ಕ್ರಿಕೆಟ್’ನಲ್ಲಿ ಕೆಲವು ಚಿತ್ರವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೈಜೀರಿಯಾದ ಬ್ಯಾಟ್ಸ್’ಮನ್ ಮಾಡಿದ ಘಟನೆ ಸ್ವತಃ ತಮ್ಮ ತಂಡದವರೇ ಬಿಕ್ಕಿ ಬಿಕ್ಕಿ ನಗುವಂತೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಅಬುಧಾಬಿ[ಅ.24]: ಬ್ಯಾಟಿಂಗ್ ಮಾಡುವುದನ್ನು ಬಿಟ್ಟು ಮೂತ್ರ ವಿಸರ್ಜನೆಗಾಗಿ ಡ್ರೆಸ್ಸಿಂಗ್ ರೂಮ್‌ಗೆ ಬ್ಯಾಟ್ಸ್‌ಮನ್ ಒಬ್ಬ ಓಡಿದ ಪ್ರಸಂಗ, ಮಂಗಳವಾರ ಇಲ್ಲಿ ನಡೆದ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯ ಪಂದ್ಯವೊಂದರಲ್ಲಿ ನಡೆದಿದೆ.
ಬಿಸಿಸಿಐಗೆ ಗಂಗೂಲಿ ಬಾಸ್, 'ದಾದಾಗಿರಿ'ಯ ಆ ದಿನಗಳು ಮತ್ತೆ ಬಂದಿವೆ
ಕೆನಡಾ ವಿರುದ್ಧದ ಪಂದ್ಯದಲ್ಲಿ ನೈಜೀರಿಯಾ ತಂಡದ ಬ್ಯಾಟ್ಸ್‌ಮನ್ ಸುಲೈಮಾನ್ ರನ್ಸೀವಿ, 7ನೇ ಓವರ್ ಮುಕ್ತಾಯಗೊಳ್ಳುತ್ತಿದ್ದಂತೆ ನಾಪತ್ತೆಯಾದರು. ಸಹ ಆಟಗಾರ, ಕೆನಡಾ ಆಟಗಾರರು, ಅಂಪೈರ್‌ಗಳು, ಡಗೌಟ್‌ನಲ್ಲಿದ್ದ ನೈಜೀರಿಯಾ ಆಟಗಾರರಿಗೆ ಸುಲೈಮಾನ್ ಎಲ್ಲಿ ಎನ್ನುವುದು ತಿಳಿಯಲಿಲ್ಲ. ಹೀಗಾಗಿ ನೈಜೀರಿಯಾ ನಾಯಕ ಅಡೆಮೊಲಾ ಒನಿಕೊಯಿ ಬ್ಯಾಟ್ ಮಾಡಲು ಮೈದಾನಕ್ಕಿಳಿದರು.
ಇಲ್ಲಿದೆ ನೋಡಿ ಆ ವಿಡಿಯೋ:
ಅಷ್ಟರಲ್ಲಿ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಬಂದ ಸುಲೈಮಾನ್, ಪ್ಯಾಡ್ ಕಟ್ಟಿ ಕ್ರೀಸ್ಗಿಳಿದರು. ಈ ಪ್ರಸಂಗ ಮೈದಾನದಲ್ಲಿದ್ದ ಪ್ರತಿಯೊಬ್ಬರಲ್ಲೂ ನಗು ತರಿಸಿತು. ಜತೆಗೆ ಈ ಪ್ರಸಂಗದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
