂತ ವೇಗವಾಗಿ ತಾವಿದ್ದ ಫೀಲ್ಡಿಂಗ್‌ ಸ್ಥಳಕ್ಕೆ ತೆರಳಿದ್ದರು ಅನ್ನೋದನ್ನು ಗಮನಿಸಿದ್ದಾರೆ.

ಮೊಹಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಶಾರ್ದೂಲ್‌ ಠಾಕೂರ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ವಿಶೇಷವಾಗಿ ಮೆನ್ಶನ್‌ ಮಾಡುತ್ತೇನೆ. ಓವರ್ ಮುಗಿದ ಬಳಿಕ ಅವರು ವೇಗವಾಗಿ ತಮ್ಮ ಸ್ಥಾನಗಳಿಗೆ ಮರಳಿದರು. ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಉರುಳಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅದರೊಂದಿಗೆ ರವೀಂದ್ರ ಜಡೇಜಾ ಅವರ ವೇಗ ಹಾಗೂ ನಿಖರತೆಯ ಬಗ್ಗೆಯೂ ಟಿ.ದಿಲೀಪ್‌ ಮನಸಾರೆ ಮೆಚ್ಚಿದ್ದಾರೆ.

ಒಂದು ವಿಶೇಷವಾದ ಸಂಗತಿ ಏನೆಂದರೆ, ವಿಶ್ವದ ಅತ್ಯುತ್ತಮ ಫೀಲ್ಡರ್‌, ತಾವು ಹೆಸರಾಗಿರುವ ಅತ್ಯುತ್ತಮ ಕಾರ್ಮ ಮಾಡಲು ಮರಳಿದ್ದಾರೆ. ರವೀಂದ್ರ ಜಡೇಜಾ ತಮ್ಮ ವೇಗ ಹಾಗೂ ನಿಖರತೆಯೊಂದಿಗೆ ಫೀಲ್ಡಿಂಗ್‌ ಮಾಡೋದನ್ನು ನೋಡಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಟೀಮ್‌ ಇಂಡಿಯಾದ ಎಲ್ಲಾ ಆಟಗಾರರು ಮೆಚ್ಚಿ ಚಪ್ಪಾಳೆ ತಟ್ಟುತ್ತಾರೆ. ಕೊನೆಗೆ ಕೆಎಲ್ ರಾಹುಲ್ ಬಗ್ಗೆ ಮಾತನಾಡುವಾಗ, ವಿಕೆಟ್ ಕೀಪಿಂಗ್ ಅನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ ಎಂದು ಆರಂಭಿಸಿದ ಟಿ.ದಿಲೀಪ್‌ 31 ವರ್ಷದ ಕೆಎಲ್‌ ರಾಹುಲ್‌ ಬಹಳ ಅದ್ಭುತವಾಗಿ ಮೈದಾನದಲ್ಲಿ ಕಂಡಿದ್ದಾರೆ ಎಂದು ಹೇಳಿದರು. ಹೀಗೆ ಹೇಳುವಾಗಲೇ ಟೀಮ್‌ ಇಂಡಿಯಾದ ಎಲ್ಲಾ ಆಟಗಾರರು ರಾಹುಲ್‌ಗೆ ಮೆಚ್ಚುಗೆಯ ರೀತಿಯಲ್ಲಿ ಕಿರುಚಾಡಲು ಆರಂಭಿಸುತ್ತಾರೆ.

ವಿಡಿಯೋದ ಕೊನೆಯಲ್ಲಿ ಪ್ರಮುಖ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರ ಶ್ರೇಷ್ಠ ನಿರ್ವಹಣೆಯನ್ನು ದಿಲೀಪ್‌ ಶ್ಲಾಘಿಸಿದರು. ದಿನದಿಂದ ದಿನಕ್ಕೆ ಒಬ್ಬರ ಆಟದಲ್ಲಿ ಪ್ರಗತಿ ಕಾಣುತ್ತಿದೆ. ತಮ್ಮ ಬೆಸ್ಟ್‌ ಆಟಕ್ಕೆ ಶ್ರೇಯಸ್‌ ಅಯ್ಯರ್‌ ಹೆಸರುವಾಸಿಯಾಗಿದ್ದಾರೆ. ಇಂದು ಅವರ ನಿರ್ವಹಣೆ ಟಾಪ್‌ ಕ್ಲಾಸ್‌ ಆಗಿತ್ತು' ಎಂದು ಹೇಳುವುದರೊಂದಿಗೆ ದಿಲೀಪ್‌ ತಮ್ಮ ಮಾತು ಮುಗಿಸುತ್ತಾರೆ.
ಕೊನೆಯಲ್ಲಿ ಟಿವಿಯಲ್ಲಿ ಒಂದು ವಿಡಿಯೋ ಪ್ಲೇ ಮಾಡಿ ಟಿ.ದಿಲೀಪ್‌ ಬದಿಗೆ ಸರಿಯುತ್ತಾರೆ. ದ ಬೆಸ್ಟ್‌ ಫೀಲ್ಡರ್‌ ಅವಾರ್ಡ್ಸ್‌ ಗೋಸ್‌ ಟು ಎನ್ನುವ ಶಬ್ದಗಳು ಬಂದ ಬಳಿಕ ಕೆಎಲ್‌ ರಾಹುಲ್‌ ಅವರ ವಿಕೆಟ್‌ ಕೀಪಿಂಗ್ ಚಿತ್ರ ಬರುತ್ತದೆ. ಇದರ ಬೆನ್ನಲ್ಲಿಯೇ ಟೀಮ್‌ ಇಂಡಿಯಾದ ಉಳಿದ ಆಟಗಾರರು ಹಿಂದೆಂದೂ ನಾವು ಇಂಥ ವಿಕೆಟ್‌ ಕೀಪರ್‌ ನೋಡೇ ಇರಲಿಲ್ಲ ಎನ್ನುವ ರೀತಿಯಲ್ಲಿ ವರ್ತಿಸಲು ಆರಂಭಿಸಿದ್ದಾರೆ. ರಾಹುಲ್‌ರ ವಿಕೆಟ್‌ ಕೀಪಿಂಗ್‌ನ ವಿಡಿಯೋಗಳು ಪ್ರಸಾರವಾಗುತ್ತಿದ್ದಂತೆ, ಅಬ್ಬಾ.. ಎಂಥಾ ಫೀಲ್ಡಿಂಗ್‌, ಎಂಥಾ ವಿಕೆಟ್‌ ಕೀಪರ್‌ ಎನ್ನುವ ರೀತಿಯಲ್ಲಿ ತಮಾಷೆಯಾಗಿ ರಾಹುಲ್‌ ಬಳಿ ನೋಡುತ್ತಾರೆ. ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲರೂ ಭರ್ಜರಿಯಾಗಿ ಕಿಚಾಯಿಸಿದ್ದಾರೆ.

World Cup 2023: ಮೋದಿ ಸ್ಟೇಡಿಯಂನಲ್ಲಿ ಪಾಕ್‌ಗೆ ಬೆಂಡೆತ್ತಿದ ಭಾರತ, ದಾಖಲೆಗಳ ಸಾಮ್ರಾಜ್ಯ!

ಕೊನೆಗೆ ಶಾರ್ದೂಲ್‌ ಠಾಕೂರ್‌ ಬಂದು ಕೆಎಲ್‌ ರಾಹುಲ್‌ಗೆ ಗೋಲ್ಡ್‌ ಮೆಡಲ್‌ ಹಾಕುವಾಗ ವಿರಾಟ್‌ ಕೊಹ್ಲಿ ಅವರ ರಿಯಾಕ್ಷನ್‌ ಸಾಕಷ್ಟು ಗಮನಸೆಳೆದಿದೆ. ಒಟ್ಟಾರೆ, ಟೀಮ್‌ ಇಂಡಿಯಾದಲ್ಲಿ ಆಟಗಾರರ ನಡುವೆ ಒಳ್ಳೆಯ ಗೆಳೆತನ, ಬಾಂಧವ್ಯವಿದೆ ಅನ್ನೋದು ವಿಡಿಯೋ ನೋಡಿದರೆ ಗೊತ್ತಾಗುತ್ತದೆ.

'ನಮ್ಮಲ್ಲಿ ಪ್ರತಿಭೆಗಳಿಲ್ಲ..' ಪಾಕಿಸ್ತಾನದ ಬ್ಯಾಟಿಂಗ್‌ ನೋಡಿಯೇ ನಿರಾಸೆಯಾದ ಶೋಯೆಬ್‌ ಅಖ್ತರ್‌!

Scroll to load tweet…