Asianet Suvarna News Asianet Suvarna News

ವಿರಾಟ್ ಕೊಹ್ಲಿ​​-ಬಾಬರ್ ಅಜಂ​ ಹುಟ್ಟುಹಬ್ಬದ ದಿನ ಮಹತ್ವದ ಪಂದ್ಯಗಳು..! ಗೆಲುವಿನ ಸಿಹಿ ಯಾರಿಗೆ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದಂದು ಮಹತ್ವದ ಪಂದ್ಯ
ಇಂಡೋ-ಪಾಕ್ ಪಂದ್ಯದ ದಿನವೇ ಬಾಬರ್ ಅಜಂ ಬರ್ತ್‌ ಡೇ

ICC ODI World Cup 2023 Virat Kohli and Babar Azam Birthday Special kvn
Author
First Published Jun 29, 2023, 5:46 PM IST

ಬೆಂಗಳೂರು(ಜೂ.29) ಈಗ ಇಡೀ ವಿಶ್ವದಲ್ಲಿ ಒನ್​ಡೇ ವರ್ಲ್ಡ್​ಕಪ್ ಹವಾ ಸ್ಟಾರ್ಟ್​ ಆಗಿದೆ. ಯಾವಾಗ ಐಸಿಸಿ, ವಿಶ್ವಕಪ್ ವೇಳಾಪಟ್ಟಿ ರಿಲೀಸ್​ ಮಾಡ್ತೋ ಆಗಿನಿಂದ ಮೆಗಾ ಟೂರ್ನಿಗೆ ಮತ್ತಷ್ಟು ಕಳೆ ಬಂದಿದೆ. ಇಂದಿಗೆ ಬರೋಬ್ಬರಿ 98 ದಿನಕ್ಕೆ ವರ್ಲ್ಡ್ಕಪ್​​ ಕಿಕ್ ಆಫ್ ಆಗಲಿದೆ. ಸ್ಟೇಡಿಯಂಗಳು ರೆಡಿಯಾಗ್ತಿವೆ. ತಂಡಗಳು ಸಿದ್ದವಾಗ್ತಿವೆ. 8 ಟೀಮ್ಸ್ ರೆಡಿ, ಇನ್ನೆರಡು ಟೀಮ್ಸ್​ ಯಾವ್ದು ಅನ್ನೋ ಕುತೂಹಲ ಬೇರೆ ಇದೆ. ಇಡೀ ವಿಶ್ವಕಪ್​ನಲ್ಲಿ ಮೇನ್ ಅಟ್ರ್ಯಾಕ್ಷನ್ ಅಂದ್ರೆ ಅಂದು ಇಂಡೋ-ಪಾಕ್ ಮ್ಯಾಚ್.

ಬದ್ಧವೈರಿಗಳ ಕಾಳಗ ಪಾಕ್ ಪಾಲಿಗೆ ಮಹತ್ವದ್ದು..!

ಏಕದಿನ ವಿಶ್ವಕಪ್​ನಲ್ಲಿ ಇದುವರೆಗೂ ಭಾರತದ ವಿರುದ್ಧ ಪಾಕಿಸ್ತಾನ ಒಂದೂ ಪಂದ್ಯ ಗೆದ್ದಿಲ್ಲ. ಹೌದು, ಒನ್​ಡೇ ವರ್ಲ್ಡ್​ಕಪ್ ಇತಿಹಾಸದಲ್ಲಿ ಎರಡು ಟೀಮ್ಸ್ 7 ಬಾರಿ ಮುಖಾಮುಖಿಯಾಗಿವೆ. ಈ 7 ಬಾರಿಯೂ ಟೀಂ ಇಂಡಿಯಾವೇ ಗೆದ್ದಿದೆ. 7-0ಯಿಂದ ಮುನ್ನಡೆಯಲ್ಲಿರುವ ಭಾರತವನ್ನ ಈ ಸಲ ಕಟ್ಟಿಹಾಕಲು ಪಾಕಿಸ್ತಾನ ಪ್ಲಾನ್ ಮಾಡಿದೆ. ಇಂಡೋ-ಪಾಕ್ ಪಂದ್ಯದ ದಿನವೇ ಪಾಕಿಸ್ತಾನ ನಾಯಕ ಬಾಬರ್ ಅಜಂ ಬರ್ತ್ ಡೇ ಬೇರೆ. ಈ ಜೋಶ್​​ನಲ್ಲೇ ಭಾರತವನ್ನ ಭಾರತದಲ್ಲೇ ಸೋಲಿಸಿ, ಇತಿಹಾಸ ನಿರ್ಮಿಸಲು ಎದುರು ನೋಡ್ತಿದೆ ಪಾಕ್.

ವಿರಾಟ್ ಕೊಹ್ಲಿ ವೃತ್ತಿಬದ್ಧತೆ ಕಳೆದ 15 ವರ್ಷದಲ್ಲಿ ಮತ್ತೊಬ್ಬ ಆಟಗಾರನಲ್ಲಿ ಕಂಡಿಲ್ಲ: ಯುವರಾಜ್ ಸಿಂಗ್

ಅಕ್ಟೋಬರ್ 15ರಂದು ಅಹಮದಾಬಾದ್​ನಲ್ಲಿ ಭಾರತ-ಪಾಕ್ ವಿಶ್ವಕಪ್ ಪಂದ್ಯ ನಡೆಯಲಿದೆ. ಅಂದು ಪಾಕಿಸ್ತಾನ ನಾಯಕ ಅಜಂ, 29ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ತಮ್ಮ ನಾಯಕನಿಗೆ ಗೆಲುವಿನ ಬರ್ತ್ ಡೇ ಗಿಫ್ಟ್ ಕೊಡಲು ಪಾಕ್ ಆಟಗಾರರು ಈಗಿನಿಂದಲೇ ಸಜ್ಜಾಗಿದ್ದಾರೆ. ಆಕಸ್ಮಾತ್​ ಬಾಬರ್​ಗೆ ಗೆಲುವಿನ ಗಿಫ್ಟ್ ಸಿಕ್ಕರೆ ರೋಹಿತ್ ಪಡೆಗೆ ನಿರಾಸೆಯಾಗಲಿದೆ. ಫಾರ್ ದ ಫಸ್ಟ್ ಟೈಮ್, ಒನ್​ಡೇ ವರ್ಲ್ಡ್​ಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಸೋತ ಮುಖಭಂಗ ಅನುಭವಿಸಲಿದೆ.

ಕೊಹ್ಲಿ ಬರ್ತ್​​ ಡೇ ದಿನ ಭಾರತ-ಆಫ್ರಿಕಾ ಕದನ

ನವೆಂಬರ್​ 5ರಂದು ವಿರಾಟ್ ಕೊಹ್ಲಿ 35ನೇ ಹುಟ್ಟುಹಬ್ಬ. ಅಂದೇ ಭಾರತದ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಭಾರತ-ಸೌತ್ ಆಫ್ರಿಕಾ ತಂಡಗಳ ನಡುವೆ ಲೀಗ್ ಪಂದ್ಯ ನಡೆಯಲಿದೆ. ಕಿಂಗ್ ಕೊಹ್ಲಿಯ 35ನೇ ವರ್ಷದ ಹುಟ್ಟುಹಬ್ಬಕ್ಕೆ ಸಹ ಆಟಗಾರರು ಗೆಲುವಿನ ಗಿಫ್ಟ್ ಕೊಡ್ತಾರಾ ಅನ್ನೋ ಕುತೂಹಲ ಈಗಿನಿಂದಲೇ ಹುಟ್ಟಿಕೊಂಡಿದೆ. ಇನ್ನು 2022ರ  ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಜನ್ಮದಿನದಂದು ಭಾರತ-ಜಿಂಬಾಬ್ವೆ ಪಂದ್ಯ ನಡೆದಿದ್ರೆ, 2021ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಯ ಬರ್ತ್​​ ಡೇ ದಿನ ಭಾರತ-ಸ್ಕಾಟ್‌ಲ್ಯಾಂಡ್‌ ಮ್ಯಾಚ್ ನಡೆದಿತ್ತು. ಆ ಎರಡು ಪಂದ್ಯವನ್ನೂ ಭಾರತ ಗೆದ್ದಿತ್ತು.

ಈ ವಿಶ್ವಕಪ್​ ಆಡೋ ಮೂಲಕ ವಿರಾಟ್ ಕೊಹ್ಲಿ, ತವರಿನಲ್ಲಿ ಎರಡು ಏಕದಿನ ವಿಶ್ವಕಪ್ ಆಡಿದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಸೇರಿದಂತೆ ನಾಲ್ವರ ರೆಕಾರ್ಡ್​ ಸರಿಗಟ್ಟಲಿದ್ದಾರೆ. ಈ ನಾಲ್ವರು ಭಾರತದಲ್ಲಿ ಎರಡು ಏಕದಿನ ವಿಶ್ವಕಪ್ ಆಡಿದ್ದರು.

Follow Us:
Download App:
  • android
  • ios