ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯದಲ್ಲಿ ರಾಜಕೀಯದ ವಾಸನೆ..?

ಏಕದಿನ ವಿಶ್ವಕಪ್ ಆತಿಥ್ಯ ವಿಚಾರದಲ್ಲಿ ರಾಜಕೀಯ
ಹಲವು ರಾಜ್ಯಗಳಲ್ಲಿ ಕೈತಪ್ಪಿದ ವಿಶ್ವಕಪ್ ಆತಿಥ್ಯ

BCCI under fire as venues including that staged IND vs PAK semifinal in 2011 World Cup miss out in 2023 kvn

ಬೆಂಗಳೂರು(ಜೂ.29) ಏಕದಿನ ವಿಶ್ವಕಪ್​ಗೆ ವೇದಿಕೆ ಸಿದ್ದವಾಗಿದೆ. ಇನ್ನು ಮೂರು ತಿಂಗಳು ಮಹಾ ಟೂರ್ನಿಗೆ  ಬಾಕಿ ಇದೆ. ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯುವ ವರ್ಲ್ಡ್​ಕಪ್​ ವೇಳಾಪಟ್ಟಿಯೂ ರೆಡಿಯಾಗಿದೆ. ವೇಳಾಪಟ್ಟಿ ರಿಲೀಸ್ ಮುನ್ನ ಪಾಕಿಸ್ತಾನ ಕ್ಯಾತೆ ತೆಗೆದಿತ್ತು. ವೇಳಾಪಟ್ಟಿ ರಿಲೀಸ್ ಆದ್ಮೇಲೆ ಸೈಲೆಂಟ್ ಆಗಿದೆ. ಆದ್ರೆ ಈಗ ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ ರಾಜ್ಯ ಸಂಸ್ಥೆಗಳು ವೈಲೆಂಟ್ ಆಗಿವೆ. ಬಿಸಿಸಿಐ ಬಿಗ್ ಬಾಸ್​ಗಳ ವಿರುದ್ಧ ವಾಗ್ದಾಳಿ ಮಾಡ್ತಿವೆ.

ಧೋನಿ ತವರು ಜಾರ್ಖಂಡ್​ನಲ್ಲಿ​ ವಿಶ್ವಕಪ್ ಪಂದ್ಯಗಳಿಲ್ಲ..!

ಎಂ ಎಸ್ ಧೋನಿ. ಭಾರತ ಕಂಡ ಶ್ರೇಷ್ಠ ನಾಯಕ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಮಹಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನೂ ತಂದುಕೊಟ್ಟಿದ್ದಾರೆ. ಸಿಎಸ್​ಕೆ ತಂಡ ಐದು ಐಪಿಎಲ್ ಟ್ರೋಫಿ ಮತ್ತು ಎರಡು ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನೂ ಗೆಲ್ಲಿಸಿದ್ದಾರೆ. ಟೀಂ ಇಂಡಿಯಾವನ್ನ ಮೂರು ಮಾದರಿಯಲ್ಲೂ ನಂಬರ್ 1 ತಂಡವನ್ನಾಗಿಸಿದ್ದಾರೆ. 

ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಗಾಗಿ ಅರ್ಧ ದೇಶ ಸುತ್ತಲಿದೆ ಟೀಂ ಇಂಡಿಯಾ..!

ಇಂತಹ ಗ್ರೇಟ್ ಕ್ಯಾಪ್ಟನ್ ಧೋನಿ ತವರು ಜಾರ್ಖಂಡ್​​ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಯೋಜಿಸುವ ಕ್ರಿಕೆಟ್ ಸ್ಟೇಡಿಯಂ ಇದೆ. ಇಲ್ಲಿ ಭಾರತ 6 ಏಕದಿನ  ಪಂದ್ಯಗಳನ್ನಾಡಿದೆ. ಆದ್ರೆ ಈ ಸಲದ ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯ ಮಾತ್ರ ರಾಂಚಿ ಸ್ಟೇಡಿಯಂಗೆ ಸಿಕ್ಕಿಲ್ಲ. ವಿಶ್ವ ಕ್ರಿಕೆಟ್​ನಲ್ಲಿ ಭಾರತೀಯ ಕ್ರಿಕೆಟ್​​ನ ಕೀರ್ತಿ ಪತಾಕೆ ಹಾರಿದ ಆಟಗಾರನ ತವರಿನಲ್ಲಿ ಒಂದೂ ಪಂದ್ಯದ ಆತಿಥ್ಯ ಸಿಕ್ಕಿಲ್ಲ ಅನ್ನೋದೇ ಸೂಜಿಗದ ಸಂಗತಿ. 

ಕೇರಳದಲ್ಲೂ ಪಂದ್ಯಗಳಿಲ್ಲ, ಮೊಹಾಲಿಗೂ ಕೈಕೊಟ್ಟ ಬಿಸಿಸಿಐ..!

2011ರ ಏಕದಿನ ವಿಶ್ವಕಪ್​ನ 2ನೇ ಸೆಮಿಫೈನಲ್ ಪಂದ್ಯಕ್ಕೆ ಮೊಹಾಲಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಆದ್ರೆ ಈ ಸಲ ಮಾತ್ರ ಮೊಹಾಲಿಗೆ ವರ್ಲ್ಡ್​ಕಪ್ ಆತಿಥ್ಯ ಸಿಕ್ಕಿಲ್ಲ. 2011ರ ಸೆಮಿಸ್​ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನ ಸೋಲಿಸಿ, ಭಾರತ ಫೈನಲ್​ಗೆ ಎಂಟ್ರಿ ಪಡೆದಿದ್ದು ಮೊಹಾಲಿಯಲ್ಲೇ. ಉಭಯ ದೇಶದ ಪ್ರಧಾನಿಗಳು ಈ ಪಂದ್ಯವನ್ನ ವೀಕ್ಷಿಸಿದ್ದರು. ಆದ್ರೆ ಈ ಸಲ ಪಂಜಾಬ್ ಮಂದಿಗೆ ಭಾರಿ ನಿರಾಸೆಯಾಗಿದೆ. ಬಿಸಿಸಿಐ ವಿರುದ್ಧ ಪಂಜಾಬಿಗಳು ವಾಗ್ದಾಳಿ ಮಾಡಿದ್ದಾರೆ.

ಕ್ರಿಕೆಟ್ ರಾಜಧಾನಿ ಅಹಮದಾಬಾದ್ 

ಯೆಸ್, ಅಹ್ಮದಾಬಾದ್​ನಲ್ಲಿ ಉದ್ಘಾಟನಾ ಪಂದ್ಯ, ಫೈನಲ್ ಫೈಟ್ ಮತ್ತು ಇಂಡೋ-ಪಾಕ್ ವಾರ್. ಹೀಗೆ ಮೂರು ಮೂರು ಮಹತ್ವದ ಪಂದ್ಯಗಳಿಗೆ ನಮೋ ಸ್ಟೇಡಿಯಂ ಆತಿಥ್ಯ ವಹಿಸ್ತಿದೆ. ಇದರ ಜೊತೆ ಮತ್ತೆರಡು ಇತರೆ ಪಂದ್ಯಗಳೂ ನಡೆಯಲಿವೆ. ಇದಕ್ಕೆ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ಶಶಿ ತರೂರ್​, ಅಹಮದಾಬಾದ್ ಕ್ರಿಕೆಟ್ ರಾಜಧಾನಿ ಎಂದು ವಾಗ್ದಾಳಿ ನಡೆಸಿದ್ದಾರೆ. ತಿರುವನಂತರಪುರಕ್ಕೆ ವಿಶ್ವಕಪ್ ಪಂದ್ಯಗಳಿಲ್ಲ ಬಗ್ಗೆ ಆಘಾತವಾಗಿದೆ ಎಂದಿದ್ದಾರೆ.

ಕೇವಲ ಈ ಮೂರು ಸ್ಟೇಡಿಯಂ ಮಾತ್ರವಲ್ಲ, ಇಂದೋರ್​, ನಾಗ್ಪುರ, ರಾಜ್​ಕೋಟ್​​​ನಲ್ಲೂ ವಿಶ್ವಕಪ್ ಪಂದ್ಯಗಳಿಲ್ಲ. ಇದಕ್ಕೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ. ಸ್ಟೇಡಿಯಂಗಳನ್ನ ಆಯ್ಕೆ ಮಾಡುವಾಗ ನಮಗೆ ಐಸಿಸಿಯ ಒಪ್ಪಿಗೆ ಬೇಕು. ಜೊತೆಗೆ ಕೆಲ ಕ್ರೀಡಾಂಗಣಗಳು ಐಸಿಸಿಯ ಮಾನದಂಡಗಳನ್ನು ಪೂರೈಸಿಲ್ಲ ಎಂದು ಶುಕ್ಲಾ ಹೇಳಿದ್ದಾರೆ. ಒಟ್ನಲ್ಲಿ ಪಾಕ್ ಕ್ಯಾತೆ ಮುಗಿದಿದೆ, ಈಗ ರಾಜ್ಯ ಸಂಸ್ಥೆಗಳ ಕ್ಯಾತೆ ಸ್ಟಾರ್ಟ್​ ಆಗಿದೆ.

Latest Videos
Follow Us:
Download App:
  • android
  • ios