ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶ್ವಕಪ್‌ ಪಂದ್ಯ ನಡೆಯುತ್ತಿದೆ. ಈ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬನಿಗೆ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗದಂತೆ ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಬೆಂಗಳೂರು (ಅ.20): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಪಾಕಿಸ್ತಾನ ತಂಡದ ಗೆಲುವಿಗೆ ಆಸ್ಟ್ರೇಲಿಯಾ ತಂಡ ಬೃಹತ್‌ ಸವಾಲು ನೀಡಿದೆ. ಈ ನಡುವೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ನಡೆದಿರುವ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬೆಂಗಳೂರು ಪೊಲೀಸ್‌ ಹಾಗೂ ಪಾಕಿಸ್ತಾನ ಮೂಲದ ಯುವಕನ ನಡುವೆ ಘೋಷಣೆಯ ವಿಚಾರವಾಗಿ ಮಾತಿನ ಸಮರ ನಡೆದಿದೆ. ಪಾಕಿಸ್ತಾನ ತಂಡದ ಜೆರ್ಸಿ ಧರಿಸಿ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಬರುವ ಬೆಂಗಳೂರು ಪೊಲೀಸ್‌, ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗದೇ ಇರುವಂತೆ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಆತ, ನಾನು ಪಾಕಿಸ್ತಾನದ ವ್ಯಕ್ತಿ. ನನ್ನ ದೇಶಕ್ಕೆ ಜಿಂದಾಬಾದ್ ಎನ್ನದೇ ಮತ್ಯಾವ ದೇಶಕ್ಕೆ ಜಿಂದಾಬಾದ್‌ ಹೇಳಬೇಕು ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾನೆ. ಕ್ರೀಡಾಂಗಣದ ಅಪ್ಪರ್‌ ಸ್ಟ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ.

ನಾನ್ಯಾಕೆ ಪಾಕಿಸ್ತಾನ್‌ ಜಿಂದಾಬಾದ್‌ ಅಂತಾ ಹೇಳಬಾರದು? ಭಾರತ್‌ ಮಾತಾ ಕೀ ಜೈ ಅಂದರೆ ಒಕೆ, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ನಾನು ಯಾಕೆ ಹೇಳಬಾರದು? ಎಂದು ಪೊಲೀಸರಿಗೆ ಕೇಳುತ್ತಾನೆ. ಅದಕ್ಕೆ ಅವರು ನೀವು ಭಾರತ್‌ ಮಾತಾ ಜಿಂದಾಬಾದ್‌ ಎಂದು ಹೇಳಬಹುದು ಯಾವುದೇ ತೊಂದರೆ ಇಲ್ಲ ಆದರೆ, ಪಾಕಿಸ್ತಾನ್‌ ಜಿಂದಾಬಾದ್ ಹೇಳುವಂತಿಲ್ಲ ಎನ್ನುತ್ತಾರೆ. ಇದಕ್ಕೆ ಆ ವ್ಯಕ್ತಿ ಯಾಕೆ ನಾನು ಹೇಳಬಾರದು ಎಂದು ಮತ್ತೆ ಪ್ರಶ್ನೆ ಮಾಡಿದ್ದಾರೆ. ಅಹಮದಾಬಾದ್‌ನಲ್ಲೂ ಹೀಗೆ ಆಗಿರಲಿಲ್ಲ. ಪಾಕಿಸ್ತಾನದಿಂದ ಬಂದಿದ್ದೇನೆ. ಹಾಗಾಗಿ ಪಾಕಿಸ್ತಾನ ಜಿಂದಾಬಾದ್‌ ಅಂತಲೇ ಹೇಳುತ್ತೇನೆ ಅಲ್ಲವೇ ಎಂದು ಹೇಳಿದ್ದಾರೆ.

ನನ್ನ ಟೀಮ್‌ ಆಡುತ್ತಿದೆ. ನಾನು ಪಾಕಿಸ್ತಾನದವನು, ಪಾಕಿಸ್ತಾನ್‌ ಜಿಂದಾಬಾದ್‌ ಅಂತಾ ತಾನೇ ಕೂಗಬೇಕು. ಹಾಗೇ ಇರಿ, ನಾನು ವಿಡಿಯೋ ಮಾಡುತ್ತೇನೆ. ವಿಡಿಯೋದಲ್ಲಿ ಅದನ್ನೇ ಹೇಳಿ ಎನ್ನುವ ಯುವಕ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಲು ಆರಂಭಿಸುತ್ತಾನೆ. ಇದರ ಬೆನ್ನಲ್ಲಿಯೇ ಈ ಬಗ್ಗೆ ನಾನು ನನ್ನ ಅಧಿಕಾರಿಯ ಬಳಿಯಲ್ಲಿ ಮಾತನಾಡಿ ಬರುತ್ತೇನೆ ಎಂದು ಪೊಲೀಸ್‌ ಆಫೀಸರ್‌ ಹೊರಡುತ್ತಾರೆ. ಆಗ ಮೈದಾನ ಸಿಬ್ಬಂದಿ ಈಗ ನೀವು ಸುಮ್ಮನಾಗಿ ಪಂದ್ಯ ವೀಕ್ಷಿಸಿ ಎಂದು ಹೇಳುವಾಗ ವಿಡಿಯೋ ಕೊನೆಯಾಗಿದೆ.

ಇದನ್ನು ಪಾಕಿಸ್ತಾನದ ಕೆಲವು ಪತ್ರಕರ್ತರು ಹಂಚಿಕೊಂಡಿದ್ದಾರೆ. ಪಂದ್ಯದ ವೇಳೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗೋದಕ್ಕೆ ತಡೆದಿದ್ದಾರೆ. ಇದನ್ನು ನೋಡುವುದು ಬಹಳ ಆಘಾತಕಾರಿ ಎನಿಸುತ್ತದೆ. ಕ್ರೀಡೆ ಏನನ್ನು ಸಾಬೀತುಮಾಡಬೇಕೋ ಅದರ ವಿರುದ್ಧವಾಗಿ ಹೋಗುತ್ತಿದೆ ಎಂದು ಬರೆದಿದ್ದಾರೆ.

ಈ ಅಧಿಕಾರಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸುವುದಿಲ್ಲ. ಆದಾಗ್ಯೂ, ಈ ಅಭಿಮಾನಿಯನ್ನು ನಿಲ್ಲಿಸಲು ಅವರ ಸಮರ್ಥನೆ ಏನೇ ಇರಲಿ, ಅದು ಸರಿಯಾಗಿಲ್ಲ. ಅಭಿಮಾನಿ ಹೀಗೇ ಇರಬೇಕು ಎಂದು ಎಲ್ಲೂ ನಿಯಮವಿಲ್ಲ. ಭದ್ರತೆ ಅನ್ನೋದು ಅಭಿಮಾನಿಗಳಿಗೆ ಆಟಗಳನ್ನು ಆನಂದಿಸಲು ಅನುವು ಮಾಡಿಕೊಡಬೇಕು. ಅವರನ್ನೇ ತಡೆಯುವುದಲ್ಲ. ಕ್ರಿಕೆಟ್ ಜನರನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಬೆಂಬಲಿಸುವ ಹಕ್ಕು ಪ್ರತಿಯೊಬ್ಬ ಅಭಿಮಾನಿಗೂ ಇದೆ ಎಂದು ನಾವು ಅರಿತುಕೊಳ್ಳಲು ಇದು ಒಂದು ಕ್ಷಣವಾಗಿದೆ.

ವಿಶ್ವಕಪ್‌ ಪಂದ್ಯದ ವೇಳೆ ಶುಭ್‌ಮನ್‌ ಗಿಲ್‌, ಕಾಲರ್‌ನಲ್ಲಿ ಗೋಲ್ಡ್‌ ಕಾಯಿನ್‌ ಬ್ಯಾಡ್ಜ್‌ ಧರಿಸಿದ್ದೇಕೆ?

ಬಿಸಿಸಿಐ ಹಾಗೂ ಐಸಿಸಿ ಈ ವಿಚಾರದ ಬಗ್ಗೆ ಗಮನ ನೀಡಬೇಕು. ಇದರಿಂದಾಗಿ ಎಲ್ಲಾ ದೇಶದ ಅಭಿಮಾನಿಗಳು ಸುರಕ್ಷತೆಯ ಭಾವದಿಂದಲೇ ಪಂದ್ಯವನ್ನು ಮೈದಾನದಲ್ಲಿ ಕುಳಿತು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಪಾಕಿಸ್ತಾನದ ಮಾಮಿನ್‌ ಸಕೀಬ್‌ ಎನ್ನುವವರು ಬರೆದಿದ್ದಾರೆ.

World Cup 2023: ಶುಬ್ಮನ್ ಗಿಲ್‌ಗೆ ಚಿಯರ್ ಮಾಡಿದ ಸಾರಾ ತೆಂಡೂಲ್ಕರ್ ವೀಡಿಯೋ ವೈರಲ್‌

Scroll to load tweet…