2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವಿನಾ ಕಾರಣ ನನ್ನನ್ನು ಸಿಲುಕಿಸಲಾಗಿದೆ. ಪ್ರಮುಖರ ತಪ್ಪುಗಳನ್ನ ಮುಚ್ಚಿಹಾಕಲು ನನಗೆ ಅನ್ಯಾಯ ಮಾಡಲಾಗಿದೆ ಎಂದು ಶ್ರೀಶಾಂತ್ ಸುಪ್ರೀಂ ಕೋರ್ಟ್‌ನಲ್ಲಿ ಅಲವತ್ತುಕೊಂಡಿದ್ದಾರೆ. ಇಲ್ಲಿದೆ ಸುಪ್ರೀಂ ಕೋರ್ಟ್‌ನಲ್ಲಿ ಶ್ರೀಶಾಂತ್ ವಾದದ ಹೆಚ್ಚಿನ ವಿವರ.
ನವದೆಹಲಿ(ಫೆ.27): ಬಿಸಿಸಿಐನಿಂದ ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಎಸ್.ಶ್ರೀಶಾಂತ್ ಕಳಂಕ ಮುಕ್ತರಾಗಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಶ್ರೀಶಾಂತ್ ಭುದವಾರ (ಫೆ.27) ಕೋರ್ಟ್ ವಿಚಾರಣೆಗೆ ಹಾಜರಾದರು. ಇದೇ ವೇಳೆ ಬಿಸಿಸಿಐ ತನ್ನ ಮೇಲೆ ಆಧಾರವಿಲ್ಲದೆ ಫಿಕ್ಸಿಂಗ್ ಆರೋಪ ಹೋರಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!
2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್‌ನಲ್ಲಿ ನನ್ನ ಪಾತ್ರವಿಲ್ಲ. ಆದರೆ ಬಿಸಿಸಿಐ ಯಾವುದೇ ಆಧಾರವಿಲ್ಲದಿದ್ದರೂ ಆಜೀವ ನಿಷೇಧ ಹೇರಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ. ದೆಹಲಿ ಪೊಲೀಸರು ಕೂಡ ನನಗೆ ಹಿಂಸೆ ನೀಡಿದ್ದಾರೆ. ಫಿಕ್ಸಿಂಗ್ ಪಾತ್ರದ ಕುರಿತು ಹೇಳಿಕೆ ಪಡೆಯಲು ಇನ್ನಿಲ್ಲದ ಹಿಂಸೆ ನೀಡಿದ್ದರು ಎಂದು ಶ್ರೀಶಾಂತ್, ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಬಿಗ್‌ಬಾಸ್ 12: ಶ್ರೀಶಾಂತ್ ಬಿಚ್ಚಿಟ್ಟರು ಐಪಿಎಲ್ ಕಪಾಳ ಮೋಕ್ಷ ಪ್ರಕರಣ!
35 ವರ್ಷಗ ಶ್ರೀಶಾಂತ್ ಕ್ರಿಕೆಟ್ ಕಳೆದ 5- 6 ವರ್ಷಗಳಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಕ್ರಿಕೆಟ್ ಉತ್ತುಂಗಲ್ಲಿರುವಾಗ ಶ್ರೀ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದೆ. ಈಗಲೂ ಶ್ರೀಶಾಂತ್ ಬಿಸಿಸಿಐಗೆ ಬದ್ಧರಾಗಿದ್ದಾರೆ ಎಂದು ಶ್ರೀಶಾಂತ್ ವಕೀಲರಾದ ಸಲ್ಮಾನ್ ಖುರ್ಷಿದ್ ವಾದಿಸಿದರು. ಶ್ರೀಶಾಂತ್ ಸ್ಫಾಟ್ ಪಿಕ್ಸಿಂಗ್ ನಡೆಸಿರುವ ಕುರಿತು, ಹಣ ಪಡೆದುಕೊಂಡಿರುವ ಕುರಿತು ಯಾವುದೇ ದಾಖಲೆಗಳಿಲ್ಲ. ಆದರೆ ಶ್ರೀಶಾಂತ್ ಮೇಲೆ ನಿಷೇಧ ಶಿಕ್ಷೆ, ಮಾಲೀಕನ ಬೆಟ್ಟಿಂಗ್ ಪ್ರಕರಣಕ್ಕೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗೆ 2 ವರ್ಷ ನಿಷೇಧವನ್ನು ಬಿಸಿಸಿಐ ವಿಧಿಸಿದೆ. ಇಲ್ಲೇ ತಾರತಮ್ಯ ಮಾಡಲಾಗಿದೆ ಎಂದು ಖುರ್ಷಿದ್ ವಾದಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ !
2013ರ ಐಪಿಎಲ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಅನ್ನೋ ಆರೋಪದಡಿ ಶ್ರೀಶಾಂತ್ ಬಂಧಿಸಲಾಗಿತ್ತು. 2015ರಲ್ಲಿ ಶ್ರೀಶಾಂತ್ ಬಂಧನ ಮುಕ್ತರಾದರು. ಪಟಿಯಾಲಾ ಕೋರ್ಟ್‌ನಲ್ಲಿ ಶ್ರೀಶಾಂತ್ ಆರೋಪ ಮುಕ್ತರಾಗಿ ಹೊರಬಂದಿದ್ದಾರೆ. ಆದರೆ ಬಿಸಿಸಿಐ ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆಯನ್ನು ತೆರವುಗೊಳಿಸಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 27, 2019, 9:41 PM IST