ಏಕದಿನದಲ್ಲಿ ಅತ್ಯಂತ ಕನಿಷ್ಠ ಮೊತ್ತ ದಾಖಲಾಗಿದೆ. ಈ ಅಪಖ್ಯಾತಿಗೆ ಅಮೆರಿಕ ತಂಡ ಗುರಿಯಾಗಿದೆ. ಕೇವಲ 35 ರನ್‌ಗೆ ಆಲೌಟ್ ಆಗಿದೆ. 

ಕಾಠ್ಮಂಡು(ಫೆ.13): ಅಮೆರಿಕ ತಂಡ ಬುಧವಾರ ನೇಪಾಳ ವಿರುದ್ಧ ಇಲ್ಲಿ ನಡೆದ ವಿಶ್ವಕಪ್‌ ಲೀಗ್‌ 2 ಪಂದ್ಯದಲ್ಲಿ 35 ರನ್‌ಗೆ ಆಲೌಟ್‌ ಆಗುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಜಂಟಿ ಕನಿಷ್ಠ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. 2004ರಲ್ಲಿ ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 35 ರನ್‌ಗೆ ಆಲೌಟ್‌ ಆಗಿ, ಕನಿಷ್ಠ ಮೊತ್ತದ ದಾಖಲೆಗೆ ಗುರಿಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಪುನಾರಾರಂಭವಾಗಲಿ ಎಂದ ಯುವಿ

ಲೆಗ್‌ ಸ್ಪಿನ್ನರ್‌ ಸಂದೀಪ್‌ ಲಮಿಚ್ಚಾನೆ 16 ರನ್‌ಗೆ 6 ವಿಕೆಟ್‌ ಕಬಳಿಸಿ ಗಮನ ಸೆಳೆದರು. ಸ್ಪಿನ್ನರ್‌ ಸುಶಾನ್‌ ಭಂಡಾರಿ ಇನ್ನುಳಿದ 4 ವಿಕೆಟ್‌ ಕಬಳಿಸಿದರು. ವಿಂಡೀಸ್‌ ಮೂಲದ ಆರಂಭಿಕ ಬ್ಯಾಟ್ಸ್‌ಮನ್‌ ಕ್ಸೇವಿಯರ್‌ ಮಾರ್ಷಲ್‌ (16) ಒಬ್ಬರೇ ಎರಡಂಕಿ ಮೊತ್ತ ದಾಖಲಿಸಿದ್ದು. 

ಇದನ್ನೂ ಓದಿ: 29 ಬ್ರ್ಯಾಂಡ್ ಜೊತೆ ಒಪ್ಪಂದ; ಕೊಹ್ಲಿಗೆ ಬರುತ್ತಿದೆ ಸಾವಿರ ಕೋಟಿ ಆದಾಯ!.

ಕೇವಲ 12 ಓವರಲ್ಲಿ ಅಮೆರಿಕ ಇನ್ನಿಂಗ್ಸ್‌ ಮುಕ್ತಾಯಗೊಂಡಿತು. ತವರಿನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಸರಣಿ ಆಡುತ್ತಿರುವ ನೇಪಾಳ, 2 ವಿಕೆಟ್‌ ಕಳೆದುಕೊಂಡರೂ ಕೇವಲ 5.2 ಓವರಲ್ಲಿ ಗುರಿ ತಲುಪಿತು. ಈ ಮೂಲಕ ನೇಪಾಲ ಭರ್ಜರಿ ಗೆಲುವು ದಾಖಲಿಸಿದರೆ, ಅಮೆರಿಕ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಗುರಿಯಾಯಿತು.