ದೆಹಲಿ(ಫೆ.11): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಹಾಗೂ ಶ್ರೇಷ್ಠ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಸ್ಟೈಲೀಶ್, ಹ್ಯಾಂಡ್ಸಮ್ ಹಂಕ್ ಕೊಹ್ಲಿ ಜಾಹೀರಾತುದಾರರಿಗೂ ಅಚ್ಚು ಮೆಚ್ಚು. ಹೀಗಾಗಿಯೇ ಕೊಹ್ಲಿ ಅತೀ ಹೆಚ್ಚು ಬ್ರ್ಯಾಂಡ್‌ಗಳ ಎಂಡೋರ್ಸಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ

ಪುಮಾ ಹಾಗೂ MRF ಕಂಪನಿ ಒಪ್ಪಂದ ಕೊಹ್ಲಿಗೆ ಗರಿಷ್ಠ ಆದಾಯ ತಂದುಕೊಟ್ಟಿದೆ. ಪುಮಾ 5 ವರ್ಷಕ್ಕೆ ಕೊಹ್ಲಿ ಜೊತೆ ಬರೋಬ್ಬರಿ 110 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಇನ್ನು  MRF  8 ವರ್ಷಕ್ಕೆ ಕೊಹ್ಲಿ 100 ಕೋಟಿ ರೂಪಾಯಿ ನೀಡಿದೆ. ಇನ್ನುಳಿದ ಕಂಪನಿಗಳ ಒಪ್ಪಂದ ಕೋಟಿಗಿಂತ ಕಡಿಮ ಇಲ್ಲ.

ಇದನ್ನೂ ಓದಿ: ಭಾರತದ ಟಾಪ್ ಸೆಲೆಬ್ರೆಟಿ ಯಾರು? ಸಮಿಕ್ಷೆ ವರದಿ ಬಹಿರಂಗ!..

ಪೂಮಾ, ರಾಂಗ್, ಚಿಸೆಲ್ ಜಿಮ್, ಮಾನ್ಯವರ್, ಉಬರ್, ಕೋಲ್ಗೇಟ್, ಅಮೇರಿಕನ್ ಟೂರಿಸ್ಟರ್ ಸೇರಿದಂತೆ ಕೊಹ್ಲಿ ಸದ್ಯ 29 ಬ್ರ್ಯಾಂಡ್ ಪ್ರಮೋಶನ್ ಮಾಡುತ್ತಿದ್ದಾರೆ. 

2019ರ ಸಾಲಿನಲ್ಲಿ ವಿರಾಟ್ ಕೊಹ್ಲಿ 252.72 ಕೋಟಿ ರೂಪಾಯಿ ಆದಾಯಗಳಿಸಿದ್ದಾರೆ. ಕೊಹ್ಲಿ ಒಟ್ಟು ಆದಾಯ 900 ಕೋಟಿ ರೂಪಾಯಿ. ಇನ್ನು ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಒಟ್ಟು ಆದಾಯ 1200 ಕೋಟಿ ರೂಪಾಯಿ.

ಇನ್ನು ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುಂಬೈನಲ್ಲಿ 35 ಕೋಟಿ ರೂಪಾಯಿ ಮನೆ ಹಾಗೂ ಗುರುಗಾಂವ್‌ನಲ್ಲಿ 80 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.