Asianet Suvarna News Asianet Suvarna News

ವಿಶ್ವಕಪ್‌ ಪಂದ್ಯದ ವೇಳೆ ಶುಭ್‌ಮನ್‌ ಗಿಲ್‌, ಕಾಲರ್‌ನಲ್ಲಿ ಗೋಲ್ಡ್‌ ಕಾಯಿನ್‌ ಬ್ಯಾಡ್ಜ್‌ ಧರಿಸಿದ್ದೇಕೆ?

ಭಾರತ ತಂಡ ಗುರುವಾರ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಗೆಲುವು ಕಂಡಿತು. ಶುಭ್‌ಮನ್‌ ಗಿಲ್‌ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಆದರೆ, ಗಿಲ್‌ ಬ್ಯಾಟಿಂಗ್‌ ವೇಳೆ ಅವರ ಆಟಕ್ಕಿಂತ ಕಾಲರ್ ಮೇಲೆ ಧರಿಸಿದ್ದ ಚಿನ್ನದ ಬ್ಯಾಡ್ಜ್‌ ಮೇಲೆ ಹೆಚ್ಚಿನವರ ಗಮನ ಹೋಗಿದೆ.
 

ODI World Cup 2023 Shubman Gill was wearing a Gold coin on his collar while batting in Pune game san
Author
First Published Oct 20, 2023, 6:12 PM IST

ಬೆಂಗಳೂರು (ಅ.20): ಟೀಮ್‌ ಇಂಡಿಯಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಗುರುವಾರದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ವಿರಾಟ್‌ ಕೊಹ್ಲಿ ವಿಶ್ವಕಪ್‌ನಲ್ಲಿ ತಮ್ಮ ಮೂರನೇ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 48ನೇ ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ಆದರೆ, ರೋಹಿತ್‌ ಶರ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ 24 ವರ್ಷದ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಈ ವೇಳೆ ಗಿಲ್‌ ಅವರ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಅವರ ಧರಿಸಿದ್ದ ಚಿನ್ನದ ಬಣ್ಣದ ಬ್ಯಾಡ್ಜ್‌ ಎಲ್ಲರ ಗಮನ ಸೆಳೆದಿದೆ. ಹೌದು ಆಡುವ ವೇಳೆ ಗಿಲ್ ತಮ್ಮ ಜೆರ್ಸಿಯ ಕಾಲರ್‌ನಲ್ಲಿ ಗೋಲ್ಡ್‌ ಬ್ಯಾಡ್ಜ್‌ಅನ್ನು ಧರಿಸಿದ್ದರು. ಅದಕ್ಕೆ ಕಾರಣವೇನು ಅನ್ನೋದರ ವಿವರ ಇಲ್ಲಿದೆ. ಉದಯೋನ್ಮುಖ ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಶುಭ್‌ಮನ್‌ ಗಿಲ್‌, 257 ರನ್‌ಗಳ ಚೇಸಿಂಗ್‌ ವೇಳೆ ರೋಹಿತ್‌ ಶರ್ಮ ಅವರೊಂದಿಗೆ ಉತ್ತರಮ ಆರಂಭ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 88 ರನ್‌ ಜೊತೆಯಾಟವಾಡಿತ್ತು. ಆ ಬಳಿಕ ಕೊಹ್ಲಿ ಜೊತೆಗೂಡಿದ ಗುಲ್‌, 55 ಎಸೆತಗಳಲ್ಲಿ 53 ರನ್‌ ಸಿಡಿಸುವ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದ್ದರು.

ವಿಶ್ವಕಪ್‌ನಲ್ಲಿ ತಾವು ಆಡಿದ 2ನೇ ಪಂದ್ಯದಲ್ಲಿ ಮಿಂಚಿನ ಆಟವಾಡುವ ಮೂಲಕ ಗಿಲ್‌ ಎಲ್ಲರ ಗಮನಸೆಳೆದರು. ಆದರೆ, ಪ್ರೇಕ್ಷಕರು ಮಾತ್ರ ಗಿಲ್‌ ಜರ್ಸಿಯ ಕಾಲರ್‌ನಲ್ಲಿ ನಾಣ್ಯದ ರೀತಿಯ ಸಣ್ಣ ಕಾಯಿನ್‌ನ ಬಗ್ಗೆ ಕುತೂಹಲ ಹೊಂದಿದ್ದರು. ಗಿಲ್‌ ಯಾಕಾಗಿ ಇದನ್ನು ಧರಿಸಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಕೆಲವರು ಬಹುಶಃ ಲಕ್ಕಿ ಚಾರ್ಮ್‌ ಎನ್ನುವ ಕಾರಣಕ್ಕಾಗಿ ಗಿಲ್‌ ಇದನ್ನು ಧರಿಸಿರುವ ಸಾಧ್ಯತೆ ಇದೆ ಎಂದಿದ್ದರು. ಆದರೆ, ಇದರ ಹಿಂದಿನ ಸತ್ಯವೇ ಬೇರೆ.

ಐಸಿಸಿ ಕೆಲವು ವರ್ಷಗಳಿಂದ ತಿಂಗಳ ಆಟಗಾರ ಎನ್ನುವ ಶ್ರೇಯವನ್ನು ಗುರುತಿಸುತ್ತಿದೆ. ಅದರಂತೆ ಸೆಪ್ಟೆಂಬರ್‌ ತಿಂಗಳ ಐಸಿಸಿ ಆಟಗಾರ ಗೌರವವನ್ನು ಶುಭ್‌ಮನ್‌ ಗಿಲ್‌ ಪಡೆದುಕೊಂಡಿದ್ದರು. ಅದಕ್ಕಾಗಿ ಐಸಿಸಿಯಿಂದ ಚಿನ್ನದ ಬಣ್ಣದ ನಾಣ್ಯದ ರೀತಿಯ ಬ್ಯಾಡ್ಜ್‌ಅನ್ನು ನೀಡಲಾಗಿದೆ. ಇದನ್ನೇ ಧರಿಸಿಕೊಂಡು ಅವರು ಆಟವಾಡಿದ್ದರು. ಟೀಮ್‌ ಇಂಡಿಯಾದ ಏಷ್ಯಾಕಪ್‌ ಅಭಿಯಾನದಲ್ಲಿ ಭರ್ಜರಿ ಇನ್ನಿಂಗ್ಸ್‌ಗಳ ಮೂಲಕ ಮಿಂಚಿದ್ದ ಶುಭ್‌ಮನ್‌ ಗಿಲ್‌ ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಅದ್ಭುತ ಆಟವಾಡುವ ಮೂಲಕ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಐಸಿಸಿ ಪುರುಷರ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಿಲ್ ಅವರ ಅದ್ಭುತ ಪ್ರದರ್ಶನವು ಅವರ ಅಸಾಧಾರಣ ಫಾರ್ಮ್‌ಗೆ ಸಾಕ್ಷಿಯಾಗಿದೆ.

ಇನ್ನು ಐಸಿಸಿಯ ಸೆಪ್ಟೆಂಬರ್‌ ತಿಂಗಳ ಆಟಗಾರ ಗೌರವ ಪಡೆದ ಶುಭ್‌ಮನ್‌ ಗಿಲ್‌, "ಸೆಪ್ಟೆಂಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನನಗೆ ಸಂತೋಷವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತು ತಂಡದ ಗೆಲುವಿನ ಉದ್ದೇಶಕ್ಕೆ ಕೊಡುಗೆ ನೀಡಲು ಇದು ಒಂದು ದೊಡ್ಡ ಭಾಗ್ಯವಾಗಿದೆ. ಈ ಪ್ರಶಸ್ತಿಯು ನನ್ನ ಶ್ರೇಷ್ಠತೆಯನ್ನು ಮುಂದುವರಿಸಲು ಮತ್ತಷ್ಟು ಪ್ರೇರೇಪಿಸುತ್ತದೆ. ದೇಶ ಹೆಮ್ಮೆಪಡುವಂತೆ ಅಡುತ್ತೇನೆ' ಎಂದು ಪ್ರಶಸ್ತಿ ಸ್ವೀಕರಿಸಿದ ಗಿಲ್ ಸಂತಸ ವ್ಯಕ್ತಪಡಿಸಿದ್ದರು.

ವಿರಾಟ್ ಕೊಹ್ಲಿ ಸ್ವಾರ್ಥಿ ನಾ? ಶತಕದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ ಕೆ ಎಲ್ ರಾಹುಲ್..!

ಏಷ್ಯಾಕಪ್‌ನಲ್ಲಿ ನೇಪಾಳ ಹಾಗೂ ಪಾಕಿಸ್ತಾನದ ವಿರುದ್ಧ ಅರ್ಧಶತಕ ಬಾರಿಸಿದ್ದ ಶುಭ್‌ಮನ್‌ ಗಿಲ್‌, ಬಾಂಗ್ಲಾದೇಶ ವಿರುದ್ಧ ಕೊಲಂಬೊದಲ್ಲಿ ಶತಕ ಬಾರಿಸುವ ಮೂಲಕ ತಂಡ ಏಷ್ಯಾಕಪ್‌ ಫೈನಲ್‌ಗೇರುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.

World Cup 2023: ಶುಬ್ಮನ್ ಗಿಲ್‌ಗೆ ಚಿಯರ್ ಮಾಡಿದ ಸಾರಾ ತೆಂಡೂಲ್ಕರ್ ವೀಡಿಯೋ ವೈರಲ್‌

Follow Us:
Download App:
  • android
  • ios