'ಆ ಬಗ್ಗೆ ನನಗ್ಯಾವ ವಿಷಾದವಿಲ್ಲ': ಬಾಂಗ್ಲಾ ಎದುರಿನ ಘಟನೆ ಬಗ್ಗೆ ತುಟಿಬಿಚ್ಚಿದ ಹರ್ಮನ್‌ಪ್ರೀತ್ ಕೌರ್
ಇಂಗ್ಲೆಂಡ್‌ನಲ್ಲಿ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಆಡುತ್ತಿರುವ ಹರ್ಮನ್‌ಪ್ರೀತ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ‘ಒಬ್ಬ ಆಟಗಾರ್ತಿಯಾಗಿ ಹೇಳಬೇಕೆನಿಸಿದ್ದನ್ನು ಹೇಳಿದ್ದೆ ಅಷ್ಟೇ. ತಪ್ಪು ಕಾಣಿಸಿದಾಗ ಸುಮ್ಮನಿರಲು ಸಾಧ್ಯವಿಲ್ಲ. ನನ್ನ ವರ್ತನೆ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರನ್ನೂ ಅವಮಾನಿಸಬೇಕು ಎನ್ನುವ ಉದ್ದೇಶ ನನ್ನದಾಗಿರಲಿಲ್ಲ’ ಎಂದಿದ್ದಾರೆ.
ಲಂಡನ್(ಆ.21): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಕಳೆದ ತಿಂಗಳು ಬಾಂಗ್ಲಾದೇಶ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾವನಾತ್ಮಕವಾಗಿ ಮೈದಾನದಲ್ಲಿಯೇ ಅಸಮಾಧಾನ ಹೊರಹಾಕಿದ್ದರ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದು, ಈ ರೀತಿಯ ವರ್ತನೆಯ ಬಗ್ಗೆ ತಮಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸದಲ್ಲಿ ಅಂಪೈರ್‌ಗಳ ವಿರುದ್ಧ ಸಿಟ್ಟಾಗಿ, ಅನುಚಿತವಾಗಿ ವರ್ತಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ತಮ್ಮ ವರ್ತನೆ ಬಗ್ಗೆ ವಿಷಾದವಿಲ್ಲ ಎಂದಿದ್ದಾರೆ. ಇಂಗ್ಲೆಂಡ್‌ನಲ್ಲಿ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಆಡುತ್ತಿರುವ ಹರ್ಮನ್‌ಪ್ರೀತ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ‘ಒಬ್ಬ ಆಟಗಾರ್ತಿಯಾಗಿ ಹೇಳಬೇಕೆನಿಸಿದ್ದನ್ನು ಹೇಳಿದ್ದೆ ಅಷ್ಟೇ. ತಪ್ಪು ಕಾಣಿಸಿದಾಗ ಸುಮ್ಮನಿರಲು ಸಾಧ್ಯವಿಲ್ಲ. ನನ್ನ ವರ್ತನೆ ಬಗ್ಗೆ ಯಾವುದೇ ವಿಷಾದವಿಲ್ಲ. ಯಾರನ್ನೂ ಅವಮಾನಿಸಬೇಕು ಎನ್ನುವ ಉದ್ದೇಶ ನನ್ನದಾಗಿರಲಿಲ್ಲ’ ಎಂದಿದ್ದಾರೆ.
ಏಷ್ಯಾಕಪ್‌ಗೆ ಇಂದು ಭಾರತ ಕ್ರಿಕೆಟ್ ತಂಡ ಆಯ್ಕೆ; ಯಾರಿಗೆಲ್ಲಾ ಸ್ಥಾನ?
ಅಂಪೈರ್ ನೀಡಿದ ಔಟ್ ತೀರ್ಪಿನ ಕುರಿತಂತೆ ಮೈದಾನದಲ್ಲಿಯೇ ಅಸಮಾಧಾನ ಹೊರಹಾಕಿದ್ದ ಹರ್ಮನ್‌ಪ್ರೀತ್ ಕೌರ್, ಆ ಬಳಿಕ ಅಂಪೈರ್ ವಿರುದ್ಧ ಸಿಟ್ಟಾಗಿ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಬಹಿರಂಗವಾಗಿಯೇ ಅಂಪೈರ್‌ಗಳನ್ನು ಟೀಕಿಸಿದರು. ‘ಮುಂದಿನ ಸರಿ ಬಾಂಗ್ಲಾದೇಶಕ್ಕೆ ಬರುವಾಗ ಕೆಟ್ಟ ಅಂಪೈರಿಂಗ್‌ಗೆ ಸಿದ್ಧರಾಗೇ ಬರಬೇಕು’ ಎಂದು ಹರ್ಮನ್ ಹೇಳಿದರು.
ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿ 2 ಪಂದ್ಯ ನಿಷೇಧ
ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದಕ್ಕೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2 ಪಂದ್ಯ ನಿಷೇಧ ಹೇರಿದೆ. ಹರ್ಮನ್‌ಪ್ರೀತ್ 4 ಋಣಾತ್ಮಕ ಅಂಕಗಳಿಗೆ ಗುರಿಯಾಗಿದ್ದಾರೆ. ನಿಯಮದ ಪ್ರಕಾರ 24 ತಿಂಗಳ ಅವಧಿಯಲ್ಲಿ 4ರಿಂದ 7 ಋಣಾತ್ಮಕ ಅಂಕ ಪಡೆದರೆ, ಅದು 2 ನಿಷೇಧ ಅಂಕಗಳಾಗಿ ಪರಿಗಣಿಸಲ್ಪಡುತ್ತದೆ. 2 ನಿಷೇಧ ಅಂಕಕ್ಕೆ ಗುರಿಯಾದರೆ ಆ ಆಟಗಾರ/ಆಟಗಾರ್ತಿಯನ್ನು 1 ಟೆಸ್ಟ್ ಅಥವಾ 2 ಏಕದಿನ ಅಥವಾ 2 ಟಿ20 ಪಂದ್ಯಗಳಿಗೆ(ಯಾವುದು ಮೊದಲೋ ಅದು) ನಿಷೇಧಿಸಲಾಗುತ್ತದೆ.
ಐರ್ಲೆಂಡ್ ಎದುರಿನ ಎರಡನೇ T20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್..? ಸಂಭಾವ್ಯ ತಂಡ ಇಲ್ಲಿದೆ
ಚೀನಾದಲ್ಲಿ ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ಏಷ್ಯನ್ ಗೇಮ್ಸ್ ನಡೆಯಲಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ನೀಡಲಾಗಿದೆ. ಹೀಗಾಗಿ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಹರ್ಮನ್‌ಪ್ರೀತ್ ಹೊರಗುಳಿಯಬೇಕಾಗಿರುವುದರಿಂದ ಏಷ್ಯನ್ ಗೇಮ್ಸ್‌ನ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಿಂದ ಹೊರಗುಳಿಯಲಿದ್ದಾರೆ.